ಏನಿಲ್ಲ ಏನಿಲ್ಲ.. ರಾಹುಲ್ ಗಾಂಧಿ ಕೊಟ್ಟಿದ್ರಲ್ಲಿ ಏನಿಲ್ಲ ಎಂದ ಬಿಜೆಪಿ!
ಮಹಾರಾಷ್ಟ್ರ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮವೂ ಜೋರಾಗಿದೆ. ನವೆಂಬರ್ 20ಕ್ಕೆ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ದೇಶದ ಪ್ರಮುಖ ಹಾಗೂ ದೊಡ್ಡ ರಾಜ್ಯಗಳಲ್ಲಿ ಒಂದಾಗಿದ್ದು, ಈ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಪ್ರತ್ಯೇಕವಾಗಿ ಒಂದಾಗಿವೆ. ಇದೀಗ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಮೇಲೆ ಮಹಾರಾಷ್ಟ್ರ ಬಿಜೆಪಿಯು ಗಂಭೀರ ಆರೋಪವೊಂದನ್ನು ಮಾಡಿದೆ. ಇದಕ್ಕೆ ಕಾಂಗ್ರೆಸ್ ಸಹ ತಿರುಗೇಟು ನೀಡಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಕೆಂಪು ಬಣ್ಣದ ಸಂವಿಧಾನ (ಚಿಕ್ಕ ಗಾತ್ರ) ಪುಸ್ತಕವನ್ನು ರಾಹುಲ್‌ಗಾಂಧಿ ಅವರು ಪ್ರದರ್ಶಿಸಿರುವುದನ್ನು ನೀವು ನೋಡಿಯೇ ಇರುತ್ತೀರಿ. 2024ನೇ ಸಾಲಿನ ಲೋಕಸಭೆ ಚುನಾವಣೆ ಪೂರ್ವದಿಂದಲೂ ಪ್ರಮುಖ ಸಭೆ ಹಾಗೂ ಸಮಾರಂಭಗಳಲ್ಲಿ ರಾಹುಲ್ ಗಾಂಧಿ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸಿ, ಸಂವಿಧಾನ ರಕ್ಷಿಸೋಣ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಇದೀಗ ಈ ಪುಸ್ತಕದಲ್ಲಿ ಏನು ಇಲ್ಲ ಇದು ಬರೀ ಖಾಲಿ ಬಿಳಿ ಹಾಳೆಯ ಪುಸ್ತಕ ಎಂದು ಬಿಜೆಪಿ ಹೇಳಿದೆ.

ಅಷ್ಟೇ ಅಲ್ಲ ಕೆಂಪು ಬಣ್ಣದ ಪುಸ್ತಕದಲ್ಲಿ ಕೇವಲ ಬಿಳಿ ಹಾಳೆಗಳು ತುಂಬಿರುವ ಒಂದು ಪುಸ್ತಕವನ್ನು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದೆ. ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿವೆ. ಈ ಎರಡೂ ರಾಜ್ಯಗಳಲ್ಲೂ ಚುನಾವಣೆ ಪ್ರಚಾರ ರಂಗೇರಿದೆ. ಇನ್ನು ಮಹಾರಾಷ್ಟ್ರದಲ್ಲಿ ಈ ಬಾರಿ ರಾಜಕೀಯ ಚಿತ್ರಣ ಸುಲಭವಾಗಿ ವಿವರಿಸಲಾಗ ಹಾಗೂ ಯಾರೂ ಅಂದಾಜು ಸಹ ಮಾಡಲು ಸಾಧ್ಯವಾಗದ ರೀತಿಯಲ್ಲಿ ಇದೆ.
ಈ ನಡುವೆ ಎರಡೂ ರಾಜ್ಯಗಳ ಚುನಾವಣೆ ಪ್ರಚಾರ ಸಭೆಗಳಲ್ಲಿ ಸಂವಿಧಾನ ಪುಸ್ತಕವನ್ನು ಕಾಂಗ್ರೆಸ್ ನೀಡಿದ್ದು, ಈ ಪುಸ್ತಕದಲ್ಲಿ ಏನೇನು ಇಲ್ಲ ಬರೀ ಬಿಳಿಯ ಖಾಲಿ ಹಾಳೆ ಮಾತ್ರ ಅಂತ ಬಿಜೆಪಿ ಆರೋಪ ಮಾಡಿದೆ.
संविधान सिर्फ बहाना है
— भाजपा महाराष्ट्र (@BJP4Maharashtra) November 6, 2024
लाल पुस्तक को बढ़ाना है
मोहब्बत के नाम पर
सिर्फ नफरत फैलाना है...
काँग्रेसला भारताचे संविधान असेच कोरे करायचे आहे.
डॉक्टर बाबासाहेब आंबेडकरांनी लिहिलेले सर्व कायदे अनुच्छेद वगळून टाकायचे आहेत. म्हणूनच तर राहुल गांधींनी मध्यंतरी आरक्षण रद्द करणार ही… pic.twitter.com/C94Wa3CZee
ಚುನಾವಣೆ ಪ್ರಚಾರ ಸಭೆಯಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯ ಪರವಾಗಿ ರಾಹುಲ್ ಗಾಂಧಿ ಮತಯಾಚನೆ ಮಾಡಿದ್ದಾರೆ. ಈ ಪ್ರಚಾರ ಸಭೆಯಲ್ಲಿ ಸೇರಿದ್ದ ಸಾರ್ವಜನಿಕರಿಗೆ ಮೈತ್ರಿ ಪಕ್ಷದ ಪರವಾಗಿ ಉಚಿತವಾಗಿ ಸಂವಿಧಾನ ಪುಸ್ತಕಗಳನ್ನು ಸಾರ್ವಜನಿಕರಿಗೆ ಹಂಚಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಪುಸ್ತಕದ ಮುಖಪುಟದಲ್ಲಿ ಮಾತ್ರ ಸಂವಿಧಾನ ಎಂದು ಮುದ್ರಿಸಿರುವುದು ಬಿಟ್ಟರೆ ಬೇರೆನೂ ಇಲ್ಲ. ಪುಸ್ತಕದಲ್ಲಿ ಪೀಠಿಕೆಯನ್ನು ಹೊರತುಪಡಿಸಿ ಉಳಿದೆಲ್ಲ ಖಾಲಿ ಖಾಲಿ ಎಂದು ಬಿಜೆಪಿ ದೂರಿದೆ. ಇದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಮಹಾ ಸಮರ: ಮಹಾರಾಷ್ಟ್ರದ ಮಹಾ ಸಮರ ಇದೇ 20ಕ್ಕೆ ನಡೆಯಲಿದೆ. ಈ ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಬಿಜೆಪಿಯ ಮಹಾಯುತಿ ಮೈತ್ರಿ ಪಕ್ಷ ಹಾಗೂ ಕಾಂಗ್ರೆಸ್‌ನ ಮಹಾವಿಕಾಸ್ ಅಘಾಡಿ ಮೈತ್ರಿಯಾಗಿ ಚುನಾವಣಾ ಕಣಕ್ಕೆ ಜಿಗಿದಿವೆ. ಇನ್ನು ಈ ರಾಜ್ಯದ ಮ್ಯಾಜಿಕ್ ಸಂಖ್ಯೆ 145 ಆಗಿದೆ. ಈ ಬಾರಿ ಎರಡು ಪ್ರಮುಖ ಪಕ್ಷಗಳು ಇಬ್ಭಾಗವಾಗಿವೆ. ಎರಡು ಪಕ್ಷಗಳು ನಾಲ್ಕು ಪಕ್ಷಗಳಾಗಿ ಬದಲಾಗಿದ್ದು, ಇದೇ ಮೊದಲ ಬಾರಿ ನಾಲ್ಕು ಬಣಗಳು ಚುನಾವಣೆ ಎದುರಿಸಲಿವೆ!












Click it and Unblock the Notifications