Maharashtra: ಬಿಜೆಪಿ ನಾಯಕಿ & ಬೆಂಬಲಿಗರ ಮೇಲೆ ಹಲ್ಲೆ: 45 FIR, 3 ಬಂಧನ
ಮುಂಬೈ, ನವೆಂಬರ್ 17: ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗತೊಡಗಿದೆ. ಚುನಾವಣೆಗೆ ಮೂರು ದಿನಗಳು ಮಾತ್ರವೇ ಬಾಕಿ ಇವೆ. ಈ ವೇಳೆ ಪ್ರಚಾರ ಕಾರ್ಯ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮಾಜಿ ಸಂಸದೆ ನವನೀತ್ ರಾಣ ಮತ್ತು ಅವರು ಬೆಂಬಲಿಗರ ಮೇಲೆ ದಾಳಿ ನಡೆದಿದೆ. ಹಲ್ಲೆ ಮಾಡಿದ್ದಾರೆ ಎಂಬ ಕಾರಣದಿಂದ ಕೆಲವರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಶನಿವಾರ ಸಾರ್ವಜನಿಕ ಸಭೆಯನ್ನು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮಾಜಿ ಸಂಸದ ನವನೀತ್ ರಾಣಾ ಮತ್ತು ಅವರ ಬೆಂಬಲಿಗರ ಮೇಲೆ ಅಲ್ಲಿಗೆ ಬಂದಿದ್ದ ಜನರ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದೆ. ಈ ಕುರಿತು ಪೊಲೀಸರು ಬರೋಬ್ಬರಿ 45 ಜನರ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಶನಿವಾರ ರಾತ್ರಿ ಖಲ್ಲಾರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಅಮರಾವತಿ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವಿಶಾಲ್ ಆನಂದ್ ಅವರು ಭೇಟಿ ನೀಡಿದ್ದಾರೆ.
ಅಶ್ಲೀಲ ಸನ್ನೆ, ಕೆಟ್ಟ ಪದ ಬಳಕೆ: ಗಲಾಟೆ
ರಾತ್ರಿ 10 ಗಂಟೆ ಸುಮಾರಿಗೆ ಸಾರ್ವಜನಿಕ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ಮಾಜಿ ಸಂಸದೆ ನವನೀತ್ ರಾಣಾ ಅವರು ಪಾಲ್ಗೊಂಡಿದ್ದರು. ಅವರು ಬೆಂಬಲಿಗರೊಂದಿಗೆ ಬಂದಿದ್ದರು. ಈ ವೇಳೆ ಗುಂಪಿನಿಂದ ಒಂದಷ್ಟು ಕೆಟ್ಟ ಪದ ಬಳಿಕ, ಅಶ್ಲೀಲ ಸನ್ನೆಗಳನ್ನು ಮಾಡಿದ್ದಾರೆ.
ಈ ವೇಳೆ ಬೆಂಬಲಿಗರು ಹಾಗೂ ಗುಂಪಿನ ಮಧ್ಯೆ ಗಲಾಟೆ ನಡೆದಿದೆ. ಗುಂಪಿನಗರ ಸಂಸದೆ ಮತ್ತು ಅವರ ಬೆಂಬಲಿಗರ ಮೇಲೆ ಕುರ್ಚಿಗಳನ್ನು ಎಸೆದರು. ಹಲ್ಲೆಗೆ ಮುಂದಾದರು. ಅದೃಷ್ಟವಶಾತ್ ಎಲ್ಲವು ನಿಯಂತ್ರಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.
ಠಾಣೆಗೆ ಬಂದು ನವನೀತ್ ರಾಣಾ ದೂರು
ಘಟನೆ ಬಳಿಕ ಹತ್ತಿರ ಪೊಲೀಸ್ ಠಾಣೆಗೆ ಆಗಮಿಸಿದ ನವನೀತ್ ರಾಣಾ ಹಾಗೂ ಕಾರ್ಯಕರ್ತರು ಘಟನೆ ಕುರಿತು ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಹಲವರು ಮೇಲೆ ಎಫ್‌ಐಆರ್ ಹಾಕಿದ್ದಾರೆ.
ನಾವು ಭಾರತೀಯ ನ್ಯಾಯ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗಲಭೆ, ಕೊಲೆ ಯತ್ನ ಜೊತೆಗೆ ಇತರ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಈ ಹಲ್ಲೆ ಮಾಡಿದ ಗುಂಪಿನಲ್ಲಿ ಐವರ ಯಾರೆಂದು ಗೊತ್ತಾಗಿದ್ದು, ಉಳಿದವರ ಅಪರಿಚತರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪ್ರಕರಣ ತನಿಖೆ ಮುಂದುವರಿದಿದೆ.
ನವೆಂಬರ್ 20ರಂದು ಒಂದೇ ಹಂತದಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟದಿಂದ ಭಾರೀ ಪ್ರಚಾರ ನಡೆಯುತ್ತಿದೆ. ಈ ನಡುವೆ ಇಂತಹ ಘಟನೆಗ ನಡೆದಿದೆ. ಇದು ರಾಜಕೀಯ ದುರುದ್ದೇಶದಿಂದ ನಡೆದಿದೆ? ಹೇಗೆ ಎಂದು ತನಿಖೆಯಿಂದ ತಿಳಿಯಬೇಕಿದೆ.












Click it and Unblock the Notifications