ಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯ, 71 ಕ್ಷೇತ್ರದಲ್ಲಿ ಮತದಾನ
ಬೆಂಗಳೂರು, ಏಪ್ರಿಲ್ 28 : ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯಲಿದೆ. ಉತ್ತರ ಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿಗೆ ಸವಾಲು ಎದುರಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 29ರ ಸೋಮವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ 4ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. 9 ರಾಜ್ಯಗಳ 71 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ 3 ಹಂತದ ಲೋಕಸಭಾ ಚುನಾವಣೆಗಳು ಪೂರ್ಣಗೊಂಡಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯಗೊಂಡಿದೆ.

ರಾಜ್ಯಗಳು, ಸೀಟು : ಬಿಹಾರ 5, ಜಾರ್ಖಂಡ್ 3, ಮಧ್ಯಪ್ರದೇಶ 6, ಮಹಾರಾಷ್ಟ್ರ 17, ಓಡಿಶಾ 6, ರಾಜಸ್ಥಾನ 13, ಉತ್ತರ ಪ್ರದೇಶ 13, ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ.
ಪ್ರಮುಖ ಅಭ್ಯರ್ಥಿಗಳು : ಕನ್ಹಯ್ಯ ಕುಮಾರ್, ಗಿರಿರಾಜ್ ಸಿಂಗ್, ಉರ್ಮಿಳಾ ಮಾತೋಂಡ್ಕರ್, ಪೂನಂ ಮಹಾಜನ್, ಪ್ರಿಯಾ ದತ್, ಮಿಲಿಂದ್ ದಿಯೋರಾ, ಡಿಂಪಲ್ ಯಾದವ್, ನಕುಲ್ ನಾಥ್, ವೈಭವ್ ಗೆಲ್ಹೋಟ್.
ಸೋಮವಾರ ಚುನಾವಣೆ ನಡೆಯಲಿರುವ 71 ಕ್ಷೇತ್ರಗಳ ಪೈಕಿ 45ರಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರು. ಆದ್ದರಿಂದ, ಸೋಮವಾರದ ಚುನಾವಣೆ ಬಿಜೆಪಿಗೆ ಅದರಲ್ಲೂ ಉತ್ತರ ಪ್ರದೇಶದ 13 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಈಗಾಗಲೇ ದೇಶದಲ್ಲಿ 3 ಹಂತದ ಚುನಾವಣೆ ಮುಕ್ತಾಯಗೊಂಡಿದ್ದು 302 ಸ್ಥಾನಗಳಿಗೆ ಮತದಾನ ನಡೆದಿದೆ. ಮೇ 6ರಂದು 5ನೇ ಹಂತ, ಮೇ 12ರಂದು 6ನೇ ಹಂತ ಮತ್ತು ಮೇ 19ರಂದು 7ನೇ ಹಂತದ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಘೋಷಣೆಯಾಗಲಿದೆ.












Click it and Unblock the Notifications