Get Updates
Get notified of breaking news, exclusive insights, and must-see stories!

Ugadi 2025: ಕನ್ನಡಿಗರಿಗೆ ಯುಗಾದಿ ಶುಭಾಶಯ ತಿಳಿಸಿದ- ಎಂ ಕೆ ಸ್ಟಾಲಿನ್

ಚೆನ್ನೈ ಮಾರ್ಚ್ 30: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕರ್ನಾಟಕದ ಜನತೆಗೆ ಯುಗಾದಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ತೆಲುಗು ಮತ್ತು ಕನ್ನಡ ಮಾತನಾಡುವ ಜನರಿಗೆ ಯುಗಾದಿ ಶುಭಾಶಯ ಕೋರಿದ್ದಾರೆ. ಈ ಹೊಸ ವರ್ಷವು ಅವರ ಭಾಷಾ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸಲು ಅವರನ್ನು ಪ್ರೋತ್ಸಾಹಿಸಲಿ ಎಂದು ಹಾರೈಸಿದ್ದಾರೆ.

ಹೌದು ಕಳೆದ ದಿನ ಭಾಷಣದ ವೇಳೆ ಎಂಕೆ ಸ್ಟಾಲಿನ್, "ಯುಗಾದಿ ಪಚಡಿ, ಮಾವಿನ ಎಲೆ ತೋರಣ ಮತ್ತು ರಂಗೋಲಿಯ ಸಂಭ್ರಮದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುವ ನನ್ನ ಎಲ್ಲಾ ತೆಲುಗು ಮತ್ತು ಕನ್ನಡ ಸಹೋದರ ಸಹೋದರಿಯರಿಗೆ ಯುಗಾದಿಯ ಶುಭಾಶಯಗಳು. ಈ ಯುಗಾದಿ ಹಬ್ಬವು ನಮ್ಮ ಭಾಷೆ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸಲು ಪ್ರೋತ್ಸಾಹವಾಗಲಿ" ಎಂದು ಶುಭ ಕೋರಿದ್ದಾರೆ.

M K Stalin extends Ugadi greetings to Telugu Kannada speaking people

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಕೂಡ, ಹೊಸ ವರ್ಷದ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಿರುವ ಎಲ್ಲಾ ತೆಲುಗು ಮತ್ತು ಕನ್ನಡ ಭಾಷಿಕ ಜನರಿಗೆ ತಮ್ಮ ಹೃತ್ಪೂರ್ವಕ ಯುಗಾದಿ ಶುಭಾಶಯಗಳನ್ನು ತಿಳಿಸಿದರು.

ಯುಗಾದಿಯ ಶುಭ ಕೋರಿ ಎಂ ಕೆ ಸ್ಟಾಲಿನ್ ಹೇಳಿದ್ದೇನು?

"ತೆಲುಗು ಮತ್ತು ಕನ್ನಡ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿವೆ. ಡಿಎಂಕೆ ಸರ್ಕಾರವು ಯಾವಾಗಲೂ ರಾಜ್ಯದ ಭಾಷಾ ಅಲ್ಪಸಂಖ್ಯಾತರನ್ನು ಗೌರವಿಸುತ್ತದೆ ಮತ್ತು ಅವರನ್ನು ಸ್ನೇಹಿತರಂತೆ ನೋಡಿಕೊಂಡಿದೆ. ಹಿಂದಿನ ಎಐಎಡಿಎಂಕೆ ಸರ್ಕಾರ ಈ ಹಬ್ಬಕ್ಕೆ ಘೋಷಿಸಲಾದ ರಜೆಯನ್ನು ರದ್ದುಗೊಳಿಸಿದರೂ 2006ರಲ್ಲಿ ರಜೆಯ ಸವಲತ್ತನ್ನು ಪುನಃಸ್ಥಾಪಿಸಿದ್ದು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರ' ಎಂದು ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್ ಹೇಳಿದರು.

M K Stalin extends Ugadi greetings to Telugu Kannada speaking people

"ಮಾರ್ಚ್ 22ರಂದು ದಕ್ಷಿಣ ರಾಜ್ಯಗಳು ಗಡಿ ವಿಂಗಡಣೆ ಬೆದರಿಕೆಯನ್ನು ಎದುರಿಸುತ್ತಿರುವಾಗ ನಾವು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದೇವೆ. ನಮ್ಮ ಕ್ರಮಕ್ಕೆ ದೇಶಾದ್ಯಂತ ಬೆಂಬಲ ಹೆಚ್ಚುತ್ತಿದೆ" ಎಂದು ಸ್ಟಾಲಿನ್ ನಗರದಲ್ಲಿ ಕರೆದಿದ್ದ ನ್ಯಾಯಯುತ ಗಡಿ ವಿಂಗಡಣೆ ಸಭೆಯನ್ನು ನೆನಪಿಸಿಕೊಂಡರು.

ದಕ್ಷಿಣ ರಾಜ್ಯಗಳ ಇಂದಿನ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವೆಂದರೆ ಅರ್ಧ ಶತಮಾನದ ಹಿಂದೆ ಹಿಂದಿ ಹೇರಿಕೆಯ ವಿರುದ್ಧ ಡಿಎಂಕೆ ನಡೆಸಿದ್ದ ಭಾಷಾ ಯುದ್ಧ. ಈಗ ಮತ್ತೊಮ್ಮೆ ಹಿಂದಿ ಹೇರಿಕೆ ಮೂಲಕ ಆ ಅಭಿವೃದ್ಧಿ ಮತ್ತು ನಮ್ಮ ಭಾಷಾ ಗುರುತನ್ನು ನಾಶಮಾಡಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ. ನಿಮ್ಮ ಮಕ್ಕಳಿಗೆ ಮಾತೃಭಾಷೆಯ ಸೌಂದರ್ಯವನ್ನು ಅರಿತುಕೊಳ್ಳುವಂತೆ ಮಾಡಬೇಕ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಅಲ್ಲದೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಆಕ್ರಮಣವನ್ನು ನಿಲ್ಲಿಸಲು ಮುಂದಿನ ಪೀಳಿಗೆಯನ್ನು ಸಿದ್ಧಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇದು ನನ್ನ ಯುಗಾದಿ ಹೊಸ ವರ್ಷದ ಸಂದೇಶ ಮತ್ತು ನಿಮಗೆ ವಿನಂತಿ ಎಂದು ಅವರು ಮನವಿ ಮಾಡಿದರು.

"ಭಾಷಾ ವ್ಯತ್ಯಾಸದ ಹೊರತಾಗಿಯೂ ತೆಲುಗು ಮತ್ತು ಕನ್ನಡ ಜನರು ನೂರಾರು ವರ್ಷಗಳಿಂದ ಜೊತೆಯಾಗಿ ತಮ್ಮದೇ ಆದ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ಇತರರೊಂದಿಗೆ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ. ಸಮೃದ್ಧ ಜೀವನಕ್ಕಾಗಿ ಅವರ ಪ್ರಯತ್ನಗಳು ಯಶಸ್ವಿಯಾಗಲಿ" ಎಂದು ಎಂ ಕೆ ಸ್ಟಾಲಿನ್ ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+