ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣದಂಡನೆ

|
Google Oneindia Kannada News

ಭೋಪಾಲ್, ಡಿಸೆಂಬರ್ 4: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ.

ಅಪ್ರಾಪ್ತ ಬಾಲಕಿಯರ (12 ವರ್ಷದೊಳಗಿನ) ಮೇಲೆ ಅತ್ಯಾಚಾರ ಎಸಗುವ ಆರೋಪಿಗೆ ಮರಣದಂಡನೆ ಶಿಕ್ಷೆ ಮಸೂದೆಯನ್ನು ಇಂದು (ಸೋಮವಾರ) ಮಧ್ಯಪ್ರದೇಶ ವಿಧಾನಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಲಾಯಿತು.

ಭೋಪಾಲ್ ಅತ್ಯಾಚಾರ ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ: ಚೌಹಾಣ್ ಭರವಸೆಭೋಪಾಲ್ ಅತ್ಯಾಚಾರ ಅಪರಾಧಿಗಳಿಗೆ ಅತ್ಯುಗ್ರ ಶಿಕ್ಷೆ: ಚೌಹಾಣ್ ಭರವಸೆ

ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಮನುಷ್ಯರಲ್ಲ ಅವರೆಲ್ಲ ರಾಕ್ಷಸರು. ಅವರಿಗೆ ಬದುಕುವ ಹಕ್ಕಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

Madhya Pradesh assembly passes bill awarding death for rape of girls aged 12 or less

ಅಷ್ಟೇ ಅಲ್ಲ ಹುಡುಗಿಯರನ್ನು ಹಿಂಬಾಲಿಸುವುದು, ಪ್ರೀತಿಸುವಂತೆ ಪೀಡಿಸುವುದು ಜಾಮೀನು ರಹಿತ ಅಪರಾಧ, ಅಂಥವರಿಗೆ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು. ಅತ್ಯಾಚಾರಿಗಳಿಗೆ ಮರಣದಂಡನೆ ಹಾಗೂ ದಂಡದ ಮೊತ್ತ ಹೆಚ್ಚಿಸುವ ಬಗ್ಗೆ ಮಸೂದೆಯನ್ನು ಕಳೆದ ತಿಂಗಳು ಮಂಡಿಸಲಾಗಿತ್ತು.

ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಹೊಸ ಕಾನೂನು ಜಾರಿ ಮಾಡುತ್ತಿರುವುದಾಗಿ ಗೃಹ ಸಚಿವ ಭೂಪೇಂದ್ರ ಸಿಂಗ್ ತಿಳಿಸಿದರು.

ಇತ್ತೀಚೆಗೆ ಭೋಪಾಲಿನ ಸೇತುವೆಯೊಂದರ ಕೆಳಗೆ, ಯುವತಿಯೊಬ್ಬಳನ್ನು ಕಟ್ಟಿ ಹಾಕಿ, ಕಾಮುಕರು ಮೂರು ಗಂಟೆಗಳ ಕಾಲ ಸತತವಾಗಿ ಅತ್ಯಾಚಾರ ನಡೆಸಿದ್ದರು.

English summary
The Madhya Pradesh assembly on Monday unanimously passed a bill that will see rapists of girls 12 years or below being hanged till death. The move comes after the Shivraj Singh Chouhan Cabinet approved the bill last week. Called Dand Vidhi (Madhya Pradesh Sanshodhan) Vidheyak, 2017, the bill will be sent to the Centre and will need the assent of the President to become a law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X