• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್‌ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯ

By ಅನುಜ್ ಕಾರಿಯಪ್ಪ
|
Google Oneindia Kannada News

ಹೈದರಾಬಾದ್, ಮಾರ್ಚ್ 6: ಜಾಗತಿಕ ಆರೋಗ್ಯ ಪೂರೈಕೆ ವ್ಯವಸ್ಥೆಯು ಇಂದು ಬಹು ಮಾದರಿಗಳಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಹೈದರಾಬಾದ್ ಐ ಇನ್‌ಸ್ಟಿಟ್ಯೂಟ್ (ಎನ್‌ಇಐ) ನಿರ್ವಹಿಸುತ್ತಿರುವ ಮಾಧಾಪುರ ಕೇಂದ್ರದ ಎಲ್‌ವಿ ಪ್ರಸಾದ್ ಐ ಇನ್‌ಸ್ಟಿಟ್ಯೂಟ್ (ಎಲ್‌ವಿಪಿಇಐ), ಸಮಾಜದ ಎಲ್ಲ ವರ್ಗದವರಿಗೂ ನೇತ್ರ ಸಮಸ್ಯೆಗಳಿಗೆ ಗುಣಮಟ್ಟದ ಕಣ್ಣಿನ ಆರೈಕೆ ಹಾಗೂ ಚಿಕಿತ್ಸೆಯನ್ನು ಒದಗಿಸುತ್ತಿದೆ.

34 ವರ್ಷಗಳ ಹಿಂದೆ, ಹೈದರಾಬಾದ್‌ನಲ್ಲಿ 1987ರಿಂದ ಇದು ಮೊದಲ ಆಸ್ಪತ್ರೆಯಾಗಿದ್ದಾಗಿನಿಂದ ಎಲ್‌ವಿಪಿಇಐ 'ಮೂರು ಇ' ಗಳಾದ ಧರ್ಮ, ದಕ್ಷತೆ ಮತ್ತು ಶ್ರೇಷ್ಠತೆಯನ್ನು ತನ್ನ ಮೂಲ ಮೌಲ್ಯಗಳನ್ನಾಗಿ ನಿಗದಿಗೊಳಿಸಿದೆ.

ಧರ್ಮ ಎನ್ನುವುದು, ಎಲ್ಲ ರೋಗಿಗಳಿಗೂ (ಬಡವರು ಅಥವಾ ಶ್ರೀಮಂತರೆನ್ನದೆ, ಸೇವೆಗೆ ಹಣ ನೀಡಲಿ, ನೀಡದೆ ಇರಲಿ) ಕಾಳಜಿಯಲ್ಲಿ ಕೊರತೆಯಿಲ್ಲದಂತೆ ಒಂದೇ ಅಧಿಕ ಗುಣಮಟ್ಟದೊಂದಿಗೆ ಚಿಕಿತ್ಸೆ ನೀಡುವುದಾಗಿದೆ.

ದಕ್ಷತೆ ಎಂದರೆ, ಲಭ್ಯವಿರುವ ಅತ್ಯುತ್ತಮ ಸಾಧನಗಳು ಮತ್ತು ತಂತ್ರಜ್ಞಾನಗಳನ್ನು ಬಳಸುವುದು, ಸಂಶೋಧನೆಯ ಫಲಿತಾಂಶಗಳನ್ನು ಪ್ರಯೋಗಾತ್ಮಕ ಅಭ್ಯಾಸವಾಗಿ ಪರಿವರ್ತಿಸುವುದು ಮತ್ತು ಅಗತ್ಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುವುದು ಅಥವಾ ಬದಲಿಸುವುದು.

ಶ್ರೇಷ್ಠತೆಯು, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ಹೀಗೆ ನಾಲ್ಕು ರಾಜ್ಯಗಳಲ್ಲಿ ವಿವಿಧ ಕ್ಯಾಂಪಸ್‌ಗಳಲ್ಲಿ ಇರುವ ಎಲ್ಲ ಆಸ್ಪತ್ರೆಗಳಲ್ಲಿಯೂ ಎಲ್‌ವಿಪಿಇಐ ತನ್ನ ಬೃಹತ್ ಗುರಿಯನ್ನು ಈಡೇರಿಸಲು ಪ್ರಯತ್ನಿಸುವುದಾಗಿದೆ.

ಎಲ್‌ವಿ ಪ್ರಸಾದ್ ಕಣ್ಣಿನ ಸಂಸ್ಥೆಯು ರೋಗಿಗಳ ಸಮಗ್ರ ಆರೈಕೆ, ದೃಷ್ಟಿ ಸುಧಾರಣೆ ಹಾಗೂ ಪುನರ್ವಸತಿ ಸೇವೆಗಳನ್ನು ಕೂಡ ನೀಡುತ್ತಿದೆ.

ಸಮಾಜದ ಅಂಚಿನಲ್ಲಿರುವ ಜನಸಂಖ್ಯೆಗೆ ಕಣ್ಣಿನ ಆರೈಕೆಯ ಸೌಲಭ್ಯವನ್ನು ಒದಗಿಸಲು ಕಣ್ಣಿನ ಆರೋಗ್ಯ ವ್ಯವಸ್ಥೆ ಸೃಷ್ಟಿಸುವ ನಿಟ್ಟಿನಲ್ಲಿ ಎಲ್‌ವಿ ಪ್ರಸಾಸ್ ನೇತ್ರ ಸಂಸ್ಥೆಯು ಕುಗ್ರಾಮಗಳಲ್ಲಿ ಪ್ರಾಥಮಿಕ ನೇತ್ರ ಚಿಕಿತ್ಸಾ ಕೇಂದ್ರಗಳಾದ 'ವಿಷನ್ ಸೆಂಟರ್‌'ಗಳನ್ನು ಹೊಂದಿದೆ.

ಎಲ್‌ವಿಪಿಇಐನ ಪ್ರತಿ ಸ್ಥಳಗಳಲ್ಲಿಯೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಶೇ 50ರಷ್ಟು ರೋಗಿಗಳನ್ನು ಪಾವತಿ ರಹಿತ ವರ್ಗಗಳಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಕಳೆದು ಹಲವು ವರ್ಷಗಳಲ್ಲಿ, ಸಮರ್ಪಣಾ ಮತ್ತು ಚಿಂತನಾಶೀಲ ವ್ಯಕ್ತಿಗಳು, ಕಾರ್ಪೊರೇಟ್ ಮತ್ತು ಪಿಎಸ್‌ಯುಗಳ ಔದಾರ್ಯದಿಂದ, ತಮ್ಮ ಕೊಡುಗೆ ಸಲ್ಲಿಸುವ ಅವಕಾಶಗಳ ಪರಂಪರೆಯ ಭಾಗವಾಗಿ ದೃಷ್ಟಿ ಮರಳಿಸುವಂತೆ ಮಾಡಿದ್ದರಿಂದ, ಸಾವಿರಾರು ಜನರು ತಮ್ಮ ದೃಷ್ಟಿಗಳನ್ನು ಮರಳಿ ಪಡೆದಿದ್ದಾರೆ.

ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲೆಡೆ 4 ತೃತೀಯ, 20 ಎರಡನೆಯ ಹಾಗೂ 200ಕ್ಕೂ ಅಧಿಕ ವಿಷನ್ ಕೇಂದ್ರಗಳಲ್ಲಿ ಕಣ್ಣಿನ ಪೊರೆಯಿಂದ ಕ್ಯಾನ್ಸರ್‌ವರೆಗಿನ ಶೇ 50ರಷ್ಟು ರೋಗಿಗಳಿಗೆ ನಾನ್ ಪೇಯಿಂಗ್ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ.

ಕೋವಿಡ್-19ಕ್ಕೆ ಎಲ್‌ವಿ ಪ್ರಸಾದ್ ನೇತ್ರ ಸಂಸ್ಥೆಯು ತೆಗೆದುಕೊಂಡ ಚಟುವಟಿಕೆಗಳ ಪಟ್ಟಿ ಕೆಳಗಿದೆ.

* ಲಾಭಕ್ಕಾಗಿ ಅಲ್ಲದ ಸಂಸ್ಥೆಯಾಗಿರುವ ನಾವು ಅಲ್ಪ ಸವಲತ್ತಿನ ಜನರಿಗೆ ಶೇ 50ರಷ್ಟು ಸೇವೆಗಳನ್ನು ಉಚಿತವಾಗಿ ಒದಗಿಸುವುದನ್ನು ಮುಂದುವರಿಸಿದ್ದೇವೆ ಮತ್ತು ಅತ್ಯಂತ ಕಷ್ಟದಲ್ಲಿರುವವರಿಗೆ ಸೇವೆ ಸಲ್ಲಿಸುವುದಕ್ಕೆ ಬದ್ಧರಾಗಿದ್ದೇವೆ.

* ಸರ್ಜಿಕಲ್ ಕೇರ್ ಸೇರಿದಂತೆ ತುರ್ತು ಸೌಲಭ್ಯ

* ಮನೆಯಲ್ಲಿಯೇ ಇದ್ದು ಹೆಚ್ಚಿನ ಆರೈಕೆ ಬೇಕಾಗುವ ರೋಗಿಗಳಿಗೆ ಟೆಲಿ ಕನ್ಸಲ್ಟೇಷನ್ ನೆರವು ನೀಡಲಾಗುತ್ತಿದೆ.

* ಕಡಿಮೆ ವೆಚ್ಚ, ಸುಲಭ ತಯಾರಿಕೆಯ ಓಎಸ್ ವೈಸರ್ಸ್ (ರಕ್ಷಣೆ ಒದಗಿಸುವ ಫೇಸ್‌ ಗೇರ್‌) ಮತ್ತು ವೆಂಟಿಲೇಟರ್‌ಗಳು.

* ದೃಷ್ಟಿ ವೈಕಲ್ಯ ಮತ್ತು ಅಂಧತ್ವವುಳ್ಳ ಜನರಿಗೆ ಪುನರ್ವಸತಿ ಕಾಳಜಿ.

* ನಗರ ಆಸ್ಪತ್ರೆಗಳಲ್ಲಿ ನವಜಾತ ಮಕ್ಕಳಿಗೆ ಕಣ್ಣಿನ ಪರಿಶೀಲನೆ.

* 2900 ಸದಸ್ಯರು/ಉದ್ಯೋಗಿಗಳು ಉದ್ಯೋಗ ನಷ್ಟ ಅಥವಾ ವೇತನ ಕಡಿತವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ.

English summary
LV Prasad hospital provides excellent, equitable eye care systems to all those in need across four states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X