ಇಂದಿನ ಮಕ್ಕಳೇ ಮುಂದಿನ ರಾಜಕಾರಣಿಗಳು, ಚಿತ್ರ ನೋಡಿ
ಕೋಲ್ಕತಾ, ಮಾರ್ಚ್ 14: ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು... ಈ ಮಾತನ್ನು ಅಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಇದು ಚುನಾವಣೆ ಕಾಲದಲ್ಲಿ ತುಸು ಹೆಚ್ಚಿಗೇ ಕೇಳಿಬರುತ್ತದೆ. ಬರೀ ಕೇಳಿಬರುವುದೇನೂ ಕಂಡುಬಂದಿದೆ ಸಹ.
ಇದೀಗ ಲೋಕಸಭೆ ಚುನಾವಣೆ ಕಾಲ. ರಾಜಕಾರಣಿಗಳು ಮತ್ತು ಮತಕ್ಕಾಗಿ ಅವರಾಡುವ ಮಂಗನಾಟಗಳನ್ನು ಕಂಡರೆ ಜನ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಅಷ್ಟರ ಮಟ್ಟಿಗೆ ಅವರ ಮತಭಿಕ್ಷೆ ಹೇಸಿಗೆ ಮೂಡಿಸುತ್ತದೆ. ಅದೇ ಚುನಾವಣೆ ಮುಗಿಯುತ್ತಿದ್ದಂತೆ ನಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ರಾಜಕಾರಣಿಗಳ ಮೇಲಿನ ಗುರುತರ ಆಪಾದನೆ.
ಅದೇನೇ ಇರಲಿ ಅದನ್ನೆಲ್ಲಾ ಮರೆತು ಒಮ್ಮೆ ಈ ಅಬೋಧ ಮಕ್ಕಳತ್ತ ನೋಡಿ. ಒಬ್ಬೊಬ್ಬರೂ ಭವಿಷ್ಯದ ಪ್ರಜೆಗಳು/ ನಾಯಕರು ಆಗಬಲ್ಲವರೇ. ಅಷ್ಟು ಚೆನ್ನಾಗಿ ಇವರಿಗೆ ಪೋಷಾಕು ತೊಡಿಸಿ, ಪೋಷಕರು ಸಂಭ್ರಮಿಸಿದ್ದಾರೆ. (ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!)
ಅದೇ, ಮಗುವಿನ ನಿಜ ರೂಪದ ರಾಜಕಾರಣಿಯನ್ನು ನೋಡಿ, ಜನ ಮೂಗುಮುರಿಯಬಹುದು. ಆದರೆ ಪುಟ್ಟ ರೂಪದ ಈ ರಾಜಕಾರಣಿಗಳನ್ನು ಕಂಡರೆ ಖಂಡಿತಾ ಇಷ್ಟುಪಡುತ್ತೀರಿ. ಮಕ್ಕಳೇ ಹಾಗೆ ಅವು ಯಾವ ರೂಪದಲ್ಲೇ ಇದ್ದರೂ ಚೆನ್ನ. ಏನಂತೀರಿ!?
(ಚಿತ್ರ: ಪಿಟಿಐ)













Click it and Unblock the Notifications