• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ತ ಮಧ್ಯಪ್ರದೇಶ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಇತ್ತ RSS ಟ್ರೆಂಡಿಂಗ್!!

|

ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ನಡೆಯಬಹುದೆಂದೇ ನಿರೀಕ್ಷಿಸಲಾಗಿರುವ ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಅತ್ತ, ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆಯೇ ಇತ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿರುವ 112 ಪುಟಗಳ ಪ್ರಣಾಳಿಕೆಯಲ್ಲಿ RSS ಸಂಘಟನೆಯ ಬಗ್ಗೆ ಕಾಂಗ್ರೆಸ್ ಪ್ರಸ್ತಾವಿಸಿರುವುದರಿದ ಕಾಂಗ್ರೆಸ್ ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಿದೆ. #CongressFearsRSS ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಕಾಂಗ್ರೆಸ್ ಪರ ಮತ್ತು ವಿರೋಧ ಟ್ವೀಟುಗಳು ಬಂದು ಬೀಳುತ್ತಿವೆ. (ಆರೆಸ್ಸೆಸ್ ಶಾಖೆಗಳಿಗೆ ಸರ್ಕಾರಿ ಸಿಬ್ಬಂದಿ ಪ್ರವೇಶ ನಿಷಿದ್ಧ: ಕೈ ಪ್ರಣಾಳಿಕೆ)

ಸರ್ಕಾರಿ ಕಟ್ಟಡ, ಕಚೇರಿ ಆವರಣಗಳಲ್ಲಿ ಆರೆಸ್ಸೆಸ್ ಶಾಖೆಗಳಿಗೆ ನಿಷೇಧ. ಸರ್ಕಾರಿ ಸಿಬ್ಬಂದಿಗಳು ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡುವುದಕ್ಕೆ ಇರುವ ಅನುಮತಿಯನ್ನು ಹಿಂಪಡೆಯುವುದು ಸೇರಿದಂತೆ ಅನೇಕ ಅಂಶಗಳು ಕಾಂಗ್ರೆಸ್ ತನ್ನ ಮಧ್ಯಪ್ರದೇಶದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದೆ.

'ಕಾಂಗ್ರೆಸ್ ವಚನ್ ಪತ್ರ' ಎನ್ನುವ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ಬಹುಸಂಖ್ಯಾತರನ್ನು ಓಲೈಸುವ ಬಹಳಷ್ಟು ಅಂಶಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದು ಗಮನಿಸಬೇಕಾದ ಅಂಶ.

ಚಿತ್ರಕೂಟದಿಂದ ಮಧ್ಯಪ್ರದೇಶ ಗಡಿಯವರೆಗೆ ಶ್ರೀರಾಮ ಕ್ರಮಿಸಿದ ಪಥದ ಮರುನಿರ್ಮಾಣ, ಸಂಸ್ಕೃತ ಭಾಷೆ ಉತ್ತೇಜನಕ್ಕೆ ಹೊಸ ವಿಶ್ವವಿದ್ಯಾಲಯ, ನರ್ಮದಾ-ತಪತೀ-ಕ್ಷಿಪ್ರಾ-ಮಂದಾಕಿನಿ ನದಿಗಳಿಗೆ ಟ್ರಸ್ಟ್‌ ಸ್ಥಾಪನೆ ಮುಂತಾದ ಭರವಸೆಗಳೂ ಪ್ರಣಾಳಿಕೆಯಲ್ಲಿವೆ. ಕಾಂಗ್ರೆಸ್ ಪರ ಮತ್ತು ವಿರೋಧ ಟ್ವೀಟುಗಳು, ಮುಂದೆ ಓದಿ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯನ್ನು ನಡೆಸಲು ಅನುಮತಿಯಿಲ್ಲ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯನ್ನು ನಡೆಸಲು ಅನುಮತಿಯಿಲ್ಲ

ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಸರಕಾರೀ ಕಚೇರಿ ಮತ್ತು ಕಟ್ಟಡಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯನ್ನು ನಡೆಸಲು ಅನುಮತಿ ನೀಡುವುದಿಲ್ಲ. ಇದರ ಜೊತೆಗೆ, ಸರಕಾರೀ ಸಿಬ್ಬಂದಿಗಳು ಕೂಡಾ ಶಾಖೆಯಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ವಿಧಿಸಲಾಗುವುದು. ಈ ಸಂಬಂಧ ಸದ್ಯವಿರುವ ಸರಕಾರೀ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ.

ಆರ್ ಎಸ್ ಎಸ್ ಒಂದು ಸಿದ್ದಾಂತವನ್ನು ಪಾಲಿಸಿಕೊಂಡು ಬರುತ್ತಿದೆ

ಆರ್ ಎಸ್ ಎಸ್ ಒಂದು ಸಿದ್ದಾಂತವನ್ನು ಪಾಲಿಸಿಕೊಂಡು ಬರುತ್ತಿದೆ

ಏನಿದು ಮೂರ್ಖತನ, ಆರ್ ಎಸ್ ಎಸ್ ಒಂದು ಸಿದ್ದಾಂತವನ್ನು ಪಾಲಿಸಿಕೊಂಡು ಬರುತ್ತಿದೆ. ಇನ್ನೊಬ್ಬರ ಸಿದ್ದಾಂತವನ್ನು ನಿರ್ಬಂಧಿಸಲು ಇವರು ಯಾರು? ಕಾಂಗ್ರೆಸ್ಸಿಗೆ ಇರುವ ಕೊನೆಯ ಅಸ್ತ್ರ ಇದೊಂದೇ. 1932ರಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸವನ್ನು ಈಗ ಮತ್ತೆ ಕಾಂಗ್ರೆಸ್ ಮಾಡುತ್ತಿದೆ ಎನ್ನುವ ಟ್ವೀಟ್.

ದೇಶಕ್ಕೆ ಆರ್ ಎಸ್ ಎಸ್ ಮೇಲೆ ಯಾವುದೇ ನಂಬಿಕೆಯಿಲ್ಲ

ದೇಶಕ್ಕೆ ಆರ್ ಎಸ್ ಎಸ್ ಮೇಲೆ ಯಾವುದೇ ನಂಬಿಕೆಯಿಲ್ಲ

#CongressFearsRSS ಹ್ಯಾಷ್ ಟ್ಯಾಗ್ ಅನ್ನು ಬಿಜೆಪಿ ಮತ್ತು ಸಂಘಪರಿವಾರವೇ ಟ್ರೆಂಡಿಂಗ್ ಮಾಡುತ್ತಿದೆ. ಆದರೂ, ಬಿಜೆಪಿ ಮತ್ತು ಸಂಘದ ವಿರುದ್ದವೇ ಟ್ವೀಟುಗಳು ಬಂದು ಬೀಳುತ್ತಿವೆ. ಇದರರ್ಥ, ದೇಶಕ್ಕೆ ಆರ್ ಎಸ್ ಎಸ್ ಮೇಲೆ ಯಾವುದೇ ನಂಬಿಕೆಯಿಲ್ಲ ಎಂದಾಯಿತು. ಕಾಂಗ್ರೆಸ್ ಒಂದೇ ಅಲ್ಲ, ಇಡೀ ದೇಶವೇ ಆರ್ ಎಸ್ ಎಸ್ ವಿರುದ್ದವಿದೆ, ಯಾಕೆಂದರೆ ಅವರು ದೇಶ ವಿರೋಧಿಗಳು.

ಸೈನಿಕರಿಗೆ ರಕ್ತದಾನವನ್ನು ಮಾಡಿತ್ತು

ಸೈನಿಕರಿಗೆ ರಕ್ತದಾನವನ್ನು ಮಾಡಿತ್ತು

ಈ ದೇಶದಲ್ಲಿ ಮೊದಲು ರಕ್ತದಾನ ಶಿಬಿರ ನಡೆಸಿದ್ದು ಆರ್ ಎಸ್ ಎಸ್ ಸಂಘಟನೆ. 1971ರಲ್ಲಿ ಭಾರತ-ಪಾಕ್ ಯುದ್ದ ನಡೆಯುತ್ತಿರುವಾಗ, ಸೈನಿಕರಿಗೆ ರಕ್ತದಾನವನ್ನು ಮಾಡಿತ್ತು. ಹೀಗಿರುವಾಗ, ಕಾಂಗ್ರೆಸ್ ಈ ಸಂಘಟನೆಯನ್ನು ಬ್ಯಾನ್ ಮಾಡಲು ಹೊರಟಿರುವುದು, ಸಂವಿಧಾನ ವ್ಯವಸ್ಥೆಯನ್ನು ಹತ್ತಿಕ್ಕುವುದಲ್ಲದೇ ಮತ್ತಿನ್ನೇನು ಎನ್ನುವ ಟ್ವೀಟ್.

ಮೊದಲು ಕಾಂಗ್ರೆಸ್ ಮುಕ್ತ್ ಭಾರತ್ ಬಗ್ಗೆ ಚಿಂತಿಸೋಣ

ಮೊದಲು ಕಾಂಗ್ರೆಸ್ ಮುಕ್ತ್ ಭಾರತ್ ಬಗ್ಗೆ ಚಿಂತಿಸೋಣ

ಮೊದಲು ಕಾಂಗ್ರೆಸ್ ಮುಕ್ತ್ ಭಾರತ್ ಬಗ್ಗೆ ಚಿಂತಿಸೋಣ. ಈ ಎಲ್ಲಾ ಕಾರಣಕ್ಕಾಗಿ ಆರ್ ಎಸ್ ಎಸ್ ಸಂಘಟನೆಯನ್ನು ನಿರ್ಬಂಧಿಸದಂತೆ ನೋಡಬೇಕು. ಅದು ಯಾವುದೆಂದರೆ, ಮತಾಂತರ, ಪಾಕಿಸ್ತಾನ, ಪಾಶ್ಚಿಮಾತ್ಯ ಮಾಧ್ಯಮ, ಗ್ಲೋಬಲ್ ಟೈಮ್ಸ್, ನಕ್ಸಲರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ವಿದೇಶಿ ಎನ್ಜಿಓ, ಹುರಿಯತ್...

English summary
Ahead of the MP elections, the Congress party in its manifesto has assured that if voted to power in the state then it will not allow the Rashtriya Swayamsevak Sangh (RSS) to conduct their (shakha) sessions in government buildings. #CongressFearsRSS hashtag trending in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X