Lok Sabha Elections Opinion Poll: ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ಜೋಡಿಗೆ ಅಖಿಲೇಶ್ ಯಾದವ್ ಸೈಕಲ್ ಪಂಚರ್?

ನವದೆಹಲಿ, ಜುಲೈ 29: ಯಾವುದೇ ಪಕ್ಷಗಳಿಗೆ ಕೇಂದ್ರದಲ್ಲಿ ಗದ್ದುಗೇರಲು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಬಹಳ ಮುಖ್ಯ, ಕಾರಣ ಅಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ. 545 ಸದಸ್ಯ ಬಲದ ಲೋಕಸಭೆಯಲ್ಲಿ ಉತ್ತರ ಪ್ರದೇಶ ಒಂದರಲ್ಲೇ ಎಂಬತ್ತು ಕ್ಷೇತ್ರಗಳಿವೆ.

ಉತ್ತರ ಪ್ರದೇಶದ ಚುನಾವಣಾ ಇತಿಹಾಸವನ್ನು ಅವಲೋಕಿಸಿದಾಗ ಈ ಹಿಂದೆ, ಅಲ್ಲಿ ಕಾಂಗ್ರೆಸ್ - ಸಮಾಜವಾದಿ ಪಕ್ಷ- ಬಹುಜನ ಸಮಾಜಪಕ್ಷದ್ದೇ ಕಾರುಬಾರು ಹೆಚ್ಚಾಗಿ ಇದ್ದ ಸಮಯ. ಆದರೆ, ಬಿಜೆಪಿ ಇಲ್ಲಿ ತಮ್ಮ ಅಸ್ತಿತ್ವವನ್ನು ಬಲ ಪಡಿಸಿಕೊಳ್ಳುತ್ತಿದ್ದಂತೆಯೇ ಇತರ ಪಕ್ಷಗಳು ಹೀನಾಯ ಸೋಲನ್ನು ಕಾಣಲು ಆರಂಭಿಸಿದವು.

lok-sabha-election-2024-opinion-poll

ಕಳೆದ ಬಾರಿಯ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಬಿಜೆಪಿ ಮೈತ್ರಿಕೂಟ 62ಸ್ಥಾನವನ್ನು ಗೆದ್ದಿದ್ದವು. 2014ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಇಲ್ಲಿ ಒಂಬತ್ತು ಕ್ಷೇತ್ರವನ್ನು ಕಳೆದುಕೊಂಡಿತ್ತು.

ಇನ್ನು, ಕಳೆದ ಚುನಾವಣೆಯಲ್ಲಿ ಮಹಾಘಟಬಂಧನ್ ಹೆಸರಿನಲ್ಲಿ ಅಲ್ಲಿನ ಮೂರು ಪ್ರಮುಖ ಪಕ್ಷಗಳಾದ ಎಸ್ಪಿ-ಬಿಎಸ್ಪಿ-ರಾಷ್ಟ್ರೀಯ ಲೋಕದಳ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದಿದ್ದವು ಮತ್ತು ಹದಿನೈದು ಕ್ಷೇತ್ರವನ್ನು ಮಾತ್ರ ಗೆಲ್ಲಲು ಶಕ್ತವಾಗಿದ್ದವು.

ಇನ್ನು ಉತ್ತರ ಪ್ರದೇಶದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ವರುಷದಿಂದ ಅಲ್ಲೇ ಬಿಡಾರ ಹೂಡಿದ್ದ ಪ್ರಿಯಾಂಕ ಗಾಂಧಿಗೆ ಚುನಾವಣಾ ಫಲಿತಾಂಶ ಇನ್ನಿಲ್ಲದ ಮುಖಭಂಗವನ್ನು ಎದುರಿಸುವಂತಾಗಿತ್ತು. ಸೋನಿಯಾ ಗಾಂಧಿ ಒಬ್ಬರೇ ಅಲ್ಲಿಂದ ಗೆದ್ದಿದ್ದರು, ಖುದ್ದು ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋಲುಂಡಿದ್ದರು.

ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಇಂಡಿಯಾ ಟಿವಿ - ಸಿಎನ್ ಎಕ್ಸ್ (India TV - CNX Opinion Poll) ಜಂಟಿಯಾಗಿ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ, ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಕ್ಕಿಂತಲೂ ಬಿಜೆಪಿಗೆ ಹೆಚ್ಚಾಗಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ

ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 73ಸ್ಥಾನವನ್ನು ಗೆಲ್ಲಲಿದೆ ಎಂದು ಜಂಟಿ ಸರ್ವೇಯಲ್ಲಿ ಹೇಳಲಾಗಿದೆ. ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ ಇರಲಿದೆ ಎನ್ನುವುದರ ಆಧಾರದ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಇದು ಪ್ರಧಾನಿ ನರೇಂದ್ರ ಮೋದಿಗೆ ಸಿಗುತ್ತಿರುವ ಬಹುದೊಡ್ಡ ಗೆಲುವು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ

ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳಕ್ಕೆ ಒಟ್ಟು ಐದು ಸ್ಥಾನ ಸಿಗಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ, ಇದರಲ್ಲಿ ಎಸ್ಪಿ ಪಾಲು ನಾಲ್ಕು. ಇನ್ನು ಮಾಯಾವತಿ ನೇತೃತ್ವದ ಬಿಎಸ್ಪಿ ಖಾತೆ ತೆರೆಯುವ ಸಾಧ್ಯತೆ ಕಮ್ಮಿ. ಶೇ. 52ರಷ್ಟು ಜನ ಬಿಜೆಪಿ, ಶೇ. 23ರಷ್ಟು ಮತಗಳು ಈಗಿನ ಸರ್ವೇ ಪ್ರಕಾರ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ಸಿಗೆ ಕೇವಲ ಶೇ. ನಾಲ್ಕರಷ್ಟು ಮತಗಳು ಮಾತ್ರ ಸಿಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+