ಮಧ್ಯಪ್ರದೇಶ: ಶಿವಸೇನೆಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಭೋಪಾಲ್, ಅಕ್ಟೋಬರ್ 15: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶಿವಸೇನೆ ಇಂದು(ಅ.15) ಬಿಡುಗಡೆ ಮಾಡಿದೆ.
ಒಟ್ಟು 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಳಿದ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಮಧ್ಯಪ್ರದೇಶದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲದ ಕಾರಣ, ಸ್ವತಂತ್ರವಾಗಿ ತನ್ನ ಅಭ್ಯರ್ಥಿಗಳನ್ನು ಶಿವಸೇನೆ ಆಯ್ಕೆ ಮಾಡಿದೆ.
Shiv Sena releases first list of its candidates for #MadhyaPradesh state assembly elections, scheduled to be held on 28 November. pic.twitter.com/D3escBOEOn
— ANI (@ANI) October 15, 2018
ಒಟ್ಟು 230 ವಿಧಾನಸಭೆ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.
ಈ ರಾಜ್ಯದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ. ಆದರೆ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸಲು, ಅತ್ತ ಬಹುಜನ ಸಮಾಜವಾದಿ ಪಕ್ಷ ಒಲ್ಲೆ ಎಂದಿರುವುದು, ಮತ್ತು ಇತ್ತ್ ಬಿಜೆಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಳ್ಳದಿರುವುದು ಚುನಾವಣೆಯ ರೋಚಕತೆಯನ್ನು ಹೆಚ್ಚಿಸಿದೆ. ಈ ರಾಜ್ಯಗಳಲ್ಲಿ ಶಿವಸೇನೆಯ ಹೆಚ್ಚು ಬಲಾಢ್ಯವಾಗಿಲ್ಲ.












Click it and Unblock the Notifications