ಕಾಮುಕರ ಪುರುಷತ್ವ ಹರಣ ಮಾಡಿ: ಮದ್ರಾಸ್ ಹೈಕೋರ್ಟ್

ಚೆನ್ನೈ, ಅಕ್ಟೋಬರ್. 26: ಬೆಬಿಲೋನಿಯನ್‌ ದೊರೆ ಹಮ್ಮುರಬಿ ಕಾನೂನಿನ ಬಗ್ಗೆ ಇತಿಹಾಸ ಬಲ್ಲವರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಅಪರಾಧ ಮಾಡಿದವರಿಗೆ ಆತನ ಆಳ್ವಿಕೆಯಲ್ಲಿ ಕೊಡುತ್ತಿದ್ದ ಶಿಕ್ಷೆ ಹಮ್ಮುರಬಿ ಶಾಸನ ಅಂತಲೇ ಹೆಸರು ಪಡೆದುಕೊಂಡಿದೆ. ಅಂಥದ್ದೇ ಶಾಸನ ಮಾಡಲು ಕೇಂದ್ರ ಸರ್ಕಾರಕ್ಕೆ ಇದೀಗ ಮದ್ರಾಸ್ ಹೈ ಕೋರ್ಟ್ ಸಲಹೆ ನೀಡಿದೆ.

ಅತ್ಯಾಚಾರ ತಡೆಗೆ ಕಠಿಣ ಕಾನೂನು, ನಿಯಮಾವಳಿಗಳು, ಎಚ್ಚರಿಕೆ ಕಾರ್ಯಕ್ರಮ ತೆಗೆದುಕೊಂಡರೂ ನಿರೀಕ್ಷಿತ ಯಶಸ್ಸು ದೊರೆಯುತ್ತಿಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಪರಿಹಾರ ಕ್ರಮವೊಂದನ್ನು ಹೇಳಿದ್ದು ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.[ಅತ್ಯಾಚಾರ ತಡೆಗೆ ನೀವು ಸಹಿ ಮಾಡಿ]

Madras High Court rises against Rapists, asks Centre to allow castration

ಅತ್ಯಾಚಾರಿಗಳಿಗೆ ನೀಡುತ್ತಿರುವ ಶಿಕ್ಷೆ ಯಾವ ಪರಿಣಾಮಕಾರಿಯಾಗಿಲ್ಲ. ಬೇರೆ ಬೇರೆ ದೇಶಗಳಲ್ಲಿ ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಮಾಡುವ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ನಮ್ಮ ದೇಶದಲ್ಲೂ ಇದನ್ನು ಜಾರಿ ಮಾಡಬೇಕು ಎಂದು ಮದ್ರಾಸ್ ಹೈ ಕೋರ್ಟ್ ಸಲಗೆ ನೋಡಿದೆ.

ಬ್ರಿಟನ್ ಪ್ರಜೆಯೋರ್ವನ ಮೇಲೆ ದಾಖಲಾಗಿದ್ದ ಅತ್ಯಾಚಾರ ಆರೋಪದ ವಿಚಾರಣೆ ವೇಳೆ ಕೋರ್ಟ್ ಸಲಹೆ ನೀಡಿದೆ. ಬ್ರಿಟನ್ ಪ್ರಜೆಯೊಬ್ಬ ತನ್ನ ಮೇಲೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ವಜಾ ಮಾಡಬೇಕು ಎಂದು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದ. ವಿದೇಶಿಗನ ಅರ್ಜಿ ವಜಾ ಮಾಡಿದ ನ್ಯಾಯಾಲಯ ಈ ಸಲಹೆಯನ್ನು ನೀಡಿದೆ.

ಮಾನವ ಹಕ್ಕುಗಳಿರುವುದು ಅತ್ಯಾಚಾರ ಸಂತ್ರಸ್ತರಿಗೆ ಹೊರತು ಅತ್ಯಾಚಾರದ ಆರೋಪಿಗಳ ಪರ ಅಲ್ಲ. ಇದನ್ನು ಎಲ್ಲರೂ ಮನಗಾಣಬೇಕು. ಈಗ ನೀಡುತ್ತಿರುವ ಶಿಕ್ಷೆಯಲ್ಲಿ ಮಹತ್ತರ ಬದಲಾವಣೆ ತಂದರೆ ಮಾತ್ರ ಅತ್ಯಾಚಾರ ತಡೆ ಸಾಧ್ಯ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+