ರಾಷ್ಟ್ರಪತಿ ಚುನಾವಣೆ ಅಖಾಡಕ್ಕೆ ಆಡ್ವಾಣಿ ಇರಲಿ: ಸಿನ್ಹಾ

Posted By:
Subscribe to Oneindia Kannada

ನವದೆಹಲಿ, ಜೂನ್ 15: ಈ ಬಾರಿಯ ರಾಷ್ಟ್ರಪತಿ ಚುನಾವಣೆಗೆ ಲಾಲ್ ಕೃಷ್ಣ ಆಡ್ವಾಣಿಯವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂಬ ಮಾತು ಹುಸಿಯಾಗಿ, ಹಳತಾಗಿ, ಇದೀಗ ತುಕ್ಕೂ ಹಿಡಿದಿದೆ.

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ವಲಯದಲ್ಲಿ ಈಗಾಗಲೇ ಹಲವಾರು ಹೆಸರುಗಳು ಪ್ರಸ್ತಾಪವಾಗಿದೆ. ಆದರೆ, ಬಿಜೆಪಿ ಪಾಳಯದಲ್ಲೇ ಲಾಲ್ ಕೃಷ್ಣ ಆಡ್ವಾಣಿಯವರ ಸಾಫ್ಟ್ ಕಾರ್ನರ್ ಇರುವ ವ್ಯಕ್ತಿಗಳು ಆಡ್ವಾಣಿ ಅವರನ್ನು ರಾಷ್ಟ್ರಪತಿಯನ್ನಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರೂ ಒಬ್ಬರು.

ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ

LK Advani For President, Lobbies Shatrughan Sinha, Claims Wide Support

ಗುರುವಾರ ಬೆಳಗ್ಗೆ ಅವರು ಮಾಡಿದ ಟ್ವೀಟ್ ಒಂದು ಆಡ್ವಾಣಿಯವರನ್ನು ರಾಷ್ಟ್ರಪತಿಯನ್ನಾಗಿ ನೋಡಬೇಕೆಂಬ ಆಸೆಯನ್ನು ಹೊರದೂಡಿದೆ. ಇದಕ್ಕೆ ಹಲವಾರು ಜನರು ಪ್ರತಿಕ್ರಿಯಿಸಿದ್ದು ಆಡ್ವಾಣಿಯವರನ್ನು ಮಹೋನ್ನತ ಹುದ್ದೆಗೆ ಸೂಕ್ತವಾದ ವ್ಯಕ್ತಿಯೆಂದು ಹೇಳಿದ್ದಾರೆ. ಇದು ಲಾಲ್ ಕೃಷ್ಣ ಆಡ್ವಾಣಿಯವರ ಬಗ್ಗೆ ಜನರು ಹೊಂದಿರುವ ಸಹಾನುಭೂತಿಗೂ ಸಾಕ್ಷಿಯಾಗಲಿದೆ.

ಖಾಮೋಶ್, ಬೇರೆ ಪಕ್ಷಗಳೇ ರಜನಿ ಪಕ್ಷವನ್ನು ಸೇರಲಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Senior BJP leader Shatrughan Sinha, a former actor, has been tweeting in support of BJP veteran LK Advani. In his posts, he has been sharing people's responses who support Mr Advani's candidature for the country's President.
Please Wait while comments are loading...