ಲೋಕಸಭೆಗೆ ಇಂದು 4ನೇ ಹಂತದ ಮತದಾನ: ಘಟಾನುಘಟಿ ನಾಯಕರಿಗೆ ಅಗ್ನಿ ಪರೀಕ್ಷೆ- ಕಣದಲ್ಲಿ ಯಾರಿದ್ದಾರೆ?
ದೆಹಲಿ, ಮೇ 13: ಲೋಕಸಭೆಗೆ ಇಂದು 4ನೇ ಹಂತದ ಮತದಾನ ನಡೆಯಲಿದೆ. ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮತದಾನ ನಡೆಯಲಿದೆ. 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಲ್ಲದೇ ಅಖಿಲೇಶ್ ಯಾದವ್‌ನಿಂದ ಮಹುವಾ ಮೊಯಿತ್ರಾ ವರೆಗೆ ಇಂದು ಘಟಾನುಘಟಿ ನಾಯಕರಿಗೆ ಅದೃಷ್ಟ ಪರೀಕ್ಷೆ ಎದುರಾಗಿದೆ.
ಏಳು ಹಂತದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು (ಮೇ 13) ನಡೆಯುತ್ತಿದೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತು ಟಿಎಂಸಿ ನಾಯಕ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಮುಖ ನಾಯಕರ ಚುನಾವಣಾ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ. ನಾಲ್ಕನೇ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

8.73 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 17.70 ಕೋಟಿಗೂ ಹೆಚ್ಚು ಮತದಾರರಿಗೆ ಅನುಕೂಲ ಮಾಡಿಕೊಡಲು 1.92 ಲಕ್ಷ ಮತಗಟ್ಟೆಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರದ 5, ಮಧ್ಯಪ್ರದೇಶದ 8, ಜಾರ್ಖಂಡ್‌ನ 4, ಮಹಾರಾಷ್ಟ್ರದ 11, ತೆಲಂಗಾಣದ ಎಲ್ಲಾ 17 ಸ್ಥಾನಗಳು, ಉತ್ತರಪ್ರದೇಶದ 13, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಜಮ್ಮುವಿನಲ್ಲಿ ಮತದಾನ ನಡೆಯಲಿದೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, 2021ರ ಲಖೀಂಪುರ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ತೇನಿ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಮತ್ತು ಮಾಜಿ ಕ್ರಿಕೆಟಿಗ ಸೇರಿದಂತೆ ಹಲವಾರು ರಾಜಕೀಯ ದಿಗ್ಗಜರು ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಕಣದಲ್ಲಿದ್ದಾರೆ.
ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
* ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ - ಕನೌಜ್, ಉತ್ತರ ಪ್ರದೇಶ
* ಕೇಂದ್ರ ಸಚಿವ ಗಿರಿರಾಜ್ ಸಿಂಗ್ - ಬೇಗುಸರಾಯ್, ಬಿಹಾರ
* ಕೇಂದ್ರ ಸಚಿವ ನಿತ್ಯಾನಂದ ರೈ - ಉಜಿಯಾರ್‌ಪುರ, ಬಿಹಾರ
* ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ - ಜಲ್ನಾ, ಮಹಾರಾಷ್ಟ್ರ
* ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ತೇನಿ - ಖೇರಿ, ಉತ್ತರ ಪ್ರದೇಶ
* ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೈದರಾಬಾದ್, ತೆಲಂಗಾಣ
* ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಹರಂಪುರ್, ಪಶ್ಚಿಮ ಬಂಗಾಳ
* ಚಲನಚಿತ್ರ ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ - ಅಸನ್ಸೋಲ್, WB
* TMC ಯ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್, ಬಹರಂಪುರ್, WB
* ಆಂಧ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್ ಶರ್ಮಿಳಾ - ಕಡಪ, ಆಂಧ್ರ ಪ್ರದೇಶ,
ಅಖಿಲೇಶ್ ಯಾದವ್: ಸಮಾಜವಾದಿ ಪಕ್ಷ ಮುಖ್ಯಸ್ಥರಾದ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನೂ ಬಿಜೆಪಿಯು ಸುಬ್ರತ್ ಪಾಠಕ್ ಅವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರವು 1998 ರಿಂದ ಎಸ್ಪಿಯ ಭದ್ರಕೋಟೆಯಾಗಿದ್ದು, 2019 ರಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಈ ಕ್ಷೇತ್ರದಿಂದ ಸೋಲು ಕಂಡಿದ್ದರು.
ವೈಎಸ್ ಶರ್ಮಿಳಾ: ಈ ಬಾರಿ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಕುಟುಂಬದ ವೈಎಸ್ ಶರ್ಮಿಳಾ ಕಡಪ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ. ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯಾಗಿರುವ ಶರ್ಮಿಳಾ ರೆಡ್ಡಿ, ವೈಎಸ್‌ಆರ್‌ಸಿಪಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ.












Click it and Unblock the Notifications