Madhya Pradesh Opinion Poll 2023: ಮಧ್ಯಪ್ರದೇಶ ಚುನಾವಣೆಯ ಪಕ್ಕಾ ಸಮೀಕ್ಷೆಯಲ್ಲಿ ಗೆಲುವು ಯಾರಿಗೆ? ಅಂಕಿಅಂಶ, ಮಾಹಿತಿ, ವಿವರ
ನವದೆಹಲಿ, ಅಕ್ಟೋಬರ್ 16: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್‌ನಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ಕಾಂಗ್ರೆಸ್ ಪೈಪೋಟಿ ನೀಡಲಿದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಆಡಳಿತ ವಿರೋಧಿ ಅಲೆ ಎದುರಾಗಿದೆ ಎಂಬ ಅಂಶಗಳು ಸಮೀಕ್ಷೆಯಲ್ಲಿ ಹೊರಬಿದ್ದಿದೆ.
2018 ರ ಚುನಾವಣೆಯಲ್ಲಿ, ಕಾಂಗ್ರೆಸ್ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿತ್ತು. ಆದರೆ, ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು. 15 ತಿಂಗಳು ಅಧಿಕಾರ ನಡೆಸಿದ್ದ ಕಮಲ್ ನಾಥ್ ನೇತೃತ್ವದ ಸರ್ಕಾರವು ಪತನವಾಯಿತು. ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು.

ಅಕ್ಟೋಬರ್ 9 ರಂದು ಬಿಜೆಪಿ ತನ್ನ ನಾಲ್ಕನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ಏಳು ಸಂಸದರ ಹೆಸರನ್ನು ಘೋಷಿಸಿದೆ. ಇದು ಮಧ್ಯಪ್ರದೇಶ ಬಿಜೆಪಿಯಲ್ಲಿ ಆಂತರಿಕ ಕಲಹವನ್ನು ಉಂಟುಮಾಡಿರುವುದು ಬೆಳಕಿಗೆ ಬಂದಿದೆ. ಮೇಲಾಗಿ ಶಿವರಾಜ್ ಸಿಂಗ್ ಚೌಹಾಣ್ ಆಡಳಿತದ ವಿರುದ್ಧದ ಅಲೆಯೂ ಕಾಣಿಸುತ್ತಿದೆ. ಇದು ಬಿಜೆಪಿಗೆ ಸಂಕಷ್ಟ ತಂದೊಡ್ಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಪೋಲ್ ಟ್ರ್ಯಾಕರ್ ಸಮೀಕ್ಷೆ
ಮಧ್ಯಪ್ರದೇಶ ವಿಧಾನಸಭೆ ಚುನಾವಣಾ ಸಮೀಕ್ಷೆಯನ್ನು ಪೋಲ್ ಟ್ರ್ಯಾಕರ್ ಸಂಸ್ಥೆ ನೀಡಿದೆ. ಈ ಸಂಸ್ಥೆಯು ಮಧ್ಯಪ್ರದೇಶ 230 ಕ್ಷೇತ್ರಗಳ ಪ್ರದೇಶವಾರು ಸಮೀಕ್ಷೆಯನ್ನು ನಡೆಸಿದೆ. ಸೆಪ್ಟೆಂಬರ್ 01 ರಿಂದ ಅಕ್ಟೋಬರ್ 14 ರ ವರೆಗೆ ನಡೆಸಿದ ಸಮೀಕ್ಷೆಯ ಅಂಕಿಅಂಶವನ್ನು ಪ್ರಕಟಿಸಿದೆ.

ನಿಮರ್ ಪ್ರದೇಶ 28 / 230
ಬಿಜೆಪಿ - 04 - 08
ಕಾಂಗ್ರೆಸ್ - 15-19
ಬಿಎಸ್‌ಪಿ- 00 - 00
ಪಕ್ಷೇತರರು - 01 - 02
ಮಲ್ವಾ ಪ್ರದೇಶ- 45 / 230
ಬಿಜೆಪಿ - 20 - 22
ಕಾಂಗ್ರೆಸ್ - 19-21
ಬಿಎಸ್‌ಪಿ - 00 - 00
ಪಕ್ಷೇತರರು - 00 - 02
ಬೋಪಾಲ್ ಪ್ರದೇಶ- 25 /230
ಬಿಜೆಪಿ - 13 - 16
ಕಾಂಗ್ರೆಸ್ - 09-11
ಬಿಎಸ್‌ಪಿ - 00 - 00
ಪಕ್ಷೇತರರು - 00 - 01
ಮಹಾಕೌಶಲ್ ಪ್ರದೇಶ - 42 /230
ಬಿಜೆಪಿ - 13 - 16
ಕಾಂಗ್ರೆಸ್ - 26-31
ಬಿಎಸ್‌ಪಿ- 00 - 00
ಪಕ್ಷೇತರರು - 00 - 01

ಬುಂದೇಲಖಂಡ ಪ್ರದೇಶ - 56 /230
ಬಿಜೆಪಿ - 08 - 15
ಕಾಂಗ್ರೆಸ್ - 38-43
ಬಿಎಸ್‌ಪಿ- 00- 02
ಪಕ್ಷೇತರರು - 00- 02
ಚಂಬಲ್ ಪ್ರದೇಶ - 34 /230
ಬಿಜೆಪಿ - 03 - 06
ಕಾಂಗ್ರೆಸ್ - 27- 32
ಬಿಎಸ್‌ಪಿ - 00 - 01
ಪಕ್ಷೇತರ - 00 - 01
ಮಧ್ಯಪ್ರದೇಶದ ಒಟ್ಟಾರೆ ಸಮೀಕ್ಷೆ
ಒಟ್ಟು ಸೀಟುಗಳು - 230/230
ಬಿಜೆಪಿ - 61 - 83
ಕಾಂಗ್ರೆಸ್ - 134-157
ಬಿಎಸ್‌ಪಿ - 00 - 03
ಪಕ್ಷೇತರ - 01 - 09
ಪಕ್ಷವಾರು ಮತ ಪ್ರಮಾಣ
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಶೇ 40 ಮತಗಳು ದೊರೆಯಲಿವೆ. ಕಾಂಗ್ರೆಸ್‌ಗೆ ಶೇ 48 ಮತಗಳು ಸಿಗಲಿವೆ. ಪಕ್ಷೇತರರಿಗೆ ಶೇ 8.3 ಮತಗಳು ದೊರೆಯಲಿವೆ ಎಂದು ಪೋಲ್ ಟ್ರ್ಯಾಕರ್ ಸಮೀಕ್ಷೆ ಹೇಳಿದೆ.












Click it and Unblock the Notifications