ಮಹಾ ಶಿವರಾತ್ರಿ: ಕನ್ವರ್ ಯಾತ್ರೆಯಲ್ಲಿದ್ದ ಭಕ್ತರಿಗೆ ರಸ್ತೆಯಲ್ಲಿ ನಿಂತು ಬಿಯರ್ ಹಂಚುತ್ತಿದ್ದ ಯುವಕ, ಬಂಧನ
“ಬಿಯರ್ ನೀಡುವುದು ಕಾನೂನುಬಾಹಿರವೇ..?" ಎಂದು ಹಲವು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಲಕ್ನೋ, ಫೆಬ್ರವರಿ. 19: ಮಹಾಶಿವರಾತ್ರಿಯ ಸಂದರ್ಭದಲ್ಲಿ ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಿವನ ಭಕ್ತರಿಗೆ ಯುವಕನೊಬ್ಬ ಬಿಯರ್ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
In UP's Aligarh, several videos of a man offering beer to Kanwariyas on the road has surfaced. An FIR under relevant sections of excise act has been registered. pic.twitter.com/KF2xQjeWfH
— Piyush Rai (@Benarasiyaa) February 17, 2023
ಇದಾದ ನಂತರ ಉತ್ತರ ಪ್ರದೇಶದ ಅಲಿಗಢದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಜನನಿಬಿಡ ರಸ್ತೆಯಲ್ಲಿ ನಿಂತು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಬಿಯರ್ ನೀಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಬಂಧಿತ ವ್ಯಕ್ತಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಆರೋಪಿಯಿಂದ ಒಂದು ಬೈಕ್, 14 ಬಿಯರ್ ಕ್ಯಾನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮಾರಾಟ ಮಾಡುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧವೂ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಅಲಿಗಢದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಹಲವು ನೆಟ್ಟಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಬಿಯರ್ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಏಕೆ ಬಂಧಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು, ಪ್ರಾರ್ಥನೆ ಸಲ್ಲಿಸಲು ಹೋಗುವವರು ಈ ಪಾನೀಯಗಳನ್ನು ಏಕೆ ಸ್ವೀಕರಿಸುತ್ತಿದ್ದಾರೆ ಎಂದು ಹಲವರು ಆಶ್ಚರ್ಯ ಪಟ್ಟಿದ್ದಾರೆ.
"ಕನ್ವರ್ ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮದ್ಯ ಕೊಡುವವರನ್ನು ಮಾತ್ರ ಏಕೆ ಬಂಧಿಸಬೇಕು..? ಬಿಯರ್ ಸ್ವೀಕರಿಸುವವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಪ್ರಾರ್ಥನೆ ಸಲ್ಲಿಸಲು ಹೋಗುತ್ತಿರುವಾಗ ಯಾರು ಮದ್ಯ ಸೇವಿಸುತ್ತಾರೆ..?" ಎಂದು ಪ್ರಶ್ನಿಸಿದ್ದಾರೆ.
"ಬಿಯರ್ ನೀಡುವುದು ಕಾನೂನುಬಾಹಿರವೇ..? ಮಾರಾಟ ಮಾಡಲು ನಿಮಗೆ ಪರವಾನಗಿ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಭಕ್ತರು ಅದನ್ನು ಬಯಸಿದರೆ ನಿಮ್ಮ ಸಮಸ್ಯೆ ಏನು?" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಕನ್ವರ್ ಯಾತ್ರೆಯು ಶಿವನ ಭಕ್ತರು ವರ್ಷಕ್ಕೆ ಒಮ್ಮೆ ಕೈಗೊಳ್ಳುವ ವಾರ್ಷಿಕ ತೀರ್ಥಯಾತ್ರೆಯಾಗಿದೆ. ಇದರಲ್ಲಿ ಭಕ್ತರನ್ನು 'ಕನ್ವರಿಯಾಸ್' ಎಂದು ಕರೆಯಲಾಗುತ್ತದೆ. ಇದರಲ್ಲಿ ಭಕ್ತರು ಉತ್ತರಾಖಂಡದ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್ ಮುಂತಾದ ಸ್ಥಳಗಳಿಗೆ ಭೇಟಿ ನೀಡುತ್ತಾರೆ.












Click it and Unblock the Notifications