Monalisa Health: ಮಹಾ ಕುಂಭ ಮೇಳದ ಜೇನು ಕಣ್ಣ ಸುಂದರಿ ಮೊನಾಲಿಸಾ ಆರೋಗ್ಯ ಸ್ಥಿತಿ ಗಂಭೀರ?
ಲಕ್ನೋ ಜನವರಿ 25: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಆರಂಭವಾಗಿ ಕೆಲವೇ ದಿನದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಜೇನು ಕಣ್ಣ ಸುಂದರಿ ಮೊನಾಲಿಸಾ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆದ ಮೊನಾಲಿಸಾಗೆ ಈ ಸೌಂದರ್ಯವೇ ಶಾಪವಾಗಿದೆ. ಇದೇ ಚಿಂತೆಯಲ್ಲಿ ಮೊನಾಲಿಸಾ ಈಗ ಹಾಸಿಗೆ ಹಿಡಿದಿದ್ದಾಳೆ. ಈ ಚಿಂತೆ ಮೊನಾಲಿಸಾಳ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿದೆ.
ಹೌದು.. ಮೈ ತುಂಬಾ ಸಾಲ ಮಾಡಿಕೊಂಡಿದ್ದ ತಂದೆಗೆ ಸಹಾಯ ಮಾಡಲು ಮೊನಾಲಿಸಾ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ದಿನಕ್ಕೆ 500 ರಿಂದ 1000 ರೂಪಾಯಿ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ ಯಾರೋ ಒಬ್ಬರು ಆಕೆಯ ವೀಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಆಕೆ ಸೆಲೆಬ್ರಿಟಿಗಿಂತ ಹೆಚ್ಚು ಫೇಮಸ್ ಆಗಿಬಿಟ್ಟಿದ್ದಾಳೆ. ಆಕೆಯ ಸೌಂದರ್ಯವೇ ಈಗ ಆಕೆಗೆ ಮುಳುವಾಗಿ ಹೋಗಿದೆ.

ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ಮೊನಾಲಿಸಾ ಹಿಂದೆ ಬೀಳುವ ಜನ ಆಕೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಶುರು ಮಾಡಿದ್ದಾರೆ. ಆಕೆಯನ್ನು ಮಾತನಾಡಿಸಲು ಪ್ರಯತ್ನ ಪಡುತ್ತಿದ್ದಾರೆ. ಇದರಿಂದ ಮೊನಾಲಿಸಾಗೆ ತನ್ನ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮಾಸ್ಕ್ ಹಾಕಿಕೊಂಡರೂ ಜನ ಆಕೆಯನ್ನು ಗುರುತು ಪತ್ತೆ ಮಾಡುತ್ತಿದ್ದಾರೆ.
ರಕ್ಷಣೆಗಾಗಿ ಪೊಲೀಸ್ ಮೊರೆ ಹೋದ ಮೊನಾಲಿಸಾ
ಮಹಾ ಕುಂಭ ಮೇಳದಿಂದ ಇಂದೋರ್‌ಗೆ ಹೋದರೂ ಕೂಡ ಜನ ಅಲ್ಲಿಗೆ ಆಕೆಯನ್ನು ಹುಡುಕಿಕೊಂಡು ಹೋಗಿ ಆಕೆಗೆ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಜನರಿಂದ ತನಗೆ ರಕ್ಷಣೆ ನೀಡುವಂತೆ ಮೊನಾಲಿಸಾ ಪೊಲೀಸ್ ಮೊರೆ ಹೋಗಿದ್ದಾಳೆ.
ಮೊದಮೊದಲು ಸಂದರ್ಶನಗಳಲ್ಲಿ ಖುಷಿ ಖುಷಿಯಿಂದ ಮಾತನಾಡುತ್ತಿದ್ದ ಮೊನಾಲಿಸಾಳನ್ನು ಫೋಟೋಗಾಗಿ ಜನ ಎಳೆದಾಡಿ ನೂಕಾಡಿ ಆಕೆಯ ಜೀವನಕ್ಕೆ ಧಕ್ಕೆ ತಂದಿದ್ದಾರೆ. ಅಷ್ಟೇ ಅಲ್ಲದೆ ಕುಂಭ ಮೇಳಕ್ಕೆ ಬರಬೇಕಿದ್ದ ಎಷ್ಟೋ ಜನ ಈ ಹುಡುಗಿಯನ್ನು ಹುಡುಕಿಕೊಂಡು ಬರುತ್ತಿದ್ದಾರೆ ಎಂದರೆ ನೀವೇ ಲೆಕ್ಕಾ ಹಾಕಿ. ಮೊನಾಲಿಸಾ ಕತೆ ಏನಾಗಿರಬೇಡ ಎಂದು. ನಿಜಕ್ಕೂ ಕುಂಭ ಮೇಳೆ ಯಾಕೆ ನಡೆಯುತ್ತಿದೆ ಎನ್ನುವುದನ್ನೇ ಜನ ಮರೆತುಬಿಟ್ಟಿದ್ದಾರೆ.
ಮೊನಾಲಿಸಾಳ ಕೈಗೆ ಮೂರು ಸ್ಟಿಚ್
ಮೊನಾಲಿಸಾ ಪರಿಸ್ಥಿತಿ ಹೇಗಾಗಿದೆ ಎಂದರೆ ಬದುಕುವುದೇ ಕಷ್ಟವಾಗಿ ಹೋಗಿದೆ. ಈ ಬಡ ಹುಡುಗಿಯೊಂದಿಗೆ ಪುಂಡರು ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಅದನ್ನು ತಡೆಯಲು ಬಂದ ಮೊನಾಲಿಸಾ ಅಣ್ಣನನ್ನು ಪುಂಡರು ಥಳಿಸಿದ್ದಾರೆ. ಅಲ್ಲದೇ ಮೊನಾಲಿಸಾಳನ್ನು ಎಲೆದಾಡಿ ಬಡಿದಾಡಿ ಆಕೆಯ ಕೈಗೂ ಕೂಡ ಏಟಾಗಿದೆ. ಇದರಿಂದಾಗಿ ಮೊನಾಲಿಸಾ ಕೈಗಳಿಗೆ ಮೂರು ಸ್ಟಿಚ್‌ಗಳನ್ನೂ ಹಾಕಲಾಗಿದೆ.
ಸೈಲೆಂಟಾಗಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಇದೀಗ ಮಹಾ ಕುಂಭ ಮೇಳದಿಂದಲೇ ಮರೆಯಾಗುತ್ತಿದ್ದಾಳೆ. ಯಾಕೆಂದರೆ ಆಕೆಯ ಜೀವಕ್ಕೆ ಅಪಾಯ ಇದೆ ಎಂದು ಆಕೆಗೆ ಭಯ ಶುರುವಾಗಿದೆ. ಈಕೆಗೆ ಈಕೆಯ ಅಂದವೇ ಶಾಪವಾಗಿದೆ. ಮಗಳನ್ನು ಜೋಪಾನ ಮಾಡುವುದು ಅಪ್ಪನಿಗೆ ಕಷ್ಟವಾಗುತ್ತಿದೆ. ಹೇಗೋ ಹೊಟ್ಟೆ ಪಾಡಿಗೆ ಸಣ್ಣ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಕ್ಕೆ ಮೊನಾಲಿಸಾಳನ್ನು ಕಾಪಾಡುವುದೇ ದೊಡ್ಡ ಕೆಲಸವಾಗಿ ಹೋಗಿದೆ.
ಭಯದಲ್ಲಿ ಹಾಸಿಗೆ ಹಿಡಿದ ಮೊನಾಲಿಸಾ
ಮೊನಾಲಿಸಾ ಕುಟುಂಬ ಇತ್ತೀಚೆಗೆ ಒಂದು ಪುಟ್ಟ್ ಮನೆಯನ್ನು ಕಟ್ಟಿದೆ. ಆ ಮನೆ ಕಟ್ಟಲು ಸಾಲ ಮಾಡಿಕೊಂಡಿದೆ. ಆ ಸಾಲವನ್ನು ತೀರಿಸಲು ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ಸ್ವಲ್ಪ ಹಣ ಸಂಪಾದನೆ ಮಾಡುತ್ತಿದ್ದಳು. ಆದರೀಗ ಸೆಲ್ಫಿಗಾಗಿ ಬಂದ ಜನ ರುದ್ರಾಕ್ಷಿ ಮಾಲೆ ಖರೀದಿ ಮಾಡದೆ ಫೋಟೋ ಕ್ಲಿಕ್ಕಿಸಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಆಕೆಯ ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲದೆ ಆಕೆಯ ಹಿಂದೆ ಬಿದ್ದು ಆಕೆಯ ಕೆಲಸಕ್ಕೂ ತೊಂದರೆ ಕೊಡುತ್ತಿದ್ದಾರೆ.
ಇದರಿಂದಾಗಿ ಮೊನಾಲಿಸಾ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ ಎನ್ನಲಾಗುತ್ತಿದೆ. ಫೋಟೋ ತೆಗೆಸಿಕೊಳ್ಳಲು ಜನ ಧಮ್ಕಿ ಹಾಕುತ್ತಿದ್ದು, ಆಕೆಯ ಮನೆಗೆ ಬಂದು ತೊಂದರೆ ಕೊಡುತ್ತಿದ್ದು ಮೊನಾಲಿಸಾ ಸಿಕ್ಕಪಟ್ಟೆ ಭಯಗೊಂಡಿದ್ದಾಳೆ. ಭಯದಲ್ಲೇ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಮೊನಾಲಿಸಾ ಆರೋಗ್ಯ ಹದಗೆಡುತ್ತಿದ್ದು ಕುಟುಂಬಸ್ಥರಿಗೆ ಆಕೆಯ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಗಿದೆ.












Click it and Unblock the Notifications