Get Updates
Get notified of breaking news, exclusive insights, and must-see stories!

ಚಲಿಸುವ ಬೈಕ್‌ಮೇಲೆ ಕುಳಿತು ಪ್ರೇಮಿಗಳ ರೊಮ್ಯಾನ್ಸ್: ವಿಡಿಯೋ ಭಾರೀ ವೈರಲ್‌: ಕ್ಯಾಕರಿಸಿ ಉಗಿದ ನೆಟ್ಟಿಗರು

Lovers kissing scene viral: ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅಸಭ್ಯ ವರ್ತನೆ ತೋರುವುದು ಹೆಚ್ಚಾಗುತ್ತಲಿದೆ. ಹಾಗೆಯೇ ಇದೀಗ ಹುಡುಗ-ಹುಡುಗಿ ನಡುರಸ್ತೆಯಲ್ಲೇ ಚಾಲನೆಯಲ್ಲಿರುವ ಬೈಕ್‌ ಮೇಲೆ ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದ್ದು, ಇದಕ್ಕೆ ನೆಟ್ಟಿಗರು ಕೆಂಡಕಾರುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಪ್ರೇಮಿಗಳು ಹುಚ್ಚಾಟ ಮೆರೆದು ಜನರಿಗೆ ತೊಂದರೆ ಮಾಡಿರುವ ಘಟನೆಗಳು ನಡೆದಿದ್ದು, ಅಂತಹವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಆದರೂ ಇಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ. ಇದೀಗ ಪ್ರೇಮಿಗಳಿಬ್ಬರು ಬೈಕ್‌ ಮೇಲೆ ಕುಳಿತು ತಬ್ಬಿಕೊಂಡು ಹುಚ್ಚಾಟ ಮೆರೆದು ಇತರ ವಾಹನ ಸವಾರರಿಗೆ ಕಿರಿಕಿರಿ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

lovers Romance on moving bike in the Middle of Road Video viral

ಇದೀಗ ಉತ್ತರ ಪ್ರದೇಶದಲ್ಲಿಯೂ ಪ್ರೇಮಿಗಳಿಬ್ಬರು ಚಾಲನೆಯಲ್ಲಿರುವ ಬೈಕ್‌ ಮೇಲೆಯೇ ಚುಂಬಿಸುತ್ತಾ, ತಬ್ಬಿಕೊಂಡು ಹೋಗುತ್ತಿರುವ ಘಟನೆ ನಡೆದಿದ್ದು, ಅಲ್ಲಿನ ಪೊಲೀಸರು ಅವರಿಗೆ ಭಾರೀ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ.

ಉತ್ತರ ಪ್ರದೇಶದ ನೋಯ್ದಾದಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಯುವಕನನ್ನು ತಬ್ಬಿಕೊಂಡು ಮುದ್ದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರೇಮಿಗಳ ಈ ಹುಚ್ಚಾಟದಿಂದ ವಾಹನ ಸವಾರರಿಗೆ ಮುಜುಗರ ಹಾಗೂ ತೊಂದರೆಯಾಗಿದೆ. ಸಾರ್ವಜನಿಕವಾಗಿ ಈ ರೀತಿ ವರ್ತಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹಲವರು ನೋಯ್ದಾ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು.

ಬಳಿಕ ಈ ದೂರಿನ ಅನ್ವಯ ನೋಯ್ದಾ ಸಂಚಾರಿ ಪೊಲೀಸರು, ಕಾನೂನಿನ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನಕ್ಕೆ 53,500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅವರು ತಮ್ಮ ಟ್ವಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ನಿಮಗೆ ಮಾನ ಮರ್ಯಾದೆ ಇಲ್ವಾ? ಬೇರೆ ಜಾಗನೇ ಸಿಗಲಿಲ್ವಾ? ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆ ಮಾಡಿಕೊಂಡೇ ನೀವು ಚುಂಬನ ಮಾಡಬೇಕಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಲೇ ಇದ್ದಾರೆ. ಇನ್ನೂ ಕೆಲವರು ನೀವಿಬ್ಬರು ಸಮಾಜಕ್ಕೆ ಏನು ಸಂದೇಶ ಕೊಡುವುದಕ್ಕೆ ಹರಟಿದ್ದೀರಾ? ಇಂತಹ ಕೆಟ್ಟ ಸಂದೇಶ ಕೊಟ್ಟು ಏನು ಸಾಧನೆ ಮಾಡುವುದಕ್ಕೆ ಹೊರಟಿದ್ದೀರಾ? ಅಂತಲೂ ಪ್ರಶ್ನೆ ಮಾಡಿದ್ದಾರೆ. ಇಂತಹ ಘಟನೆಗಳು ಇದೇ ಮೊದಲಲ್ಲ, ಈ ಹಿಂದೆಯೂ ನಡೆದಿವೆ.

ಮೆಟ್ರೋ ಹಾಗೂ ಮೆಟ್ರೋ ನಿಲ್ದಾಣಗಳಲ್ಲೇ ಕೆಲ ಪ್ರೇಮಿಗಳು ಅಸಭ್ಯ ವರ್ತನೆ ತೋರಿ ಸಹ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿವೆ. ಅಲ್ಲದೆ, ಇಂತಹವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಲೇ ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+