ಕೊನೆಗೂ ಗ್ರಾಮೀಣ ಭಾಗದ ಗೃಹಬಳಕೆ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಬಳಕೆದಾರರಿಗೆ ಕೇಂದ್ರದಿಂದ ನೆಮ್ಮದಿ ಸುದ್ದಿ

LPG: ದೇಶದ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಸಿಹಿಸುದ್ದಿಯೊಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ LPG ಗ್ಯಾಸ್‌ ಬುಕಿಂಗ್ ನಡುವಿನ ಕಾಯುವಿಕೆ ಅವಧಿಯು ಒಂದೇ ರೀತಿಯಾಗಿರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 45 ದಿನಗಳಿಂದ 25 ದಿನಗಳಿಗೆ ಕಡಿಮೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಯುಎಸ್‌-ಇರಾನ್ ಯುದ್ಧ ಹಾಗೂ ಹಾರ್ಮುಜ್ ಜಲಸಂಧಿಯ ತಡೆಯಿಂದ ಉಂಟಾಗಿದ್ದ ಅಡುಗೆ ಅನಿಲ ಪೂರೈಕೆಯ ಬಿಕ್ಕಟ್ಟು ಈಗ ನಿಧಾನವಾಗಿ ಸುಧಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶಗಳ ಎಲ್‌ಪಿಜಿ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದ್ದು, ರಿಫಿಲ್ ಬುಕಿಂಗ್ ನಡುವಿನ ಕಡ್ಡಾಯ ಕಾಯುವಿಕೆ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಕಡಿಮೆಗೊಳಿಸಿದೆ.

LPG Booking New Rule 45 Days Wait Cut to 25 Days for Rural Users Order By Central Government

ಕೇಂದ್ರ ಸಚಿವರು ಹೇಳಿದ್ದೇನು?

ಈ ಕುರಿತು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಸಚಿವ ಗೋಪಿ ಅವರು ಮಹತ್ವದ ಮಾಹಿತಿಯನ್ನು ತಮ್ಮ ಫೇಸ್‌ಬುಕ್‌ ಮೂಲಕ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ತಡೆಯಲಾಗಿದ್ದು, ಎಲ್‌ಪಿಜಿ ಪೂರೈಕೆಯ ಮೇಲೆ ಒತ್ತಡ ಉಂಟಾಗಿತ್ತು. ಆದ್ದರಿಂದ ಮರು-ಬುಕಿಂಗ್ ನಡುವಿನ ಅವಧಿಯು ನಗರ ಪ್ರದೇಶಗಳಲ್ಲಿ 25 ದಿನಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳಷ್ಟಿತ್ತು ಎಂದು ತಿಳಿಸಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಒಂದೇ ನಿಯಮ

'ಪ್ರಸ್ತುತ ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಮತ್ತು ಮರು-ಬುಕಿಂಗ್ ಕಡಿಮೆಯಾಗಿರುವುದನ್ನು ಪರಿಗಣಿಸಿ, ಕೇಂದ್ರ ಸರ್ಕಾರವು ಈ ನಿರ್ಬಂಧವನ್ನು ಸಡಿಲಗೊಳಿಸಿದೆ. ಈಗ ನಗರ ಅಥವಾ ಗ್ರಾಮೀಣ ಪ್ರದೇಶಗಳೆನ್ನದೆ, ಎಲ್ಲ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರು 25 ದಿನಗಳ ಅಂತರದಲ್ಲಿ ರಿಫಿಲ್ ಬುಕ್ ಮಾಡಬಹುದು,' ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಪೆಟ್ರೋಲಿಯಂ ಸಚಿವಾಲಯವು ರವಾನಿಸಿರುವ ಪತ್ರದ ಪ್ರತಿಯನ್ನೂ ಹಂಚಿಕೊಂಡಿದ್ದು, ಈ ಬದಲಾವಣೆಯನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಸೂಚಿಸಿದ್ದಾರೆ.

ಯುದ್ಧದ ಬಿಕ್ಕಟ್ಟಿನಿಂದಾದ ಸಮಸ್ಯೆಗಳು

ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ವಿರುದ್ಧ ಯುದ್ಧ ಆರಂಭಿಸಿದ ನಂತರ, ಹಾರ್ಮುಜ್ ಜಲಸಂಧಿಯ ಸಾರಿಗೆ ಮಾರ್ಗಕ್ಕೆ ತಡೆಯುಂಟಾಯಿತು. ಜಾಗತಿಕ ತೈಲ ಮತ್ತು ಇಂಧನ ಪೂರೈಕೆ ಜಾಲದಲ್ಲಾದ ವ್ಯತ್ಯಯದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆಯಡಿ (Essential Commodities Act) ಹಲವು ಸಡಿಲಿಕೆ ಹಾಗೂ ನಿಯಂತ್ರಣಗಳನ್ನು ಜಾರಿಗೊಳಿಸಿತ್ತು. ಉದಾಹರಣೆಗೆ ಅಡುಗೆ ಅನಿಲ ತಯಾರಿಕೆಗೆ ಬಳಸುವ 'C3' ಮತ್ತು 'C4' ನಂತಹ ನಿರ್ದಿಷ್ಟ ಗ್ಯಾಸ್‌ಗಳನ್ನು ಕೇವಲ ಎಲ್‌ಪಿಜಿಗೆ ಮಾತ್ರ ಬಳಸುವಂತೆ ಕಡ್ಡಾಯಗೊಳಿಸಲಾಗಿತ್ತು.

ಎಲ್‌ಪಿಜಿ ದರ ಯಾವಾಗೆಲ್ಲಾ ಏರಿಕೆ?

* ಮಾರ್ಚ್: 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ 60 ರೂಪಾಯಿ ಏರಿಕೆ.

* ಜೂನ್: 29 ರೂಪಾಯಿ ಹೆಚ್ಚಳ

* ಪ್ರಸ್ತುತ ದರ: ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 942 ರೂಪಾಯಿಗೆ ಇದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಸಡಿಲಿಕೆ

ಜೂನ್ ತಿಂಗಳ ಆರಂಭದಲ್ಲೇ ಭಾರತ ಸರ್ಕಾರವು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲಿದ್ದ ನಿರ್ಬಂಧಗಳನ್ನು ಹಿಂಪಡೆದಿತ್ತು. ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾರ್ಯಾಚರಣೆಗೆ ತೊಂದರೆ ಆಗದಂತೆ, ಬಿಕ್ಕಟ್ಟಿಗಿಂತ ಮುಂಚಿನ ಬಳಕೆಯ ಶೇಕಡಾ 50ರಷ್ಟು ಪೂರೈಕೆಗೆ ಅವಕಾಶ ನೀಡಲಾಗಿತ್ತು ಹಾಗೂ ತೈಲ ಕಂಪನಿಗಳಿಗೆ ಯಥಾಸ್ಥಿತಿ ಪೂರೈಕೆಗೆ ಸೂಚಿಸಲಾಗಿತ್ತು.

ಸಚಿವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದು, ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪನಿಗಳಿಗೆ (Indian Oil, Bharat Petroleum, HPCL) ರವಾನಿಸಿರುವ ಪತ್ರದ ಪ್ರತಿಯನ್ನೂ ಹಂಚಿಕೊಂಡಿದ್ದಾರೆ. ಗ್ರಾಮೀಣ ಭಾಗದ ಕೋಟ್ಯಂತರ ಕುಟುಂಬಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ಒಟ್ಟಿನಲ್ಲಿ ಈ ನಿರ್ಧಾರದಿಂದಾಗಿ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+