ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯನ್ನು ತಡೆಯಲಾಗದಿದ್ದ ಮೇಲೆ ಕಾಂಗ್ರೆಸ್ ಸಾಯಲೇಬೇಕು: ಯೋಗೇಂದ್ರ ಯಾದವ್

|
Google Oneindia Kannada News

ನವದೆಹಲಿ, ಮೇ 20: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನಿಚ್ಚಳ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ, ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷವು ಸಾಯಲೇಬೇಕು ಎಂದು ಎಎಪಿಯ ಮಾಜಿ ಮುಖಂಡರೂ ಆಗಿರುವ ಯೋಗೇಂದ್ರ ಯಾದವ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಎಕ್ಸಿಟ್ ಪೋಲ್ ಸಮೀಕ್ಷೆಯೊಂದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಯೋಗೇಂದ್ರ ಯಾದವ್, ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ್ದಾರೆ.

'ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‌ಗೆ ಏಕೆ ಸಾಧ್ಯವಾಗುತ್ತಿಲ್ಲ?' ಎಂದು ಇಂಡಿಯಾ ಟುಡೆ ವಾಹಿನಿ ಕಾರ್ಯಕ್ರಮವೊಂದರ ಕುರಿತು ಮಾಡಿದ್ದ ಟ್ವೀಟ್‌ಗೆ ಅವರು 'ರಾಜ್ ದೀಪ್ ಸರ್ದೇಸಾಯಿ ಅವರಿಗೆ ನನ್ನ ಪ್ರತಿಕ್ರಿಯೆ' ಎಂದು ಯಾದವ್ ಪ್ರತಿ ಟ್ವೀಟ್ ಮಾಡಿದ್ದರು.

ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ ಎಕ್ಸಿಟ್ ಪೋಲ್: ಈ ರಾಜ್ಯಗಳಲ್ಲಿನ ಫಲಿತಾಂಶ ನೀಡಲಿದೆ ಅಚ್ಚರಿ

ಬಿಜೆಪಿಯನ್ನು ತಡೆಯಲಾಗದ ಕಾಂಗ್ರೆಸ್‌ಗೆ ದೇಶದ ಚರಿತ್ರೆಯಲ್ಲಿ ಯಾವುದೇ ಪ್ರಭಾವವನ್ನು ಹೊಂದಿಲ್ಲ ಎಂದು ಅವರು ಟೀಕಿಸಿದ್ದರು. ಬಳಿಕ ಅದಕ್ಕೆ ಸ್ಪಷ್ಟೀಕರಣ ನೀಡಿದ್ದ ಅವರು, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಂಗ್ರೆಸ್ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ಹೇಳಿದ್ದರು.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದು ನಿರೀಕ್ಷಿತವಾಗಿತ್ತು ಎಂದಿರುವ ಯಾದವ್, ಬಿಜೆಪಿಯಲ್ಲಿ ಮೋದಿ ಇರುವಂತೆ ಕಾಂಗ್ರೆಸ್‌ನಲ್ಲಿ ನಂಬಿಕೆಗೆ ಅರ್ಹವಾದ ನಾಯಕತ್ವವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಾಯಲೇಬೇಕು

'ಕಾಂಗ್ರೆಸ್ ಸಾಯಲೇಬೇಕು. ಭಾರತವನ್ನು ಉಳಿಸುವ ಆಲೋಚನೆಯನ್ನು ಈಡೇರಿಸಲು ಬಿಜೆಪಿಯನ್ನು ತಡೆಯಲು ಸಾಧ್ಯವಾಗದೆ ಇದ್ದರೆ, ಭಾರತೀಯ ಇತಿಹಾಸದಲ್ಲಿ ಈ ಪಕ್ಷ ಯಾವುದೇ ಸಕಾರಾತ್ಮಕ ಪಾತ್ರ ಹೊಂದಿಲ್ಲ ಎಂದರ್ಥ. ಪರ್ಯಾಯವೊಂದರ ಸೃಷ್ಟಿಗೆ ಅತಿ ದೊಡ್ಡ ಏಕೈಕ ಅಡ್ಡಿಯಾಗಿ ಕಾಂಗ್ರೆಸ್ ಕಾಣಿಸುತ್ತದೆ' ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದರು.

ಗೊಂದಲ ಬೇಡ, ಇದು ಅರ್ಥ

ಬಳಿಕ ಅವರು ತಮ್ಮ ಟ್ವೀಟ್‌ಗೆ ಸ್ಪಷ್ಟೀಕರಣವಾಗಿ ಇನ್ನೊಂದು ಟ್ವೀಟ್ ಮಾಡಿದ್ದಾರೆ. 'ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ ಸಕಾರಾತ್ಮಕ ಪಾತ್ರ ಹೊಂದಿಲ್ಲ ಎಂಬ ನನ್ನ ಹೇಳಿಕೆಯು ಕೆಲವು ಗೊಂದಲಗಳಿಗೆ ಕಾರಣವಾಗಿರಬಹುದು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ತಕ್ಷಣ ಕಾಂಗ್ರೆಸ್ ನಿರ್ವಹಿಸಿದ ದೊಡ್ಡ ಪಾತ್ರವನ್ನು ನಾನು ನಿರಾಕರಿಸಲು ಸಾಧ್ಯವಿಲ್ಲ. ನನ್ನ ಮಾತಿನ ಅರ್ಥ, ಅದು ಇತಿಹಾಸದಲ್ಲಿ ಪ್ರದರ್ಶಿಸಲು ಯಾವುದೇ ಸಕಾರಾತ್ಮಕ ಪಾತ್ರ ಉಳಿಸಿಕೊಂಡಿಲ್ಲ. ಈ ಮಾತಿಗೆ ಬದ್ಧನಾಗಿದ್ದೇನೆ' ಎಂದು ಹೇಳಿದ್ದಾರೆ.

ಮೋದಿ ಮೇಲಿನ ನಂಬಿಕೆ ಅಲ್ಲ

ಮೋದಿ ಮೇಲಿನ ನಂಬಿಕೆ ಅಲ್ಲ

ಇದು ಮೋದಿ ಅವರ ಮೇಲೆ ಜನರು ಇರಿಸಿರುವ ನಂಬಿಕೆ ಅಲ್ಲ. ಆದರೆ, ವಿರೋಧಪಕ್ಷದಲ್ಲಿ ವಿಶ್ವಾಸಾರ್ಹ ಮುಖದ ಕೊರತೆ ಕಾರಣ. ಬಿಜೆಪಿಗೆ ಮೋದಿ, ಮಾಧ್ಯಮ, ಹಣ ಮತ್ತು ಚುನಾವಣಾ ಯಂತ್ರವಿದೆ. ಕಾಂಗ್ರೆಸ್‌ಗೆ ಸಂದೇಶ ಮತ್ತು ಸಂದೇಶದೂತ ಇಬ್ಬರ ಕೊರತೆಯೂ ಇದೆ ಎಂದು ಯೋಗೇಂದ್ರ ಯಾದವ್ ಹೇಳಿದರು.

ಉತ್ತರ ಪ್ರದೇಶದಲ್ಲಿ ಯಶಸ್ಸು

ಉತ್ತರ ಪ್ರದೇಶದಲ್ಲಿ ಯಶಸ್ಸು

ಉತ್ತರ ಪ್ರದೇಶದಲ್ಲಿ ಬಿಜೆಪಿ ಕಡಿಮೆ ಸೀಟುಗಳನ್ನು ಗೆಲ್ಲಲಿದೆ ಎಂಬ ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿದ ಯೋಗೇಂದ್ರ ಯಾದವ್, ಉತ್ತರ ಪ್ರದೇಶದಲ್ಲಿ ಅವರು 71 ಸೀಟುಗಳನ್ನು ಗೆಲ್ಲುವ ಪ್ರಶ್ನೆಯೇ ಇಲ್ಲ. ಆದರೆ, ಆರಂಭದ ಉದ್ದೇಶ ಇದ್ದಿದ್ದು ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಬಿಜೆಪಿಯನ್ನು 10-12 ಸೀಟುಗಳಿಗೆ ಇಳಿಸುವುದಾಗಿತ್ತು. ಅದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

Exit Poll 2019: ದಕ್ಷಿಣದಲ್ಲಿ ಎನ್ಡಿಎಗಿಂತ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ Exit Poll 2019: ದಕ್ಷಿಣದಲ್ಲಿ ಎನ್ಡಿಎಗಿಂತ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ

ನಾನು ಸಾಯುವುದಿಲ್ಲ!

ನಾನು ಕಾಂಗ್ರೆಸ್.. ನಾನು ಭಾರತ... ನೀವು ಆಶಿಸಿದ ರೀತಿಯಲ್ಲಿ ನಾನು ಸಾಯುವುದಿಲ್ಲ. ನಿಮ್ಮ ಹೇಳಿಕೆಯಿಂದ ಬೇಸರವಾಗಿದೆ. ದುಷ್ಟರನ್ನು ತಡೆಯಲು ಯಾವಾಗಲೂ ಕಾಂಗ್ರೆಸ್‌ನತ್ತಲೇ ಬೊಟ್ಟು ಮಾಡುತ್ತೀರಿ? ಒಂದು ಸಂಘಟನಾ ಶಕ್ತಿಯಾಗಿ ಇರೋಣ. ಕೊಳೆಯುವಿಕೆಯ ಪ್ರಕ್ರಿಯೆಯು ಗುಣವಾಗುವುದಕ್ಕಿಂತ ವೇಗ ಎಂಬುದನ್ನು ಮರೆಯದಿರಿ ಎಂದು ಕಾಂಗ್ರೆಸ್ ನಾಯಕಿ ಖುಷ್ಬೂ ಪ್ರತಿಕ್ರಿಯೆ ನೀಡಿದ್ದಾರೆ.

ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ

English summary
Lok Sabha Elections 2019: Yogendra Yadav said that, Congress must die. If it could not stop the BJP in this election to save the idea of India, this party has no positive role in Indian history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X