Get Updates
Get notified of breaking news, exclusive insights, and must-see stories!

'ಹೇಳಿ ಸಿಧು, ಯಾವಾಗ ರಾಜೀನಾಮೆ ಕೊಡ್ತೀರಿ?'

ನವದೆಹಲಿ, ಮೇ 24: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಸೋತರೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿದ್ದ ಪಂಜಾಬ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್‌ಗೆ ಒಳಗಾಗುತ್ತಿದ್ದಾರೆ.

ಸಿಧು ಅವರ ಹೇಳಿಕೆಯುಳ್ಳ ವರದಿಯ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿ, ಸಿಧು ಯಾವಾಗ ರಾಜೀನಾಮೆ ಕೊಡ್ತೀರಿ ಎಂದು ಅಣಕಿಸುತ್ತಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ರಾಯ್ ಬರೇಲಿಯಲ್ಲಿ ಈ ಹೇಳಿಕೆ ನೀಡಿದ್ದ ಸಿಧು, ಈಗ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ.

ಉತ್ತರ ಪ್ರದೇಶದ ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಎದುರು ಬಿಜೆಪಿಯ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸಿದ್ದರು. ಒಮ್ಮೆಯೂ ಸೋಲು ಕಾಣದ ಗಾಂಧಿ ಕುಟುಂಬಕ್ಕೆ ಸ್ಮೃತಿ ಇರಾನಿ ಅಮೇಥಿಯಲ್ಲಿ ಸೋಲಿನ ರುಚಿ ತೋರಿಸಿದ್ದಾರೆ. ಸುಮಾರು 50 ಸಾವಿರ ಮತಗಳ ಅಂತರದಿಂದ ಮುನ್ನಡೆ ಪಡೆದುಕೊಳ್ಳುವ ಮೂಲಕ ರಾಹುಲ್ ಗಾಂಧಿಗೆ ಮೊದಲ ಸೋಲಿನ ಆಘಾತ ನೀಡಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಕಠಿಣ ಸ್ಪರ್ಧೆ ನೀಡಲಿದ್ದಾರೆ ಎಂಬುದನ್ನು ನವಜೋತ್ ಸಿಂಗ್ ಸಿಧು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಹಲವು ವರ್ಷಗಳಿಂದ ಕಾಂಗ್ರೆಸ್ ನೆಲೆಯಾಗಿರುವ ಅಮೇಥಿಯಲ್ಲಿ ರಾಹುಲ್ ಅವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂದು ಸಿಧು ಹೇಳಿದ್ದರು. ಮಾತ್ರವಲ್ಲ, ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯ ತ್ಯಜಿಸುವುದಾಗಿ ಭಾವಾವೇಶದಿಂದ ಹೇಳಿದ್ದರು.

ಸ್ಮೃತಿ ಇರಾನಿ ಅವರು ಅಮೇಥಿಯಲ್ಲಿ ಮುನ್ನಡೆ ಪಡೆದುಕೊಳ್ಳುತ್ತಿರುವಂತೆಯೇ ಸಿಧು ಅವರನ್ನು ಗೇಲಿ ಮಾಡುವ ಟ್ರಾಲ್‌ಗಳು ಆರಂಭವಾಗಿದ್ದವು. 'ಸ್ಮೃತಿ ಇರಾನಿ ಅವರು ಲೀಡ್ ಪಡೆದುಕೊಂಡಿದ್ದಾರೆ. ಭಾರತೀಯ ರಾಜಕೀಯವು ನವಜೋತ್ ಸಿಂಗ್ ಸಿಧು ಅವರ ಸೇವೆಯನ್ನು ಕಳೆದುಕೊಳ್ಳಲಿದೆ' ಎಂದು ವ್ಯಂಗ್ಯವಾಗಿ ಹೇಳಿದ್ದರು.

ನಿವೃತ್ತಿಯಾಗುವುದನ್ನು ಕಾಯುತ್ತಿದ್ದೇವೆ

ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲೊಪ್ಪಿಕೊಂಡಿದ್ದಾರೆ. ನವಜೋತ್ ಸಿಂಗ್ ಸಿಧು ಅವರು ತಮ್ಮ ಮಾತಿಗೆ ಬದ್ಧರಾಗಿ ರಾಜಕೀಯದಿಂದ ನಿವೃತ್ತಿಯಾಗುವುದನ್ನು ಕಾಯುತ್ತಿದ್ದೇವೆ ಎಂದು ಸರ್ ಜಡೇಜಾ ಫ್ಯಾನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಸಿಧು ಹೊರಹೋಗುವ ಸಮಯ

ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತಿದ್ದಾರೆ. ನವಜೋತ್ ಸಿಂಗ್ ಸಿಧು ರಾಜಕೀಯ ತ್ಯಜಿಸುವ ಸಮಯ ಬಂದಿದೆ. ಈಗ ಯಾರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೋ ಮತ್ತು ಯಾರು ಸುಳ್ಳುಗಾರರಾಗುತ್ತಾರೋ ನೋಡೋಣ. ಕ್ಯಾಪ್ಟನ್ ಅಮರಿಂದರ್ ಅವರು ನಗುತ್ತಿರುವುದನ್ನು ನಾವು ಈಗ ಊಹಿಸಬಹುದು ಎಂದು ಪತ್ರಕರ್ತ ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದಾರೆ.

ಎರಡೇ ಆಯ್ಕೆಗಳು

ಈಗ ನಿಮ್ಮ ಮುಂದೆ ಇರುವುದು ಎರಡೇ ಆಯ್ಕೆಗಳು. ಒಂದು ರಾಜಕೀಯದಿಂದ ರಾಜೀನಾಮೆ ನೀಡಿ ಹೊರಹೋಗುವುದು ಅಥವಾ ನಿಮ್ಮ ಉಳಿದ ಜೀವನದುದ್ದಕ್ಕೂ ಬಾಯಿ ಮುಚ್ಚಿಕೊಂಡು ತೆಪ್ಪಗಿರುವುದು ಎಂದು ಗೌರವ್ ಗೌತಮ್, ಸಿಧು ಅವರನ್ನು ಝಾಡಿಸಿದ್ದಾರೆ.

ಎಲ್ಲಿದ್ದೀರಾ ಸಿಧು?

ಎಲ್ಲಿದ್ದೀರಾ ನವಜೋತ್ ಸಿಂಗ್ ಸಿಧು? ರಾಜಕೀಯ ಬಿಟ್ಟುಹೋಗಿ ವಿಶ್ರಾಂತಿ ಪಡೆಯಿರಿ ಎಂದು ಅಭಿಲಾಷ್ ಪ್ರಕಾಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+