ವಿಡಿಯೋ : ಲಂಚಕ್ಕಾಗಿ ಪೊಲೀಸರಿಂದ ನಡು ಬೀದಿ ಕಾಳಗ

Posted By:
Subscribe to Oneindia Kannada

ಲಕ್ನೋ, ಜೂನ್ 27: ಲಂಚದ ಹಣವನ್ನು ಹಂಚಿಕೊಳ್ಳುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿ, ನಡು ರಸ್ತೆಯಲ್ಲಿ ಕರ್ತವ್ಯ ನಿರತ ಪೊಲೀಸರು ರಂಪ ರಾಮಾಯಣ ಮಾಡಿದ ವಿಡಿಯೋ ಇಲ್ಲಿದೆ.

ಭಾನುವಾರವೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡಿದ ಈ ವಿಡಿಯೋ ನೋಡಿದ ಮೇಲೆ ಆರೋಪಿತ ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಉತ್ತರಪ್ರದೇಶದ ಪೊಲೀಸ್ ವರಿಷ್ಠರು ಆದೇಶ ಹೊರಡಿಸಿದ್ದಾರೆ.[ಕುಡಿದು ದಾಂಧಲೆ ಆರೋಪ: ಕಿಕ್ಕೇರಿ ಪಿಎಸ್‍ಐ ಅಮಾನತು]

Caught on Camera: Policemen fight in public allegedly over bribe share

ನಾಲ್ವರು ಪೊಲೀಸ್ ಪೇದೆಗಳು ರಸ್ತೆ ಬದಿಯಲ್ಲಿ ಪರಸ್ಪರ ಕಿತ್ತಾಟ ನಡೆಸುತ್ತಿರುವ ದೃಶ್ಯ ನೋಡಿ ಪ್ರತ್ಯಕ್ಷ ದರ್ಶಿಗಳು ಗಾಬರಿಯಾಗಿದ್ದಾರೆ. ಸ್ಥಳೀಯ ಟ್ರಕ್, ವಾಹನಗಳನ್ನು ತಪಾಸಣೆ ಮಾಡಿ ಲಂಚ ಹೊಡೆದುಕೊಳ್ಳುತ್ತಿದ್ದ ಪೊಲೀಸರ ನಡುವೆ ಪೈಪೋಟಿ ಉಂಟಾಗಿದೆ.[ಆಕೆ ಅಪ್ರತಿಮ ಸುಂದರಿ: ಆದರೆ ವೇಶ್ಯೆಯರ ಊರಿನವಳು ಎನ್ನುವ ಕಪ್ಪುಚುಕ್ಕೆ!]

ಆರಂಭದಲ್ಲಿ ನಾಲ್ವರು ಪೊಲೀಸರ ನಡುವೆ ಸಣ್ಣದಾಗಿ ಆರಂಭವಾದ ಜಗಳ ನಂತರ ಕೈ ಕೈ ಮಿಲಾಯಿಸಿ, ಸಾರ್ವಜನಿಕರೆದುರು ತಲೆತಗ್ಗಿಸುವಂತೆ ಮಾಡಿದೆ. ಕಿತ್ತಾಟದಲ್ಲಿ ತೊಡಗಿದ್ದವರ ಪೈಕಿ ಪೇದೆ ವಿಜೇಂದ್ರ ಯಾದವ್ ಅವರನ್ನು ಅಮಾನತು ಮಾಡಲಾಗಿದೆ. ಹೋಂ ಗಾರ್ಡ್ ರೊಬ್ಬರ ಮೇಲೆ ಕ್ರಮ ಜರುಗಿಸಲು ಆದೇಶಿಸಲಾಗಿದೆ ಎಂದು ಹಿರಿಯ ಎಸ್ಪಿ ಮಂಜಿಲ್ ಸೈನಿ ಹೇಳಿದ್ದಾರೆ.[ಸಂಸದ ಸಾಕ್ಷಿ ಮುಂದೆ ಹುಡ್ಗಿ ಪ್ಯಾಂಟ್ ಬಿಚ್ಚಲು ಹೇಳಿದ್ದೇಕೆ?]

ಆದರೆ, ಇದು ಹಳೆ ವಿಡಿಯೋ, ಟ್ರಾಫಿಕ್ ಜಾಮ್ ಸಂಬಂಧವಾಗಿ ನಡೆದ ಜಗಳ ಅಷ್ಟೆ, ಲಂಚಕ್ಕಾಗಿ ಯಾರು ಕಿತ್ತಾಡಿಲ್ಲ ಎಂದು ಎಸ್ಪಿ ಮಂಜಿಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Policemen fight in public allegedly over bribe share was caught on camera. A shocking incident was occurred on Sunday morning at Lucknow, All the policemen involved in brawl are suspended.
Please Wait while comments are loading...