ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LPG price hike: ಕೇಂದ್ರದ ಹೊಸ ವರ್ಷದ ಉಡುಗೊರೆ ಎಂದ ಕಾಂಗ್ರೆಸ್‌

|
Google Oneindia Kannada News

ನವದೆಹಲಿ, ಜನವರಿ 1: ವಾಣಿಜ್ಯ ಅಡುಗೆ ಅನಿಲದ ಬೆಲೆ ಹೆಚ್ಚಳದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಇದು ಜನರಿಗೆ ಸರ್ಕಾರದಿಂದ ಹೊಸ ವರ್ಷದ ಉಡುಗೊರೆ ಮತ್ತು ಇದು ಕೇವಲ ಬೆಲೆ ಹೆಚ್ಚಳದ ಪ್ರಾರಂಭ ಅಷ್ಟೆ ಎಂದು ಹೇಳಿದೆ.

ಹೊಸ ವರ್ಷದ ಮೊದಲ ಉಡುಗೊರೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಈಗ 25 ರೂಪಾಯಿ ಹೆಚ್ಚಳವಾಗಿದೆ. ಇದು ಪ್ರಾರಂಭವಷ್ಟೇ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಕೇಂದ್ರ ಸರ್ಕಾರಿ ವಲಯದ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಜನವರಿ 1ರಿಂದಲೇ ಜಾರಿಗೆ ಬರುವಂತೆ ಬರೋಬ್ಬರಿ 25 ರೂಪಾಯಿಗಳನ್ನು ಏರಿಸಿದೆ.

Breaking; ಹೊಸ ವರ್ಷದಂದೇ ಜೇಬಿಗೆ ಕತ್ತರಿ, ಸಿಲಿಂಡರ್ ಬೆಲೆ ಏರಿಕೆBreaking; ಹೊಸ ವರ್ಷದಂದೇ ಜೇಬಿಗೆ ಕತ್ತರಿ, ಸಿಲಿಂಡರ್ ಬೆಲೆ ಏರಿಕೆ

ವಾಣಿಜ್ಯ ಸಿಲಿಂಡರ್‌ ಕೊಳ್ಳುವ ಗ್ರಾಹಕರು ಈಗ 19 ಕೆಜಿ ಅಡುಗೆ ಅನಿಲ ಸಿಲಿಂಡರ್‌ಗೆ 25 ರೂಪಾಯಿ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ದೇಶೀಯ ಗ್ರಾಹಕರ ದರವು ಬದಲಾಗದೆ ಉಳಿದಿದೆ. ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ದರದಲ್ಲಿ ಹೆಚ್ಚಳವು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪಧಾರ್ಥದ ಹೆಚ್ಚಳವಾಗಲು ಕಾರಣವಾಗುತ್ತೆ. ಸಿಲಿಂಡರ್‌ ಬೆಲೆ ಹೆಚ್ಚಳವನ್ನು ಸಹಜವಾಗಿಯೇ ವ್ಯಾಪಾರಿಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸಬಹುದು. ಆಹಾರ ಪಧಾರ್ಥಗಳ ಬೆಲೆ ಹೆಚ್ಚಾಗಬಹುದು ಎನ್ನಲಾಗಿದೆ.

LPG price hike: Congress criticizes central government as new year gift

ಬೆಲೆ ಏರಿಕೆಯ ನಂತರ, ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ ₹ 1,768, ಮುಂಬೈನಲ್ಲಿ ₹ 1,721, ಕೋಲ್ಕತ್ತಾದಲ್ಲಿ ₹ 1,870 ಮತ್ತು ಚೆನ್ನೈನಲ್ಲಿ ₹ 1,917 ಆಗಿದೆ. ದೇಶದಲ್ಲಿ ಅಡುಗೆ ಅನಿಲದ ಬೆಲೆಗಳು ಕಳೆದೆರಡು ವರ್ಷಗಳಲ್ಲಿ ಏರಿಕೆ ಕಂಡಿದ್ದು, ಜನಸಾಮಾನ್ಯರ ಮನೆಯ ಖರ್ಚುಗಳು ಹೆಚ್ಚಾಗಿವೆ. ಇದರಿಂದ ಪ್ರತಿಪಕ್ಷಗಳಿಂದ ತೀವ್ರ ಟೀಕೆಯನ್ನು ಮಾಡುತ್ತಿವೆ.

LPG price hike: Congress criticizes central government as new year gift

2014ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೃಹಬಳಕೆದಾರರ ಬೆಲೆ ₹ 410 ರಿಂದ ₹ 1,000 ಕ್ಕೆ ಏರಿದೆ. ಇಂಧನ ಬೆಲೆಗಳಲ್ಲಿನ ತ್ವರಿತ ಏರಿಕೆಯೊಂದಿಗೆ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಿಸಿದೆ. ಬೆಲೆಗಳ ಹೆಚ್ಚಳದಿಂದ ಆಗುವ ಎಲ್ಲಾ ಬಗೆಯ ಪರಿಣಾಮವನ್ನು ನಿಭಾಯಿಸಲು ಕುಟುಂಬಗಳು ಹೆಣಗಾಡುತ್ತಿವೆ. ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಕಚ್ಚಾ ತೈಲದ ಅಂತಾರಾಷ್ಟ್ರೀಯ ದರಗಳನ್ನು ಎತ್ತಿ ತೋರಿಸಿದೆ. ಈಗ ಅಂತಾರಾಷ್ಟ್ರೀಯ ದರಗಳು ಇಳಿದಿದ್ದರೂ ದರವನ್ನು ಏಕೆ ಕಡಿತಗೊಳಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.

English summary
Hitting out at the BJP-led Center over the hike in the price of commercial cooking gas, the Congress said it was a New Year gift from the government to the people and that this was just the beginning of the price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X