ಮಹಾರಾಷ್ಟ್ರ ಚುನಾವಣೆ 2024: ಕಾಂಗ್ರೆಸ್‌ನಿಂದ 28 ಬಂಡಾಯ ಶಾಸಕರಿಗೆ ಗೇಟ್‌ಪಾಸ್, ಪಟ್ಟಿ

ಮುಂಬೈ, ನವೆಂಬರ್ 12: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024 ಕಣ ರಂಗೇರುತ್ತಿದೆ. ಮತದಾನಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೆ, ಸ್ವಪಕ್ಷದ ಹಿತಕ್ಕೆ ದ್ರೋಹ ಬಗೆದು, ಎದರಾಳಿ ಪಕ್ಷದೊಂದಿಗೆ ಪರೋಕ್ಷವಾಗಿ ಒತ್ತಾಸೆಯಾಗಿ ನಿಂತಿರುವ ಅನೇಕ ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ತಾತ್ಕಾಲಿಕ ಗೇಟ್ ಪಾಸ್ ನೀಡಿದೆ. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಸರ್ಕಾರದ ಮನವೊಲಿಕೆಗೆ ಮುಂದಾದರೂ ಸಹಿತ ಕೇಳದೇ ವಿರೋಧಿ ಪಕ್ಷಗಳ ಜೊತೆಗೆ ಕೈ ಜೋಡಿಸಿದೆ. ಆ ಪಕ್ಷಗಳ ಚಟುವಟಿಕೆಗಳಲ್ಲಿ ಭಾಗವಹಿಸಿದ ಸುಮಾರು 28 ಬಂಡಾಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಮಾನತು ಮಾಡಿದೆ. ಬರೋಬ್ಬರಿ ಮುಂದಿನ ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.

Maharashtra Assembly Election 2024 Congress Suspended 28 Rebel Leaders till 6 Years

ಎಐಸಿಸಿ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರ ನಿರ್ದೇಶನದ ಮೇರೆಗೆ ಪಕ್ಷವು ಎರಡು ಡಜನ್‌ಗೂ ಹೆಚ್ಚು ಬಂಡಾಯ ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಸ್ಥಾನವಿಲ್ಲದಂತೆ ಮಾಡಿದೆ. ಹಾಗಾದರೆ ಅಮಾನತುಗೊಂಡವರು ಯಾರು, ಅವರೆ ಹೆಸರುಗಳು ಪಟ್ಟಿ ಇಲ್ಲಿದೆ.

ಕಾಂಗ್ರೆಸ್‌ನಿಂದ ಅಮಾನತುಗೊಂಡ ನಾಯಕರು

ಚಂದ್ರಪಾಲ್ ಚೌಕ್ಸೆ, ಆನಂದರಾವ್ ಗೆಡಂ, ಶಿಲು ಚಿಮುರ್ಕರ್, ಸೋನಾಲ್ ಕೋವ್, ಭರತ್ ಯೆರಮೆ, ಅಭಿಲಾಷ ಗವಟೂರೆ, ಪ್ರೇಮಸಾಗರ್ ಗನ್‌ವೀರ್, ಅಜಯ್ ಲಾಂಜೇವರ್, ಮನೀಶ್ ಆನಂದ್, ಸುರೇಶ್ ಕುಮಾರ್ ಜೇತ್ಲಿಯಾ, ಶಮಕಾಂತ್ ಸಾನೆರ್, ರಾಜೇಂದ್ರ ಠಾಕೂರ್, ಅಬಾ ಬಾಗುಲ್, ಅವಿನಾಶ್ ಲಾಡ್, ಯಗ್ವಾಲ ಜಿಚ್ಕರ್, ರಾಜು ಜೋಡೆ, ಕಲ್ಯಾಣ್ ಬೋರಡೆ, ಅಜಯ್ ಲಾಂಜೇವರ್, ಹಂಸಕುಮಾರ್ ಪಾಂಡೆ; ಕಮಲ ವ್ಯಾವಹರೆ, ಮೋಹನರಾವ್ ದಾಂಡೇಕರ್, ಮಂಗಲ್ ವಿಲಾಸ್ ಭುಜ್ವಾಲ್, ಮನೋಜ್ ಶಿಂಧೆ, ಸುರೇಶ್ ಪಾಟೀಲ್ ಖೇಡೆ, ವಿಜಯ್ ಖಡ್ಸೆ, ಶಬೀರ್ ಖಾನ್, ರಾಜೇಂದ್ರ ಮುಖಾ ಅವರನ್ನು ಕಾಂಗ್ರೆಸ್ ಪಕ್ಷ ಮುಂದಿನ ಆರು ವರ್ಷ ಅಮಾನತು ಮಾಡಿ ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+