ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಬಿಸಿ ಮುಟ್ಟಿಸಿದ ಕಾಂಗ್ರೆಸ್

By Manjunatha
|
Google Oneindia Kannada News

ಭೋಪಾಲ್, ಜನವರಿ 20: ಮಧ್ಯ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಿರುವ ವಿರೋಧ ಪಕ್ಷ ಕಾಂಗ್ರೆಸ್, ಆಡಳಿತರೂಢ ಬಿಜೆಪಿಗೆ ಬಿಸಿ ಮುಟ್ಟಿಸಿದೆ.

19 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 9 ಸಂಸ್ಥೆಗಳನ್ನು ಗೆದ್ದುಕೊಂಡಿದೆ. ಒಂದು ಸ್ಥಳೀಯ ಸಂಸ್ಥೆಯಲ್ಲಿ ಅಧ್ಯಕ್ಷ ಪಟ್ಟ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.

ಈ ಕ್ಷಣ ಚುನಾವಣೆಯಾದ್ರೆ ಮೋದಿಯದೇ ಜಯಭೇರಿ: ರಿಪಬ್ಲಿಕ್ ಸಮೀಕ್ಷೆಈ ಕ್ಷಣ ಚುನಾವಣೆಯಾದ್ರೆ ಮೋದಿಯದೇ ಜಯಭೇರಿ: ರಿಪಬ್ಲಿಕ್ ಸಮೀಕ್ಷೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತವರು ಕ್ಷೇತ್ರ ರಾಘೋಗರ್ ನಗರ ಪಾಲಿಕೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಇಲ್ಲಿ ಕಾಂಗ್ರೆಸ್ 24ರಲ್ಲಿ 20 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ.

Madya Pradesh local body election BJP scores good

ಮಧ್ಯ ಪ್ರದೇಶದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸೆಮಿ ಫೈನಲ್ ಕದನ ಎಂದೇ ಬಣ್ಣಿಸಲಾಗಿತ್ತು. ಇದೀಗ ಸೆಮಿಫೈನಲ್ ನಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿದ್ದು ವಿಧಾನಸಭೆ ಚುನಾವಣೆಯಲ್ಲಿಯೂ ತೀವ್ರ ಸ್ಪರ್ಧೆ ನೀಡುವ ಸೂಚನೆ ನೀಡಿದೆ.

ಸರ್ದಾರ್ ಪುರ್ ನಗರ ಪಾಲಿಕೆಯಲ್ಲಿ ಕಾಂಗ್ರೆಸ್ ನ ಮಹೇಶ್ ಭವಾರ್ ಜಯ ಸಾಧಿಸಿದ್ದಾರೆ. ಸೆಂಧ್ವಾದಲ್ಲಿ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

6 ನಗರ ಪಾಲಿಕೆಗಳ ಪೈಕಿ 4 ಕಾಂಗ್ರೆಸ್ ಪಾಲಾಗಿದ್ದರೆ ಬಿಜೆಪಿ ಕೇವಲ 2ರಲ್ಲಿ ಜಯ ಸಾಧಿಸಿದೆ. ಆದರೆ ನಗರಪಾಲಿಕೆ ಪರಿಷತ್ ಗಳಲ್ಲಿ 7ರಲ್ಲಿ ಬಿಜೆಪಿ ಗೆದ್ದಿದ್ದರೆ ಕಾಂಗ್ರೆಸ್ ಐದರಲ್ಲಿ ಜಯ ಸಾಧಿಸಿದೆ. ಹೀಗೆ 19 ಸ್ಥಳೀಯ ಸಂಸ್ಥೆಗಳಲ್ಲಿ ಎರಡೂ ಪಕ್ಷಗಳು ತಲಾ 9ರಲ್ಲಿ ಗೆದ್ದು ಸಮಬಲ ಸಾಧಿಸಿವೆ.

ಜೈತಹಾರಿ ನಗರಪಾಲಿಕೆ ಪರಿಷತ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ನವ್ರತನಿ ಶುಕ್ಲಾ ಜಯ ಸಾಧಿಸಿದ್ದು ಬಿಜೆಪಿಗೆ ಮುಖಭಂಗ ಉಂಟು ಮಾಡಿದೆ.

ಇನ್ನು ಬುಡಕಟ್ಟು ಜನಾಂಗಗಳ ಪ್ರದೇಶಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿದೆ. ಮನವರ್, ಧಾರ್ ಮತ್ತು ಬರ್ವಾನಿ ನಗರ ಪಾಲಿಕೆಗಳನ್ನು ಗೆದ್ದುಕೊಂಡಿದ್ದೇ ಇದಕ್ಕೆ ಸಾಕ್ಷಿ. ಬಿಜೆಪಿ ಕುಕ್ಷಿ, ದಹಿ, ಪಿತಂಪುರ್, ರಾಜ್ಪುರ್, ಓಂಕಾರೇಶ್ವರ್ ನಲ್ಲಿ ಗೆಲುವು ಸಾಧಿಸಿದೆ.

English summary
Madhya Pradesh Civic Poll Results: BJP and Congress won 9 president posts, while independent clinched 1 president posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X