ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಬದುಕುಳಿಯಲಿಲ್ಲ 400 ಅಡಿ ಬೋರ್‌ವೆಲ್‌ಗೆ ಬಿದ್ದ 8 ವರ್ಷದ ಬಾಲಕ

|
Google Oneindia Kannada News

ಬೇತುಲ್ ಡಿಸೆಂಬರ್ 10: ಡಿಸೆಂಬರ್ 6 ರಂದು ಮಧ್ಯಪ್ರದೇಶದ ಬೇತುಲ್‌ನಲ್ಲಿ 400 ಅಡಿ ಬೋರ್‌ವೆಲ್‌ಗೆ ಬಿದ್ದ 8 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. 65 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ 400 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಎಂಟು ವರ್ಷದ ಬಾಲಕ ತನ್ಮಯ್ ಸಾಹು ದೇಹವನ್ನು ಹೊರತೆಗೆಯಲಾಗಿದೆ. ಶವ ಪರೀಕ್ಷೆಗಾಗಿ ಆತನ ಮೃತದೇಹವನ್ನು ಬೇತುಲ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಪ್ರದೇಶದಾದ್ಯಂತ ಕಲ್ಲುಗಳ ಉಪಸ್ಥಿತಿಯು ನಾಲ್ಕು ದಿನಗಳಿಗಿಂತ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯನ್ನು ವಿಳಂಬಗೊಳಿಸಿತು.

ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕ ಬೇರೆ ಹೊಲಕ್ಕೆ ಹೋಗಿ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಬಾಲಕನನ್ನು ಹೊರತರಲು ಸಮಾನಾಂತರ ಸುರಂಗ ಕೊರೆಯಲು ಮಣ್ಣು ತೆಗೆಯುವ ಯಂತ್ರಗಳನ್ನು ತರಲಾಗಿತ್ತು.

ಶುಕ್ರವಾರ ತಡರಾತ್ರಿ ಅವರನ್ನು ಹೊರ ತೆಗೆಯುವವರೆಗೂ ತನ್ಮಯ್ ಸಾಹು 400 ಅಡಿ ಆಳದ ಬೋರ್‌ವೆಲ್‌ನ 55 ಅಡಿಗಳಲ್ಲಿ ಸಿಲುಕಿಕೊಂಡಿದ್ದನು. ಜಿಲ್ಲಾಡಳಿತದ ಪ್ರಕಾರ ಬಾಲಕನನ್ನು ಹೊರತೆಗೆಯುವಾಗಲೇ ಆತ ಮೃತಪಟ್ಟಿದ್ದನು. ಡಿಸೆಂಬರ್ 6 ರಂದು ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ.

Boy who fell into borewell did not survive

"ನಾವು ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ಅವರು ಉಸಿರಾಡುತ್ತಿದ್ದರು. ಬೋರ್‌ವೆಲ್‌ಗೆ ಬಿದ್ದ ದಿನ ನಾವು ಅವರ ಧ್ವನಿಯನ್ನು ಆಲಿಸಿದ್ದೇವೆ. ಡಿಸೆಂಬರ್ 6 ರಂದು ಸಂಜೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು" ಎಂದು ಬಾಲಕನ ತಂದೆ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬಾಲಕನನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಗೃಹ ರಕ್ಷಕ ದಳ ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಬಾಲಕ ಬದುಕುಳಿಯಲಿಲ್ಲ.

English summary
An 8-year-old boy died after falling into a 400 feet borewell in Betul, Madhya Pradesh on December 6. After a 65-hour rescue operation, the body of Tanmay Sahu, an eight-year-old boy who fell into a 400-feet deep borewell, was recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X