Get Updates
Get notified of breaking news, exclusive insights, and must-see stories!

Lok Sabh Election: ಅಣ್ಣಾಮಲೈ ಸೇರಿದಂತೆ ಈ IAS, IPS, IFS,ಅಧಿಕಾರಿಗಳು ರಾಜಕೀಯ ಎಂಟ್ರಿ ಬಗ್ಗೆ ನಿಮಗೆ ಎಷ್ಟು ಗೊತ್ತು!

ನಾಗರಿಕ ಸೇವೆಗಳಲ್ಲಿ ಉದ್ಯೋಗವನ್ನು ಪಡೆಯಲು ಅದೆಷ್ಟೋ ವಿದ್ಯಾರ್ಥಿಗಳು ಹಗಲು ರಾತ್ರಿಯನ್ನು ಲೆಕ್ಕಿಸದೆ ಓದುತ್ತಾರೆ. ಸತತ ಪ್ರಯತ್ನ ಹಾಗೂ ಶ್ರಮದಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ಸು ಸಾಧ್ಯ. ಭಾರತದಲ್ಲಿ ನಾಗರಿಕ ಸೇವೆಗಳಲ್ಲಿನ ಉದ್ಯೋಗಗಳನ್ನು ಉನ್ನತ ಶ್ರೇಣಿಯ ಉದ್ಯೋಗ ಎಂದು ಪರಿಗಣಿಸಲಾಗುತ್ತದೆ.

ಯುಪಿಎಸ್‌ಸಿ ಸಿಎಸ್‌ಇಯಲ್ಲಿ ಒಬ್ಬ ವ್ಯಕ್ತಿಯು ಒಮ್ಮೆ ಯಶಸ್ವಿಯಾದರೆ, ಅವನನ್ನು ಸರ್ಕಾರ ಅತ್ಯಂತ ಗೌರವ, ಘನತೆ ಮತ್ತು ಹೆಚ್ಚಿನ ಗೌರವದಿಂದ ನೋಡಲಾಗುತ್ತದೆ. IAS, IPS ಅಥವಾ IFS ಅಧಿಕಾರಿಯಾಗುವುದು ಅತ್ಯಂತ ಕಷ್ಟಕರವಾದ ಕೆಲಸ. ಆದರೆ ಇಂತಹ ಪ್ರತಿಷ್ಠಿತ ಕೆಲಸವನ್ನು ಮಾಡಿ ಈಗ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ರಾಜಕಾರಣಿಗಳ ಬಗ್ಗೆ ಒಂದು ಪರಿಚಯ ಇಲ್ಲಿದೆ.

Lok Sabha Election Annamalai and Other IAS IPS IFS Officers Joining Politics

ಮಾಜಿ ಸಿಎಂ ಅಜಿತ್ ಜೋಗಿ

ಅಜಿತ್ ಜೋಗಿ 1968 ರಲ್ಲಿ ನಾಗರಿಕ ಸೇವೆಗಳಲ್ಲಿ ಯಶಸ್ಸಯ ಸಾಧಿಸ ಐಎಎಸ್‌ ಅಧಿಕಾರಿಯಾದರು. ಐಎಎಸ್‌ ಅಧಿಕಾರಿಯಾಗಿ ನಿವೃತ್ತರಾದ ಬಳಿಕ, ಜೋಗಿ ಅವರು ಕಾಂಗ್ರೆಸ್ ಸೇರಿದರು. ಅಲ್ಲದೆ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು 2000 ರಿಂದ 2003ರ ವರೆಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. 2004ರ ಲೋಕಸಭಾಗೆ ಪ್ರವೇಶ ಪಡೆದರು. ಅಲ್ಲದೆ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.

ಮಣಿಶಂಕರ್ ಅಯ್ಯರ್

ಮಣಿಶಂಕರ್ ಅಯ್ಯರ್ 1963ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ. 1991ರಲ್ಲಿ ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಂದಿನಿಂದ ಅವರು ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಸಚಿವಾಲಯಗಳನ್ನು ನಿಭಾಯಿಸಿದ ಅನುಭವ ಇವರಿಗಿದೆ.

Lok Sabha Election Annamalai and Other IAS IPS IFS Officers Joining Politics

ಮಾಜಿ ಸ್ಪೀಕರ್ ಮೀರಾ ಕುಮಾರ್

ಮೀರಾ ಕುಮಾರ್ ಅವರು ಭಾರತದ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್. ಅವರು 2009 ಮತ್ತು 2014 ರಲ್ಲಿ ಈ ಹುದ್ದೆಯನ್ನು ನಿರ್ವಹಿಸಿದ್ದರು. ಮೀರಾ ಕುಮಾರ್ 1973 ರಲ್ಲಿ ನಾಗರಿಕ ಸೇವೆಗೆ ಸೇರಿ, ಒಂದು ದಶಕಕ್ಕೂ ಹೆಚ್ಚು ಕಾಲ ಐಎಫ್‌ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದು, ಚುನಾವಣಾ ಅಖಾಡಕ್ಕೆ ಇಳಿದರು. 1985 ರಲ್ಲಿ, ಬಿಜ್ನೋರ್ ಉಪಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯನ್ನು ಸೋಲಿಸಿ ರಾಜಕೀಯಕ್ಕೂ ತಮ್ಮದೇ ಶೇಲಿಯಲ್ಲಿ ಎಂಟ್ರಿ ನೀಡಿದರು.

ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ 1960 ರಲ್ಲಿ ಯುಪಿಎಸ್‌ಸಿ ಸಿಎಸ್‌ಇಯಲ್ಲಿ ತೇರ್ಗಡೆಯಾದರು. ಮತ್ತು ಸುಧೀರ್ಷ ವರ್ಷಗಳ ಕಾಲ ಇವರು ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ, 1984 ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ, ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ನೀಡಿದರು. ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಇವರು ವಿದೇಶಾಂಗ ವ್ಯವಹಾರ ಹಾಗೂ ಹಣಕಾಸು ಸಚಿವಾಲಯಗಳನ್ನು ನಿಭಾಯಿಸಿದ್ದಾರೆ. ಸದ್ಯ ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

Lok Sabha Election Annamalai and Other IAS IPS IFS Officers Joining Politics

ಸತ್ಯಪಾಲ್ ಸಿಂಗ್

ಸತ್ಯಪಾಲ್ ಸಿಂಗ್ ಮಹಾರಾಷ್ಟ್ರ ಕೇಡರ್‌ನ 1980 ರ ಬ್ಯಾಚ್‌ನ ಮಾಜಿ ಐಪಿಎಸ್ ಅಧಿಕಾರಿ. ಸತ್ಯಪಾಲ್ ಮುಂಬೈನ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿದ್ದಾರೆ. ಇವರು ತಮ್ಮ ದಕ್ಷ ಕೆಲಸಕ್ಕೆ ಹೆಸರುವಾಸಿ. 2014ಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

ನಟವರ್‌ ಸಿಂಗ್‌

ನಟವರ್‌ ಸಿಂಗ್‌ 1953ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿ. ಐಎಫ್‌ಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 31 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ಇವರು ರಾಜಕೀಯಕ್ಕೆ ಪ್ರವೇಶ ಪಡೆದರು. ಅಲ್ಲದೆ ರಾಜಕೀಯದಲ್ಲೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಖಡಕ್‌ ಆಫೀಸರ್‌

ಕರ್ನಾಟಕದ ಖಡಕ ಪೊಲೀಸ್‌ ಆಫೀಸರ್‌ ಎಂದೇ ಖ್ಯಾತಿ ಪಡೆದಿದ್ದ ಅಣ್ಣಾಮಲೈ 2013ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ನೇಮಕ ಗೊಂಡರು. ಎಎಸ್‌ಪಿ, ಎಸ್‌ಪಿ ಹುದ್ದೆಗಳನ್ನು ಅಲಂಕಿರಿಸಿರುವ ಇವರು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡರು. 2020ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಣ್ಣಾಮಲೈ ಬಿಜೆಪಿ ಪಕ್ಷ ಸೇರಿದರು. ಅಲ್ಲದೆ ಈಗ ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಸ್‌ ಜಯಶಂಕರ್‌

ಮೋದಿ ಕ್ಯಾಬಿನೇಟ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು ಆಗಿರುವ ಎಸ್‌ ಜಯಶಂಕರ್‌ ಸಹ ಐಎಫ್‌ಎಸ್‌ ಅಧಿಕಾರಿ. ಐಎಫ್‌ಎಸ್‌ ಅಧಿಕಾರಿಯಾಗಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಜೈಶಂಕರ್‌ 2019ರಲ್ಲಿ ಇವರು ಬಿಜೆಪಿ ಸೇರಿಕೊಂಡರು. ಸದ್ಯ ಜಯಶಂಕರ್‌ ರಾಜಕೀಯದಲ್ಲಿ ಹೆಸರು ಮಾಡುತ್ತಿರುವ ರಾಜಕಾರಣಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+