ಮಹಾರಾಷ್ಟ್ರದ ಮದರಸಾಗಳ ಮಾನ್ಯತೆ ರದ್ದು
ಮುಂಬೈ, ಜೂ. 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಮಾಡಿ, ಮುಸ್ಲಿಂ ಕೋಟಾಕ್ಕೂ ತೀಲಾಂಜಲಿ ಹೇಳಿದ್ದ ಮಹಾರಾಷ್ಟ್ರ ಸರ್ಕಾರ ಇದೀಗ ಮದರಸಾಗಳ ಶೈಕ್ಷಣಿಕ ಮಾನ್ಯತೆಯನ್ನು ರದ್ದು ಮಾಡಿದೆ. ಮದರಸಾಗಳು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.
ಸರ್ಕಾರದ ನಿರ್ಧಾರದ ಬಗ್ಗೆ ಅನೇಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿವೆ. ಎಲ್ಲರಿಗೂ ಏಕರೂಪದ ಶಿಕ್ಷಣ ನೀಡಲು ರದ್ದು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮರ್ಥನೆ ನೀಡಿದ್ದಾರೆ.[ಮದ್ರಸಾ ಎಂದರೇನು?]

ಮದರಸಾ ಜತೆಗೆ ಇಸ್ಲಾಮಿಕ್ ಸೆಮಿನರಿಗಳು ರದ್ದು
ಮಹಾರಾಷ್ಟ್ರದ ಯಾವ ಮದರಸಾ ಮತ್ತು ಇಸ್ಲಾಮಿಕ್ ಸೆಮಿನರಿಗಳು ಇನ್ನು ಮುಂದೆ ಸರ್ಕಾರದ ಅನುಮತಿ ಪಡೆದ ಶಿಕ್ಷಣ ಸಂಸ್ಥೆಗಳಾಗಿರುವುದಿಲ್ಲ. ಕೆಲ ರಾಜ್ಯಗಳಲ್ಲಿ ಈ ಹಿಂದೆಯೇ ಮದರಸಾಗಳ ಮಾನ್ಯತೆಯನ್ನು ರದ್ದು ಮಾಡಲಾಗಿತ್ತು.
ರದ್ದು ಮಾಡಲು ಕಾರಣವೇನು?
ಮಹಾರಾಷ್ಟ್ರ ಸರ್ಕಾರ ಮದರಸಾ ಮತ್ತು ಮದರಸಾಗಳಲ್ಲಿ ಕಲಿತು ಹೊರಬಂದ ವಿದ್ಯಾರ್ಥಿಗಳ ಮೇಲೆ ಒಂದು ಸಮೀಕ್ಷೆ ಮಾಡಿತ್ತು. ಸಮೀಕ್ಷೆಯಲ್ಲಿ ಕೆಲ ಆಘಾತಕಾರಿ ಸಂಗತಿಗಳು ಹೊರ ಬಂದಿದ್ದವು.[ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ]
ಮದರಸಾಗಳಲ್ಲಿ ವ್ಯಾಸಂಗ ಮಾಡಿದವರು ಮುಖ್ಯ ವಾಹಿನಿಯಿಂದ ದೂರವಾಗುವ ಕೆಲ ವಿಚಾರಗಳನ್ನು ಬೆಳೆಸಿಕೊಂಡಿದ್ದರಿ. ಇವರನ್ನೆಲ್ಲ ಮುಖ್ಯ ವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಮದರಸಾಗಳಿಗೆ ನೀಡಿದ್ದ ಮಾನ್ಯತೆ ರದ್ದು ಮಾಡಲಾಗಿದೆ ಎಂದು ಮಹಾ ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಸ್ಲಿಂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು ಪ್ರತಿಭಟನೆ ಹಾದಿ ಹಿಡಿದಿವೆ. ಅಲ್ಲದೇ ನ್ಯಾಯಾಲಯದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾಗಿದ್ದಾರೆ.












Click it and Unblock the Notifications