ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಲಾಕ್ ಡೌನ್ 4.O: ದೇಶದಲ್ಲಿ ಏನಿರುತ್ತೆ ಏನಿರುವುದಿಲ್ಲ?

|
Google Oneindia Kannada News

ನವದೆಹಲಿ, ಮೇ.17: ನೊವೆಲ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೆ 14 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಲಾಗಿದೆ. ಮೇ.31ರವರೆಗೂ ನಾಲ್ಕನೇ ಅವಧಿಯ ಲಾಕ್ ಡೌನ್ ಮುಂದುರಿಸಲು ಕೇಂದ್ರ ಸರ್ಕಾರವು ಆದೇಶಿಸಿದೆ. ಇದರ ಜೊತೆಗೆ ಲಾಕ್ ಡೌನ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮಾರ್ಚ್.25 ರಿಂದ ಏಪ್ರಿಲ್.14ರವರೆಗೂ ಮೊದಲ ಹಂತ, ಏಪ್ರಿಲ್.15 ರಿಂದ ಮೇ.03ರವರೆಗೂ ಎರಡನೇ ಹಂತ, ಹಾಗೂ ಮೇ.04ರಿಂದ ಮೇ.17ರವೆಗೂ ಮೂರನೇ ಹಂತದ ಲಾಕ್ ಡೌನ್ ಘೋಷಿಸಲಾಗಿತ್ತು. ಮೇ.18 ರಿಂದ ಮೇ.31ರವರೆಗೂ ನಾಲ್ಕನೇ ಹಂತದ ಲಾಕ್ ಡೌನ್ ಘೋಷಿಸಲಾಗಿದೆ.

ಮೇ 31ರ ತನಕ ಲಾಕ್ಡೌನ್ ವಿಸ್ತರಣೆ ಮಾಡಿದ ಗೃಹ ಇಲಾಖೆಮೇ 31ರ ತನಕ ಲಾಕ್ಡೌನ್ ವಿಸ್ತರಣೆ ಮಾಡಿದ ಗೃಹ ಇಲಾಖೆ

ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತೀಯರು ಕೊರೊನಾ ವೈರಸ್ ನೊಂದಿಗೆ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿಯಬೇಕಿದೆ. ನಾಲ್ಕನೇ ಹಂತದ ಲಾಕ್ ಡೌನ್ ಸಂಪೂರ್ಣ ಭಿನ್ನವಾಗಿರುತ್ತದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ. ನಾಲ್ಕನೇ ಅವಧಿಯ ಲಾಕ್ ಡೌನ್ ನಲ್ಲಿ ಏನಿರುತ್ತೆ ಏನಿರಲ್ಲ ಎಂಬುದನ್ನು ನೋಡೋಣ.

ಮದ್ಯಪ್ರಿಯರಿಗೆ ಯಾವುದೇ ಆತಂಕ ಬೇಕಿಲ್ಲ

ಮದ್ಯಪ್ರಿಯರಿಗೆ ಯಾವುದೇ ಆತಂಕ ಬೇಕಿಲ್ಲ

ಭಾರತ ಲಾಕ್ ಡೌನ್ 4.O ನಲ್ಕೂ ಕೂಡಾ ಮದ್ಯಪ್ರಿಯರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯನ್ನು ನೀಡಿದೆ. ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ. ಜೊತೆಗೆ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಅವಕಾಶವನ್ನು ನೀಡಿಲ್ಲ. ಪಾರ್ಸೆಲ್ ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅನುಮಿತಿ ನೀಡಲಾಗಿದೆಯೇ ವಿನಃ ಕುಳಿತು ಮದ್ಯಪಾನ ಮಾಡುವುದಕ್ಕೆ ಅವಕಾಶ ನೀಡಿಲ್ಲ.

ಮಾಲ್, ಥಿಯೇಟರ್, ಶಾಲಾ-ಕಾಲೇಜ್ ಬಂದ್

ಮಾಲ್, ಥಿಯೇಟರ್, ಶಾಲಾ-ಕಾಲೇಜ್ ಬಂದ್

ಭಾರತ ಲಾಕ್ ಡೌನ್ 4.O ನಲ್ಲಿ ಶಾಲಾ-ಕಾಲೇಜ್, ಮಾಲ್ ಮತ್ತು ಚಿತ್ರಮಂದಿರ ಹಾಗೂ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಮೆಟ್ರೋ ಹಾಗೂ ವಿಮಾನ ಸಂಚಾರಕ್ಕೂ ಕೂಡಾ ನಿರ್ಬಂಧ ವಿಧಿಸಿರುವುದನ್ನು ಮುಂದುವರಿಸಲಾಗಿದೆ.

ಭಾರತ ಲಾಕ್ ಡೌನ್ 4.O ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ!ಭಾರತ ಲಾಕ್ ಡೌನ್ 4.O ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ!

ವಲಯಗಳ ತೀರ್ಮಾನ ಜವಾಬ್ದಾರಿ ರಾಜ್ಯಗಳ ಹೆಗಲಿಗೆ

ವಲಯಗಳ ತೀರ್ಮಾನ ಜವಾಬ್ದಾರಿ ರಾಜ್ಯಗಳ ಹೆಗಲಿಗೆ

ಕೇಂದ್ರ ಸರ್ಕಾರದ ಬದಲು ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ತೀರ್ಮಾನಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ನೀಡಲಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ ಎಂದಿನಂದೆ ಮುಂದುವರಿಸಲಾಗಿದೆ.

ರಾಜ್ಯಗಳಿಗೆ ಅಂತಾರಾಜ್ಯ ಸಾರಿ ಅನುಮತಿ ನಿರ್ಧಾರ

ರಾಜ್ಯಗಳಿಗೆ ಅಂತಾರಾಜ್ಯ ಸಾರಿ ಅನುಮತಿ ನಿರ್ಧಾರ

ಅಂತಾರಾಜ್ಯ ಸಂಚಾರಕ್ಕೆ ಅನುಮತಿ ನೀಡಬೇಕೇ ಬೇಡವೇ ಎನ್ನುವುದನ್ನು ಆಯಾ ರಾಜ್ಯ ಸರ್ಕಾರಗಳು ತೀರ್ಮಾನಿಸಬೇಕು ಎಂದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಎರಡು ದಿನಕ್ಕೆ ಲಾಕ್‌ಡೌನ್‌ ವಿಸ್ತರಣೆರಾಜ್ಯದಲ್ಲಿ ಎರಡು ದಿನಕ್ಕೆ ಲಾಕ್‌ಡೌನ್‌ ವಿಸ್ತರಣೆ

ಕಟ್ಟುನಿಟ್ಟಿನಿಂದ ಸಾರ್ವಜನಿಕ ಪ್ರದೇಶಗಳಲ್ಲಿ ನಿಯಮ

ಕಟ್ಟುನಿಟ್ಟಿನಿಂದ ಸಾರ್ವಜನಿಕ ಪ್ರದೇಶಗಳಲ್ಲಿ ನಿಯಮ

ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ, ದೂಮಪಾನ, ಗುಟ್ಕಾ ಹಾಕಿಕೊಂಡು ಉಗಿಯುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಬಳಕೆಯನ್ನು ಮೊದಲಿನಂತೆ ಮುಂದುವರಿಸಲು ಸೂಚಿಸಲಾಗಿದೆ.

ಲಾಕ್ ಡೌನ್ ಉಲ್ಲಂಘಿಸಿದರೆ ಜೈಲುಶಿಕ್ಷೆ ಮತ್ತು ದಂಡ

ಲಾಕ್ ಡೌನ್ ಉಲ್ಲಂಘಿಸಿದರೆ ಜೈಲುಶಿಕ್ಷೆ ಮತ್ತು ದಂಡ

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕಿದೆ. ಭಾರತ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದ ಅಪರಾಧಕ್ಕೆ 1 ವರ್ಷ ಜೈಲುಶಿಕ್ಷೆ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ.

English summary
India Lockdown 4.O: Which Shops Are Allowed To Opened And Which Are To Closed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X