Congress Candidates List :‌ ಕಾಂಗ್ರೆಸ್‍ ಕಾರ್ಯಕಾರಿ ಸಮಿತಿ ಮಹತ್ವ ಸಭೆ: ಇನ್ಯಾರಿಗೆ ಎಂಪಿ ಟಿಕೆಟ್‌ ಅದೃಷ್ಟ?

ನವದೆಹಲಿ, ಮಾರ್ಚ್‌ 19: ಲೋಕಸಭಾ ಚುನಾವಣೆ ದಿನಗಣನೆ ಶುರುವಾಗಿದ್ದು, ಕಾಂಗ್ರೆಸ್‌ಗಳನ್ನ ಅಂತಿಮಗೊಳಿಸಲು ಕಸರತ್ತು ನಡೆಸುತ್ತಿದೆ. ಎಐಸಿಸಿ ಚುನಾವಣಾ ಸಮಿತಿ ಸಭೆ ಮಂಗಳವಾರ ಸಭೆ ನಡೆಸಿದ್ದು, ಅಸಮಾಧಾನ, ಬಂಡಾಯದ ತಳಮಳದ ನಡುವೆಯೇ ಬಾಕಿ ಉಳಿದ ಕ್ಷೇತ್ರಗಳಿಗೆ ಸಮರ್ಥರನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದು, ಬಾಕಿ ಉಳಿದ 21 ಲೋಕಸಭಾ ಕ್ಷೇತ್ರದಲ್ಲಿನ ಅಭ್ಯರ್ಥಿ ಆಯ್ಕೆ ಕುರಿತು ಕಾಂಗ್ರೆಸ್‌ ನಾಯಕರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ಪ್ರಕಟಿಸಿದ್ದ 7 ಕ್ಷೇತ್ರಗಳಿಗೆ ಸಂಬಂಧಿಸಿ ಎಲ್ಲ ಕಡೆಯೂ ಒಂದೇ ಹೆಸರು ಶಿಫಾರಸಾಗಿತ್ತು. ಹಾಗಾಗಿ ಯಾವುದೇ ಆತಂಕವಿಲ್ಲದೇ ಪಟ್ಟಿಯನ್ನ ಪ್ರಕಟಿಸಿತ್ತು. ಆದರೆ, ಬಾಕಿಯಿರುವ 21 ಕ್ಷೇತ್ರದ ಪಟ್ಟಿ ಸಿದ್ಧಗೊಳಿಸುವುದು ಸವಾಲಾಗಿ ಕಾಡಿದೆ.

Lok Sabha Poll ticket Fight Continues In Congress Who Will Get Tickets

ಕೆಲ ಕ್ಷೇತ್ರಗಳಲ್ಲಿ ಸಚಿವರನ್ನೇ ಕಣಕ್ಕಿಳಿಸುವ ಪ್ರಸ್ತಾಪವಿದೆ. ಹೆಚ್ಚಿನ ಕಡೆ ಸಮರ್ಥರು ಲಭ್ಯರಿಲ್ಲ ಎಂಬ ಮಾಹಿತಿ ಇದೆ. ಈ ಎಲ್ಲ ಗೊಂದಲಗಳ ನಡುವೆಯೇ ಕಳೆದ ವಾರ ಪಕ್ಷದ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆಸಿ ಪಟ್ಟಿಯನ್ನು ಒಂದು ಹಂತಕ್ಕೆ ತರಲಾಗಿದೆ. ಈ ಸಭೆಯಲ್ಲಿ ಸಂಭಾವ್ಯರ ಹೆಸರನ್ನೂ ಸೂಚಿಸಲಾಗಿದೆ. ರಾಜ್ಯ ನಾಯಕರು ಸೂಚಿಸಿದ ಈ ಪಟ್ಟಿಯ ಕುರಿತು ಮಂಗಳವಾರ ಚುನಾವಣಾ ಸಮಿತಿ ಸಭೆ ಈ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಕುರಿತು ಕಾಂಗ್ರೆಸ್‌ನ ಉನ್ನತ ನಾಯಕತ್ವ ಮಂಗಳವಾರ ಚರ್ಚೆ ನಡೆಸಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಮಿತಿಯ ಇತರ ಸದಸ್ಯರು ಭಾಗವಹಿಸಿದ್ದರು.

ಕರ್ನಾಟಕ, ತೆಲಂಗಾಣ, ಪುದುಚೇರಿ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಅಭ್ಯರ್ಥಿಗಳ ಜೊತೆಗೆ ಆಂಧ್ರಪ್ರದೇಶ ಮತ್ತು ಸಿಕ್ಕಿಂನಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಒಟ್ಟು 60 ರಿಂದ 70 ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಇನ್ನೂ ಕರ್ನಾಟಕದಲ್ಲಿ ಕೆಲವು ಕ್ಷೇತ್ರದಲ್ಲಿ ಟಿಕೆಟ್‌ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಗೊಂದಲವಿಲ್ಲದ ಕ್ಷೇತ್ರಗಳನ್ನ ಕಾಂಗ್ರೆಸ್‌ ಅಂತಿಮಗೊಳಿಸಲಿದೆ ಎಂದು ತಿಳಿದು ಬಂದಿದ್ದು, ಕೆಲ ಕ್ಷೇತ್ರಗಳ ಸಂಬಂಧಿಸಿದ ಮಾಹಿತಿ ಇಲ್ಲಿದೆ ನೋಡಿ.

ಕರ್ನಾಟಕದಲ್ಲಿ ಅಂತಿಮವಾದ ಕ್ಷೇತ್ರಗಳು ಇಲ್ಲಿವೆ

ಬೆಂಗಳೂರು ಉತ್ತರ - ಪ್ರಿಯಾ ಕೃಷ್ಣ

ಬೆಂಗಳೂರು ದಕ್ಷಿಣ - ಸೌಮ್ಯಾ ರೆಡ್ಡಿ

ಕಲಬುರ್ಗಿ- ರಾಧಾಕೃಷ್ಣ

ಉಡುಪಿ ಚಿಕ್ಕಮಂಗಳೂರು - ಜಯಪ್ರಕಾಶ್ ಹೆಗ್ಡೆ

ಚಿತ್ರದುರ್ಗ- ಚಂದ್ರಪ್ಪ

ದಕ್ಷಿಣ ಕನ್ನಡ - ವಿನಯ್ ಕುಮಾರ್ ಸೊರಕೆ

ಚಿಕ್ಕೋಡಿ - ಪ್ರಿಯಾಂಕಾ

ಬೆಳಗಾವಿ - ಮೃಣಾಲ್ ಹೆಬ್ಬಾಳ್ಕರ್

ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್/ ವಿನಯ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+