ಲೋಕಸಭಾ ಚುನಾವಣೆ : ಮೇ 6ರಂದು 51 ಕ್ಷೇತ್ರದಲ್ಲಿ ಮತದಾನ
ಬೆಂಗಳೂರು, ಮೇ 05 : ಲೋಕಸಭಾ ಚುನಾವಣೆಗೆ 5ನೇ ಹಂತದ ಮತದಾನ ಮೇ6 ರಂದು ನಡೆಯಲಿದ್ದು, ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಸೋಮವಾರ ಮತದಾನ ನಡೆಯಲಿದೆ.
7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಲ್ಲಿ ಮೇ 6ರ ಸೋಮವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. ಒಟ್ಟು ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ.
ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 2, ಜಾರ್ಖಂಡ್‌ನ 4, ಮಧ್ಯಪ್ರದೇಶದ 7, ರಾಜಸ್ಥಾನದ 12, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 7 ಲೋಕಸಭಾ ಕ್ಷೇತ್ರಗಳು ಸೇರಿ 51 ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ.

ಪ್ರಮುಖ ನಾಯಕರು : ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರತಿನಿಧಿಸುವ ಲಕ್ನೋ ಲೋಕಸಭಾ ಕ್ಷೇತ್ರಗಳಲ್ಲಿ ಮೇ 6ರಂದು ಮತದಾನ ನಡೆಯುತ್ತಿದೆ.
ಒಟ್ಟು 7 ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಏಪ್ರಿಲ್ 11ರಂದು 91, ಏಪ್ರಿಲ್ 18ರಂದು 97, ಏಪ್ರಿಲ್ 23ರಂದು 115, ಏಪ್ರಿಲ್ 29ರಂದು 71 ಸೀಟುಗಳಿಗೆ ಮತದಾನ ನಡೆದಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications