ಲಾಕ್ ಡೌನ್; ಗ್ರಾಮಾಂತರ ಪ್ರದೇಶಕ್ಕೆ ಹಲವು ವಿನಾಯಿತಿ ಘೋಷಣೆ
ಬೆಂಗಳೂರು, ಏಪ್ರಿಲ್ 17 : ಕೇಂದ್ರ ಸರ್ಕಾರ ಕೆಲವು ಕ್ಷೇತ್ರಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿಯನ್ನು ನೀಡಿದೆ. ಇವುಗಳಲ್ಲಿ ಮುಖ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿನ ಚಟುವಟಿಕೆಗಳಿಗೆ ಕೆಲವೊಂದು ವಿನಾಯಿತಿ ಘೋಷಣೆ ಮಾಡಲಾಗಿದೆ.
ಇಡೀ ದೇಶದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳು, ನೀರಿನ ಪೂರೈಕೆ, ಒಳಚರಂಡಿ ಕೆಲಸಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲವೊಂದು ಬೆಳೆಗಳ ಬಿತ್ತನೆ, ಸಂಗ್ರಹ, ಕಟಾವಿಗೆ ಸಹ ಅನುಮತಿ ನೀಡಲಾಗಿದೆ. ಮೇ 3ರ ತನಕ ಇಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ನಿರ್ಮಾಣ ಚಟುವಟಿಕೆಗಳು ನೀರು ಮತ್ತು ಒಳಚರಂಡಿ ವ್ಯವಸ್ಥೆ, ವಿದ್ಯುತ್ ಲೈನ್‌ಗಳ ಅಳವಡಿಕೆ, ದೂರವಾಣಿ ಸಂಪರ್ಕ ಕಲ್ಪಿಸಲು ಕೇಬಲ್ ಆಳವಡಿಕೆ ಮಾಡಲು ಲಾಕ್ ಡೌನ್ ಇದ್ದರೂ ಅವಕಾಶವನ್ನು ನೀಡಲಾಗಿದೆ.

ಚಿಕ್ಕಪುಟ್ಟ ಆರ್ಥಿಕ ವ್ಯವಹಾರ, ಸಹಕಾರಿ ಸಂಘಗಳು ಕಡಿಮೆ ಸಿಬ್ಬಂದಿಗಳ ಜೊತೆ ಕಾರ್ಯ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮೇ 3ರ ತನಕ ಈ ವಿನಾಯಿತಿ ಜಾರಿಯಲ್ಲಿ ಇರುತ್ತದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಜನರಿಗೆ ಸಹಾಯಕವಾಗಲಿದೆ.
ಮಾರ್ಚ್ 24ರಿಂದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದರು. ಏಪ್ರಿಲ್ 13ರಂದು ಮತ್ತೊಮ್ಮೆ ಲಾಕ್ ಡೌನ್ ಅನ್ನು 19 ದಿನಗಳಿಗೆ ವಿಸ್ತರಣೆ ಮಾಡಿದ್ದರು.
ಲಾಕ್ ಡೌನ್ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಪ್ರದೇಶದಲ್ಲಿ ಲಾಕ್ ಡೌನ್‌ನಿಂದ ಯಾವುದೇ ವಿನಾಯಿತಿ ನೀಡಬಾರದು ಎಂದು ಹೇಳಿದೆ.












Click it and Unblock the Notifications