Congress Candidates List : ಕಾಂಗ್ರೆಸ್ ಪಟ್ಟಿ ಬಹುತೇಕ ಅಂತಿಮ: ಅಧಿಕೃತ ಘೋಷಣೆ ಒಂದೇ ಬಾಕಿ; ಇಲ್ಲಿದೆ ಫೈನಲ್ ಲಿಸ್ಟ್?
ನವದೆಹಲಿ, ಮಾರ್ಚ್ 20: ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಡೆ ಕರ್ನಾಟಕದ ಏಳು ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಚಿಸಿದ್ದು, ಬಾಕಿ ಇರುವ 21 ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಸವಾಲ್ ಆಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿದ್ದಾರೆ. ಕರ್ನಾಟಕದ 21 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದು, ಇಂದು ( ಬುಧವಾರ) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಇನ್ನೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬುಧವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ 28 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನ ಕಾಂಗ್ರೆಸ್ ಹೈಕಮಾಂಡ್ ಪ್ರಕಟಿದೆ.ತುಮಕೂರಿಗೆ ಎಸ್.ಪಿ.ಮುದ್ದೇಹನುಮೇಗೌಡ, ಮಂಡ್ಯಕ್ಕೆ ವೆಂಕಟರಾಮೇಗೌಡ (ಸ್ಟಾರ್ ಚಂದ್ರು), ಬಿಜಾಪುರ ರಾಜು ಅಲಗೂರು, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್, ಹಾವೇರಿಗೆ ಆನಂದಸ್ವಾಮಿ ಗಡ್ಡದೇವರಮಠ, ಹಾಸನಕ್ಕೆ ಎಂ.ಶ್ರೇಯಸ್ಸ ಪಟೇಲ್, ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಹುರಿಯಾಳುಗಳಾಗಿದ್ದಾರೆ.
ಇನ್ನು ಬಾಕಿ ಇರುವ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ ಕೆಲವು ಕ್ಷೇತ್ರಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತಗಾದೆ ತೆಗೆದಿದ್ದರು.ಮಂಗಳವಾರ ನಡೆದ ಸಭೆಯಲ್ಲಿ 16 ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನ ಅಂತಿಮಗೊಳಿಸಿದೆ. ದಾವಣಗೆರೆಗೆ ಪ್ರಭಾ ಮಲ್ಲಿಕಾರ್ಜುನ್,ಬೆಳಗಾವಿ ಕ್ಷೇತ್ರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್‍ಗೆ, ಚಿಕ್ಕೊಡಿಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕ ಅವರಿಗೆ ಟಿಕೆಟ್ ಖಚಿತವಾಗಲಿದೆ.
ಉತ್ತರ ಕನ್ನಡ ಕ್ಷೇತ್ರಕ್ಕೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಈ ಬಾರಿ ಅವಕಾಶ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ಹಾಗು ಯುವ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಭ್ಯರ್ಥಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ರಾಜ್ಯಸಭೆಯ ಮಾಜಿ ಉಪಾಧ್ಯಕ್ಷ ರೆಹಮಾನ್‍ಖಾನ್ ಅವರ ಪುತ್ರ ಮನ್ಸೂರ್ ಆಲಿಖಾನ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಮೈಸೂರು ರಾಜವಂಶಸ್ಥ ಯಧುವೀರ್ ಒಡೆಯರ್ ಬಿಜೆಪಿಯಿಂದ ಕಣದಲ್ಲಿ ಇರುವುದರಿಂದ ಕಾಂಗ್ರೆಸ್ ಎಂ.ಲಕ್ಷಣ್ ಬದಲಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಯತೀಂದ್ರರನ್ನೇ ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದೆ. ಆದರೆ, ಹಲವು ಸ್ಥಳೀಯ ನಾಯಕರು ಯತೀಂದ್ರ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಮೈಸೂರಿನ ಅಭ್ಯರ್ಥಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಹೈಕಮಾಂಡ್ ನಿರೀಕ್ಷಿಸುತ್ತಿದೆ.ಇಂದು ಸಹ ಕಾಂಗ್ರೆಸ್ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದು, ಮಾರ್ಚ್ 22 ರಂದು ಕಾಂಗ್ರೆಸ್ ಪಟ್ಟಿ ಪ್ರಕಟವಾಗಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಫೈನಲ್ ಆದ ಅಂತಿಮ ಪಟ್ಟಿ?
ಚಿತ್ರದುರ್ಗ - ಚಂದ್ರಪ್ಪ
ಬೆಳಗಾವಿ - ಮೃನಾಲ್ ಹೆಬ್ಬಾಳ್ಕರ್
ಚಿಕ್ಕೋಡಿ - ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ - ಸಂಯುಕ್ತ ಶಿವಾನಂದ ಪಾಟೀಲ್
ಹುಬ್ಬಳ್ಳಿ ಧಾರವಾಡ್ - ವಿನೋದ್ ಅಸುಟಿ
ದಾವಣಗೆರೆ - ಡಾ ಪ್ರಭಾ ಮಲ್ಲಿಕಾರ್ಜುನ್
ಕೊಪ್ಪಳ - ರಾಜಶೇಖರ್ ಹಿಟ್ನಾಳ್
ಬೀದರ್ - ರಾಜಶೇಖರ್ ಪಾಟೀಲ್
ದಕ್ಷಿಣ ಕನ್ನಡ- ಪದ್ಮರಾಜ್
ಉಡಪಿ-ಚಿಕ್ಕಮಗಳೂರು - ಜಯಪ್ರಕಾಶ್ ಹೆಗಡೆ
ಬೆಂಗಳೂರು ದಕ್ಷಿಣ - ಸೌಮ್ಯರೆಡ್ಡಿ
ಬೆಂಗಳೂರು ಸೆಂಟ್ರಲ್- ಮನಸೂರ್ ಅಲಿಖಾನ್
ಬೆಂಗಳೂರು ಉತ್ತರ -ಪ್ರೋ ರಾಜೀವ್ ಗೌಡ
ಮೈಸೂರು - ಎಂ ಲಕ್ಷ್ಮಣ್
ರಾಯಚೂರು- ಕುಮಾರ್ ನಾಯ್ಕ್
ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್
ಗೊಂದಲದಲ್ಲಿರುವ ಕ್ಷೇತ್ರಗಳು
1.ಬಳ್ಳಾರಿ
2.ಚಾಮರಾಜನಗರ
3.ಚಿಕ್ಕಬಳ್ಳಾಪುರ
4.ಕೋಲಾರ
5.ಕಲಬುರಗಿ












Click it and Unblock the Notifications