Lok Sabha Elections 2024: ಚುನಾವಣಾ ಆಯೋಗದ ಟೆನ್ಷನ್‌ ಹೆಚ್ಚಿಸಿದ ಈ ಸಮಸ್ಯೆ

ಲೋಕಸಭಾ ಚುನಾವಣೆ ಆರಂಭವಾಗಿದೆ. ಮೊದಲ ಹಂತದ ಮತದಾನ ಕಳೆದ ಶುಕ್ರವಾರ ಮುಗಿದಿದೆ. 21 ರಾಜ್ಯಗಳ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿದೆ. ಇದಕ್ಕೂ ಮೊದಲು ಚುನಾವಣಾ ಆಯೋಗಕ್ಕೆ ಹೊಸ ಟೆನ್ಷನ್‌ ಶುತರುವಾಗಿದೆ.

ಇನ್ನು ಆರು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಈ ವೇಳೆ ಚುನಾವಣಾ ಆಯೋಗಕ್ಕೆ ಟೆನ್ಷನ್‌ ಒಂದು ಆರಂಭವಾಗಿದೆ. ಮೊದಲ ಹಂತದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಮತದಾನ ನಡೆದಿದೆ. ಆದರೆ, ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.3ರಷ್ಟು ಮತದಾನ ಕುಸಿತವಾಗಿದೆ. ಈ ಬಗ್ಗೆ ಚುನಾವಣಾ ಆಯೋಗವೂ ಚಿಂತಿಸಿದ್ದು, ಮತದಾನ ಹೆಚ್ಚಿಸಲು ಕೆಲವು ಹೊಸ ತಂತ್ರಗಳಿಗೆ ಒತ್ತು ನೀಡಲಾಗುತ್ತಿದೆ.

Lok Sabha Elections 2024 This issue has increased the tension of the Election Commission

ಕಡಿಮೆ ಮತದಾನ

ಟೈಮ್ಸ್ ಆಫ್‌ ಇಂಡಿಯಾ ವರದಿಯ ಪ್ರಕಾರ, ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮತದಾದನ ಕಡಿಮೆ ಆಗಿದ್ದಕ್ಕೆ ಕಳವಳ ವ್ಯಕ್ತ ಪಡಿಸಿದ್ದಾರೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈಗಾಗಲೇ ಹೆಚ್ಚಿನ ಪ್ರಯತ್ನಗಳನ್ನು ಮಾಡಿದರೂ, ಫಲಿತಾಂಶ ನೀಡುತ್ತಿಲ್ಲ ಎಂಬ ಚಿಂತೆ ಆಯೋಗವನ್ನು ಕಾಡುತ್ತಿದೆ. ಅಲ್ಲದೆ ಮತದಾನ ಮಾಡುವಂತೆ ಚುನಾವಣೆ ಆಯೋಗ ಮಹತ್ತರವಾದ ಕೆಲಸಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಅಡಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿತ್ತು. ಅಲ್ಲದೆ ಖ್ಯಾತ ನಾಮ ಸೆಲೆಬ್ರಿಟಿಗಳು ಸಹ ಮತದಾನ ಮಾಡುವಂತೆ ಮನವಿ ಮಾಡಿದರು.

ಫಲಿಸದ ವಿಭಿನ್ನ ಪ್ರಯತ್ನ

ಇನ್ನು ದೇಶದಲ್ಲಿ ಈಗ ಐಪಿಎಲ್‌ ನಡೆಯುತ್ತಿದೆ. ಇದನ್ನು ಸಹ ಚುನಾವಣಾ ಆಯೋಗ ಬಳಸಿಕೊಳ್ಳಲಾಯಿತು. ಬಿಸಿಸಿಐ ಸಹಯೋಗದಲ್ಲಿ ಐಪಿಎಲ್ ಅನ್ನು ವೇದಿಕೆಯಾಗಿಯೂ ಬಳಸಲಾಯಿತು. ಆದಾಗ್ಯೂ, ಈ ಪ್ರಯತ್ನಗಳು ಅಸಮರ್ಪಕವೆಂದು ಸಾಬೀತಾಗಿದೆ ಎಂದು ತೋರುತ್ತದೆ.

Lok Sabha Elections 2024 This issue has increased the tension of the Election Commission

ಸಭೆ ನಡೆಸಿದ ಅಧಿಕಾರಿಗಳು

ಚುನಾವಣಾ ಆಯೋಗದ ಅಧಿಕಾರಿಗಳು ಮತದಾನದ ಪ್ರಮಾಣ ಕಡಿಮೆ ಆಗಿದ್ದರ ಹಿಂದಿನ ಕಾರಣವನ್ನು ಹುಡುಕುತ್ತಿದೆ. ವೀಕೆಂಟ್‌ನಲ್ಲಿ ಇದೇ ವಿಷಯದ ಕುರಿತಾಗಿ ಸಭೆ ನಡೆಸಿ ಚರ್ಚಿಸಲಾಯಿತು. ಈ ವೇಳೆ ಚುನಾವಣಾ ಮಾಯೋಗ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನೂತನ ಪ್ರಯತ್ನಗಳಿಗೆ ಕೈ ಹಾಕಿದೆ. ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ಯಾವ ವೇದಿಕೆಗಳನ್ನು ಬಳಸಿಕೊಂಡರೆ ಒಳ್ಳೆಯದು ಎಂದು ಚುನಾವಣಾ ಆಯೋಗ ಚಿಂತಿಸಿದ್ದು, ಈ ನಿಟ್ಟಿನಲ್ಲಿ ಕೆಲಸವನ್ನು ಮಾಡಲು ಆರಂಭಿಸಿದೆ.

ಭಾರತದಲ್ಲಿ ಏಪ್ರಿಲ್‌ 26, ಮೇ 7, ಮೇ 13, ಮೇ 20, ಮೇ 25, ಜೂನ್ 1 ರಂದು ಇನ್ನು ಮತದಾನಗಳು ನಡೆಯಬೇಕಿವೆ. ಮುಂದಿನ ಹಂತದಲ್ಲಾದ್ರೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈ ಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+