ಶ್ರೀನಗರದಲ್ಲಿ ಸಾರ್ವಜನಿಕರಿಂದಲೇ ಹತ್ಯೆಯಾದ ಪೊಲೀಸ್: ಮೂವರ ಬಂಧನ
ಶ್ರೀನಗರ, ಜುಲೈ 7: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕಳೆದ ವಾರ ಕೆಲಮಂದಿ ಡಿವೈಎಸ್ ಪಿ ಮೊಹಮ್ಮದ್ ಆಯೂಬ್ ಪಂಡಿತ್ ಎಂಬುವವರನ್ನು ಹೊಡೆದು ಸಾಯಿಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಶ್ರೀನಗರ ಪೊಲೀಸರು ಹೇಳಿದ್ದಾರೆ.
ಜೂನ್ 22 ಸಂಜೆ ಇಲ್ಲಿನ ನೌಹಟ್ಟಾ ಎಂಬ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಯ ಬಳ ಪ್ರಾರ್ಥನೆ ಮುಗಿಸಿ ಬರುತ್ತಿದ್ದವರ ಫೋಟೋ ಕ್ಲಿಕ್ಕಿಸುತ್ತಿದ್ದ ಡಿವೈಎಸ್ ಪಿ ಮೇಲೆ ಸಾರ್ವಜನಿಕರು ಕಿಡಿಕಾರಿದ್ದರು. ಸಾರ್ವಜನಿಕರ ಆಕ್ರೋಶ ನಿಯಂತ್ರಿಸುವ ಸಲುವಾಗಿ ಆಯೂಬ್ ಪಂಡಿತ್ ಗಾಳಿಯಲ್ಲಿ ಗುಂಡು ಹಾರಿಸಿದ್ದರ. ಇದರಿಂದ ಉದ್ರಿಕ್ತರಾದ ಜನ, ಆಯೂಬ್ ಪಂಡಿತ್ ರನ್ನು ಹೊಡೆದು ಸಾಯಿಸಿದ್ದರು. ಈ ಕುರಿತು ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.












Click it and Unblock the Notifications