ಲೋಕಸಭೆ ಚುನಾವಣೆ 2019: ಬಿಜೆಪಿ ಮಿತ್ರಪಕ್ಷದ ಮೂಲಕ ಅಮರ್ ಸಿಂಗ್ ಸ್ಪರ್ಧೆ?
ಲಕ್ನೋ, ಆಗಸ್ಟ್ 02: ಉತ್ತರಪ್ರದೇಶದ ಪ್ರಭಾವಿ ನಾಯಕ, ಸಮಾಜ ವಾದಿ ಪಕ್ಷದಿಂದ ಉಚ್ಚಾಟಿತ ಅಮರ್ ಸಿಂಗ್ ಅವರು ಮುಂಬರುವ ಲೋಕಸಭೆ ಚುನಾವಣೆ 2019ರಲ್ಲಿ ಬಿಜೆಪಿ ಟಿಕೆಟ್ ಪಡೆದು ಕಣಕ್ಕಿಳಿಯುವ ಸಾಧ್ಯತೆಯಿದೆ. ಬಿಜೆಪಿಯ ಮಿತ್ರಪಕ್ಷ ಸುಹೆಲ್ದೆವ್ ಭಾರತೀಯ ಸಮಾಜ ಪಾರ್ಟಿ(ಎಸ್ ಬಿ ಎಸ್ ಪಿ)ಯಿಂದ ಸ್ಪರ್ಧಿಸಲು ಅಮರ್ ಸಿಂಗ್ ಗೆ ಆಹ್ವಾನ ಸಿಗುವ ಸಾಧ್ಯತೆಯಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸಂಸದರಾಗಿರುವ ಅಜಮ್ ಘರ್ ನಿಂದಲೆ ಅಮರ್ ಸಿಂಗ್ ಅವರು ಸ್ಪರ್ಧಿಸಿ ಸೇಡು ತೀರಿಸಿಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ. ಬಿಜೆಪಿಯ ರಮಾಕಾಂತ್ ಯಾದವ್ ಅವರು ಇಲ್ಲಿ ಪರಾಭವಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ ಬಿಎಸ್ ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್, ಅಮರ್ ಅವರು ಪ್ರಭಾವಿ ಹಾಗೂ ರಾಜ್ಯದ ಪ್ರಮುಖ ನಾಯಕರು, 2019ರ ಚುನಾವಣೆಯಲ್ಲಿ ಅಜಮ್ ಘರ್ ನಿಂದ ಸ್ಪರ್ಧೆ ಬಯಸಿದರೆ, ನಮಗೆ ಇಲ್ಲಿನ ಕೋಟಾ ಸಿಕ್ಕರೆ, ಖಂಡಿತವಾಗಿ ಅವರು ನಮ್ಮ ಪಕ್ಷದಿಂದಲೆ ಸ್ಪರ್ಧಿಸಲಿ. ಆದರೆ, ಇನ್ನೂ ಸೀಟು ಹಂಚಿಕೆ ಬಗ್ಗೆ ಎನ್ಡಿಎ ಜತೆ ಇನ್ನೂ ಮಾತುಕತೆಯಾಗಬೇಕಿದೆ ಎಂದಿದ್ದಾರೆ.

ಇತ್ತೀಚೆಗೆ ಮೋದಿ ಅವರಿದ್ದ ಕಾರ್ಯಕ್ರಮದಲ್ಲಿ ಅಮರ್ ಸಿಂಗ್ ಕಾಣಿಸಿಕೊಂಡಿದ್ದರು. ನಂತರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡಿದ್ದರು. ತಮ್ಮನ್ನು ಜಾತಿವಾದಿ ಎಂದು ಜರೆದಿರುವ ಎಸ್ಪಿ ಹಾಗೂ ಬಿಎಸ್ಪಿ ವಿರುದ್ಧ ಅಮರ್ ಸಿಂಗ್ ಕಿಡಿಕಾಡಿ, ಆ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು, ಕಾಂಗ್ರೆಸ್ಸಿಗೆ ಇಲ್ಲಿ ಬೆಲೆಯಿಲ್ಲ, ನಾನು ಮೋದಿ ಹಾಗೂ ಆದಿತ್ಯನಾಥ್ ರನ್ನು ಬೆಂಬಲಿಸುವೆ ಎಂದು ಹೇಳಿದ್ದರು.












Click it and Unblock the Notifications