Maharashtra Assembly Election 2024: ಮಹಾರಾಷ್ಟ್ರ: "ಮಹಾ ಇತಿಹಾಸ" ಸೃಷ್ಟಿಸಿದ ಪಕ್ಷಗಳಿಗೆ ಈಗ ಅಸ್ತಿತ್ವದ ಪ್ರಶ್ನೆ, ಯಾಕೆ

ಮಹರಾಷ್ಟ್ರ ವಿಧಾನಸಭೆ ಚುನಾವಣೆ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮಾತ್ರವಲ್ಲ ಅಲ್ಲಿನ ಸ್ಥಳೀಯ ಹಾಗೂ ಸಣ್ಣ ಪಕ್ಷಗಳಿಗೂ ನಿರ್ಣಾಯಕವಾಗಿದೆ. ಅದರಲ್ಲೂ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದ ಶಿವಸೇನಾ ಹಾಗೂ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿಯ ನಾಯಕರಿಗಂತೂ ಇದು ಅತ್ಯಂತ ನಿರ್ಣಾಯಕ ಚುನಾವಣೆ ಯಾಕೆ ಎನ್ನುವ ವಿವರ ಇಲ್ಲಿದೆ.

ಮಹರಾಷ್ಟ್ರದಲ್ಲಿ ನವೆಂಬರ್‌ 20ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆ ಎಲ್ಲ ಪಕ್ಷಗಳಿಗೂ ನಿರ್ಣಾಯಕವಾಗಿದೆ. ಆದರೆ, ಶಿವಸೇನಾ (ಯುಬಿಟಿ ಉದ್ಧವ್‌ ಠಾಕ್ರೆ ಬಣ) ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯ (ಎನ್‌ಸಿಪಿ ಶರದ್‌ ಪವರ್‌ ಬಣ)ನಾಯಕರಾದ ಶರದ್‌ ಪವಾರ್ ಹಾಗೂ ಉದ್ಧವ್‌ ಠಾಕ್ರೆ ನಾಯಕರಿಗೆ ಇದು ಅತ್ಯಂತ ನಿರ್ಣಾಯಕ ಚುನಾವಣೆಯಾಗಿದೆ.

Maharashtra election is a question of political future for these parties

ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಹೈಡ್ರಾಮಗಳು ನಡೆದು ಹೋಗಿವೆ. ಅವುಗಳಲ್ಲಿ ಮುಖ್ಯವಾಗಿ ಎರಡು ಪ್ರಮುಖ ಪಕ್ಷಗಳ ವಿಭಜನೆ. ಈ ಪಕ್ಷಗಳು ಮಹಾರಾಷ್ಟ್ರದ ಇತಿಹಾಸದಲ್ಲಿ ತಮ್ಮದೇ ದಾಖಲೆಗಳನ್ನು ಸೃಷ್ಟಿ ಮಾಡಿವೆ. ಈ ಪಕ್ಷಗಳು ಇಲ್ಲದೆ ಮಹಾರಾಷ್ಟ್ರ ರಾಜಕೀಯವನ್ನು ನೆನಪಿಸಿಕೊಳ್ಳುವುದು ಸಹ ಕಷ್ಟ ಅನಿಸುವಂತಹ ವಾತಾವರಣ ಇದೆ. ಆದರೆ, ಶಿವಸೇನಾ ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷಗಳು ವಿಭಜನೆಯಾಗಿದೆ. ಈ ಎರಡೂ ಪಕ್ಷಗಳು ವಿಭಜನೆಯಾದ ಮೇಲೆ ಒಂದು ಬಣ ಮಹಾ ವಿಕಾಸ ಅಘಾಡಿಯಲ್ಲೂ ಇನ್ನೊಂದು ಬಣವು ಮಹಾಯುತಿಯಲ್ಲೂ ಗುರುತಿಸಿಕೊಂಡಿವೆ.

ಮಹಾಯುತಿ ಎಂದರೆ ಬಿಜೆಪಿ, ಶಿವಸೇನಾ (ಏಕನಾಥ್‌ ಶಿಂಧೆ ಬಣ) ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಅಜಿತ್‌ ಪವಾರ್‌ ಬಣ)ವಾಗಿದೆ. ಈ ಪಕ್ಷ ಇದೀಗ ಮಹಾರಾಷ್ಟ್ರದಲ್ಲಿ ಆಡಳಿತರೂಢ ಪಕ್ಷವಾಗಿದೆ. ಮಹಾವಿಕಾಸ ಅಘಾಡಿ ಎನ್ನುವುದು ವಿರೋಧ ಪಕ್ಷಗಳ ಒಕ್ಕೂಟವಾಗಿದ್ದು, ಇದರಲ್ಲಿ ಕಾಂಗ್ರೆಸ್‌, ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ (ಶರದ್‌ ಪವಾರ್‌) ಪಕ್ಷಗಳು ಇವೆ.

ಶಿವಸೇನಾ ಹಾಗೂ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷವು ಮಹಾರಾಷ್ಟ್ರದಲ್ಲಿ ಅತ್ಯಂತ ನಿರ್ಣಾಯಕ ಪಕ್ಷಗಳು ಎನ್ನುವ ಖ್ಯಾತಿಯನ್ನೇ ಗಳಿಸಿವೆ. ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯ ಶರದ್ ಪವಾರ್ (ಬಣ) ಅವರು ಮಹಾರಾಷ್ಟ್ರದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಉದ್ಧವ್‌ ಠಾಕ್ರೆ ಅವರು ಸಹ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಶರದ್‌ ಪವಾರ್‌ ಅವರು ರಾಷ್ಟ್ರ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು. ರಕ್ಷಣಾ ಸಚಿವರೂ ಆಗಿದ್ದರು. ಆದರೆ, ಈ ಎರಡೂ ಪಕ್ಷಗಳು ವಿಭಜನೆಯಾದ ಮೇಲೆ ಪ್ರಮುಖ ನಾಯಕರು ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.

ಪಕ್ಷಗಳ ವಿಭಜನೆ ಹಾಗೂ ಪ್ರಮುಖ ನಾಯಕರು ಪಕ್ಷ ಬಿಟ್ಟಿರುವುದು ಇದೀಗ ಶರದ್‌ ಪವಾರ್ ಹಾಗೂ ಉದ್ಧವ್‌ ಠಾಕ್ರೆ ಅವರು ಈ ಬಾರಿಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಮಾತ್ರವಲ್ಲ. ತಮ್ಮ ರಾಜಕೀಯ ಭವಿಷ್ಯ ಹಾಗೂ ಅಸ್ತಿತ್ವವನ್ನೂ ಉಳಿಸಿಕೊಳ್ಳುವ ಸವಾಲು ಇದೆ.

ಮಹಾರಾಷ್ಟ್ರ ಚುನಾವಣೆ: ಇನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ನವೆಂಬರ್‌ 20ರಂದು ಒಂದೇ ಹಂತದಲ್ಲಿ ನಡೆಯಲಿದೆ. ನವೆಂಬರ್‌ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+