ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಹಂತದ ಚುನಾವಣೆ: ಎಲ್ಲೆಲ್ಲಿ ಹೇಗೆ ನಡೆಯಿತು ಮತದಾನ?

|
Google Oneindia Kannada News

ನವದೆಹಲಿ, ಏಪ್ರಿಲ್ 30: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಇಂದು (ಏಪ್ರಿಲ್ 30) ಮುಕ್ತಾಯವಾಗಿದೆ. ಪಶ್ಚಿಮ ಬಂಗಾಳ ಸೇರಿ ಕೆಲವೆಡೆ ಹಿಂಸಾಚಾರ ವರದಿಯಾಗಿದೆಯಾದರೂ ಬಹುತೇಕ ಶಾಂತಿಯುತವಾಗಿಯೇ ಮತದಾನ ಮುಗಿದಿದೆ.

ನಾಲ್ಕನೇ ಹಂತದಲ್ಲಿ 9 ರಾಜ್ಯಗಳ 71 ಕ್ಷೇತ್ರಗಳಿಗೆ ಮತದಾನ ನಡೆಯದಿದೆ. ಈ ಹಂತದಲ್ಲಿ ಒಟ್ಟು 943 ಅಭ್ಯರ್ಥಿಗಳು ಚುನಾವಣೆ ಅಂಗಳದಲ್ಲಿದ್ದರು. ಇವರೆಲ್ಲರ ಭವಿಷ್ಯ ಈಗ ವಿವಿ ಪ್ಯಾಟ್‌ಗಳಲ್ಲಿ ಭದ್ರವಾಗಿದೆ.

4ನೇ ಹಂತದ ಮತದಾನ: 6 ಗಂಟೆಯವರೆಗೆ 62.15% ಮತದಾನ ದಾಖಲು4ನೇ ಹಂತದ ಮತದಾನ: 6 ಗಂಟೆಯವರೆಗೆ 62.15% ಮತದಾನ ದಾಖಲು

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹಿಂಸಾಚಾರ ವರದಿಯಾಗಿದೆ.

Lok sabha elections 2019 fourth stage completes on April 29

ಮತದಾನದ ಸಮಯ ಅಂತ್ಯದ ಸಮಯವಾದ 6 ಗಂಟೆ ವೇಳೆಗೆ ನಾಲ್ಕನೇ ಹಂತದ ಮತದಾನದಲ್ಲಿ ಸರಾಸರಿ 62.15% ಮತದಾನವು ದಾಖಲಾಗಿತ್ತು. ಇದರಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಎಂದರೆ 76.59% ಮತದಾನವಾಗಿತ್ತು. ಕಾಶ್ಮೀರದಲ್ಲಿ ಅತಿ ಕಡಿಮೆ ಮತದಾಗಿದೆ.

ಇಂದಿನ ಚುನಾವಣೆಯಲ್ಲಿ ಹಲವು ಮಂದಿ ಬಾಲಿವುಡ್ ತಾರೆಯರು ಕ್ರಿಕೆಟ್ ಖ್ಯಾತನಾಮರು ಮತಚಲಾಯಿಸಿದರು. ಸಚಿನ್ ತೆಂಡೂಲ್ಕರ್ ಮತ್ತು ಕುಟುಂಬ, ಅಮಿತಾಬ್‌ ಬಚ್ಚನ್, ಶಾರೂಕ್ ಖಾನ್ ಮತ್ತು ಕುಟುಂಬ, ಸಲ್ಮಾನ್ ಖಾನ್, ಅಮೀರ್ ಖಾನ್, ವಿದ್ಯಾ ಬಾಲನ್, ಪ್ರಿಯಾಂಕಾ ಚೋಪ್ರಾ ಇನ್ನೂ ಹಲವು ಮಂದಿ ಮತ ಚಲಾಯಿಸಿದರು. ಮುಖೇಶ್ ಅಂಬಾನಿ ಸಹ ಕುಟುಂಬ ಸಮೇತ ಮತಚಲಾಯಿಸಿದರು.

ನಾನೇ ನಿಜವಾದ ಚೌಕಿದಾರ, ಮೋದಿಗೆ ಆ ಪದ ಒಪ್ಪುವುದಿಲ್ಲ: ತೇಜ್ ಬಹದ್ದೂರ್ನಾನೇ ನಿಜವಾದ ಚೌಕಿದಾರ, ಮೋದಿಗೆ ಆ ಪದ ಒಪ್ಪುವುದಿಲ್ಲ: ತೇಜ್ ಬಹದ್ದೂರ್

ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹಿಂಸಾಚಾರ ನಡೆಯಿತು, ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟಗಳು ನಡೆದವು, ಒಂದು ಕಡೆ ಬಿಜೆಪಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಮತಗಟ್ಟೆಗೆ ನುಗ್ಗಿ ದಾಂಧಲೆ ನಡೆಸಿದರು ಅವರ ವಿರುದ್ಧ ದೂರು ದಾಖಲಾಗಿದೆ.

ಐದನೇ ಹಂತದ ಮತದಾನವು ಮೇ 6 ರಂದು ನಡೆಯಲಿದ್ದು, ಏಳು ರಾಜ್ಯಗಳ 59 ಕ್ಷೇತ್ರಗಳಿಗೆ ಅಂದು ಮತದಾನ ನಡೆಯಲಿದೆ. ಮೇ 23ರಕ್ಕೆ ಫಲಿತಾಂಶ ಹೊರಬೀಳಲಿದೆ.

English summary
Lok Sabha elections 2019 fourth stage complete today. Most of the voting went peacefully other than West Bengal. results will be announced on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X