• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿರಾಗ್ ಪಾಸ್ವಾನ್ ಕಸಿನ್ ವಿರುದ್ಧ ರೇಪ್ ಕೇಸ್, ಚಿರಾಗ್ ವಿರುದ್ಧವೂ ಎಫ್ಐಆರ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಲೋಕ ಜನಶಕ್ತಿ ಪಕ್ಷದ (ಎಲ್‌ಪಿಜಿ) ಮುಖಂಡ ಚಿರಾಗ್ ಪಾಸ್ವಾನ್ ಕಸಿನ್, ಪಕ್ಷದ ಸಂಸದ ಪ್ರಿನ್ಸ್‌ ರಾಜ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಂಸದ ಪ್ರಿನ್ಸ್ ಪಾಸ್ವಾನ್ ರಕ್ಷಣೆಗೆ ಮುಂದಾಗಿದ್ದರಿಂದ ಚಿರಾಗ್ ವಿರುದ್ಧವೂ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.

ದೆಹಲಿಯಲ್ಲಿ ಪ್ರಿನ್ಸ್‌ ರಾಜ್‌ ವಿರುದ್ಧ ಜೂನ್ ತಿಂಗಳಲ್ಲಿ ಅತ್ಯಾಚಾರ ಎಸಗಿದ ಆರೋಪ ಹೊರೆಸಿ ಪಕ್ಷದ ಕಾರ್ಯಕರ್ತೆಯೊಬ್ಬರು ದೂರು ನೀಡಿದ್ದರು. ಮಹಿಳೆಯು ನೀಡಿದ ಮೂರು ಪುಟಗಳ ದೂರನ್ನು ಕೊನಟ್ ಪ್ಲೇಸ್ (Connaught) ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿತ್ತು. ನಶೆ ಏರುವ ಔಷಧಿ ಹಾಕಿದ ಪಾನೀಯ ಕುಡಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿದರು ಎಂದು ಸಮಸ್ಟಿಪುರ್ ಸಂಸದ ಪ್ರಿನ್ಸ್‌ ರಾಜ್ ವಿರುದ್ಧ ದೂರು ಕೊಡಲಾಗಿತ್ತು.

ಸಂಸದ ಪ್ರಿನ್ಸ್ ವಿರುದ್ಧ ಒಂದು ತಿಂಗಳಾದರೂ ಯಾವುದೇ ತನಿಖೆ, ವಿಚಾರಣೆ ನಡೆಸದ ಕಾರಣ ನ್ಯಾಯಕ್ಕಾಗಿ ಸಂತ್ರಸ್ತ ಮಹಿಳೆ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಮನವಿ ಸ್ವೀಕರಿಸಿದ ದೆಹಲಿ ಕೋರ್ಟ್ ಸೆಪ್ಟೆಂಬರ್ 9ರಂದು ಈ ಬಗ್ಗೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ಕೋರ್ಟ್ ನಿರ್ದೇಶನದಂತೆ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದೆ. ಕಾನೂನು ಕ್ರಮಕ್ಕೆ ಅಡ್ಡಿಪಡಿಸಿದ್ದು ಹಾಗೂ ಪ್ರಕರಣದ ತನಿಖೆ ವಿಳಂಬಕ್ಕೆ ಕಾರಣರಾದ ಆರೋಪದ ಮೇಲೆ ಚಿರಾಗ್ ಪಾಸ್ವಾನ್ ವಿರುದ್ಧವೂ ಎಫ್ಐಆರ್ ಹಾಕಲಾಗಿದೆ.

''ಪ್ರಿನ್ಸ್ ಹಾಗೂ ಚಿರಾಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಹಾಕಲಾಗಿದೆ, ಮೇ ತಿಂಗಳಲ್ಲಿ ದೂರು ದಾಖಲಿಸಲಾಗಿತ್ತು. ಸೆಪ್ಟೆಂಬರ್ 9ರಂದು ಕೋರ್ಟ್ ನಿರ್ದೇಶನದಂತೆ ದೆಹಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ'' ಎಂದು ಮಹಿಳೆ ಪರ ವಕೀಲರಾದ ಸುದೇಶ್ ಕುಮಾರಿ ಜೆಥ್ವಾ ಹೇಳಿದ್ದಾರೆ.

''ಪಕ್ಷದ ಕಾರ್ಯಕರ್ತೆಯಾಗಿದ್ದ ಮಹಿಳೆಯು ಒಂದು ಪಾರ್ಟಿಯಲ್ಲಿ ಪ್ರಿನ್ಸ್ ರನ್ನು ಭೇಟಿ ಮಾಡಿದ್ದರು. ಮಹಿಳೆಗೆ ಕುಡಿಯಲು ಪಾನೀಯ ಕೊಟ್ಟಿದ್ದ ಪ್ರಿನ್ಸ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಆಕೆಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಲಾಗಿದೆ. ಆಕೆಗೆ ಎಚ್ಚರವಾದಾಗ ಪ್ರಿನ್ಸ್ ಭುಜದ ಮೇಲೆ ಆಕೆ ತಲೆ ಇತ್ತು. ನಿನಗೆ ಪ್ರಜ್ಞೆ ತಪ್ಪಿತ್ತು, ಅರೈಕೆ ಮಾಡಿದೆ ಎಂದು ಪ್ರಿನ್ಸ್ ಆಕೆಯನ್ನು ಸಂತೈಸಲು ಯತ್ನಿಸಿದ್ದಾರೆ. ಆದರೆ, ಆಕೆ ಪದೇ ಪದೇ ಏನು ನಡೆಯಿತು ಎಂದು ಪ್ರಶ್ನಿಸಿದಾಗ, ವಿಡಿಯೋ ತೋರಿಸಿ ಹೆದರಿಸಲಾಗಿದೆ, ಮದುವೆಯಾಗುವುದಾಗಿ ನಂಬಿಸಿ ನಂತರ ಕೈಕೊಟ್ಟಿದ್ದಾರೆ'' ಎಂದು ಘಟನೆ ಬಗ್ಗೆ ವಕೀಲರು ವಿವರಿಸಿದ್ದಾರೆ.

ಆರೋಪ ಅಲ್ಲಗೆಳೆದ ಪ್ರಿನ್ಸ್
ನನ್ನ ಮೇಲಿನ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸುಳ್ಳು ಸುದ್ದಿ ಹಬ್ಬಿಸಿ ನನ್ನ ರಾಜಕೀಯ ಬದುಕಿಗೆ ಕಳಂಕ ತರಲು ಯತ್ನಿಸಲಾಗುತ್ತಿದೆ, ಇದು ದೊಡ್ಡ ಮಟ್ಟದ ಷಡ್ಯಂತ್ರವಾಗಿದೆ, ವೈಯಕ್ತಿಕವಾಗಿ ಹಾಗೂ ರಾಜಕೀಯ ಮಟ್ಟದಲ್ಲೂ ನನಗೆ ಹಾನಿಯುಂಟು ಮಾಡಲು ಯತ್ನಿಸಲಾಗಿದೆ ಎಂದು ಸಂಸದ ಪ್ರಿನ್ಸ್ ಸ್ಪಷ್ಟಪಡಿಸಿದ್ದರು.

ಆ ಮಹಿಳೆ ಈ ಹಿಂದೆ ಕೂಡಾ ಇದೇ ರೀತಿ ಆರೋಪ ಮಾಡಿದ್ದರು. ಆಕೆ ವಿರುದ್ಧ ಫೆಬ್ರವರಿ ತಿಂಗಳಲ್ಲಿ ದೂರು ನೀಡಿದ್ದೆ, ಆಕೆ ವಿರುದ್ಧವೇ ಸುಳ್ಳು ಆರೋಪ ಹೊರೆಸಿದ್ದಕ್ಕೆ ಎಫ್ಐಆರ್ ಹಾಕಲಾಗಿದೆ ಎಂದಿದ್ದಾರೆ.

ಚಿರಾಗ್ ಪಾಸ್ವಾನ್ ಹಾಗೂ ಕಸಿನ್ ಪ್ರಿನ್ಸ್ ಪಾಸ್ವಾನ್ ನಡುವೆ ಇದ್ದ ಸಂಬಂಧ ಈ ವರ್ಷದ ಆರಂಭದಲ್ಲಿ ಕಡಿತಗೊಂಡಿದೆ. ಲೋಕ ಜನಶಕ್ತಿ ಪಕ್ಷ ಇಬ್ಭಾಗವಾಗಿ ಪ್ರಿನ್ಸ್ ರಾಜ್ ಸೇರಿದಂತೆ 6 ಮಂದಿ ಎಲ್ ಜೆ ಪಿ ಸಂಸದರು ಪಕ್ಷದಿಂದ ಬೇರ್ಪಟ್ಟಿದ್ದರು. 1989ರಲ್ಲಿ ಜನಿಸಿದ ಪ್ರಿನ್ಸ್ 2019ರ ಅಕ್ಟೋಬರ್ 24 ರ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಪ್ರಿನ್ಸ್ ತಂದೆ ಹಾಲಿ ಸಂಸದ ರಾಮ್ ಚಂದ್ರ ಪಾಸ್ವಾನ್ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಪ್ರಿನ್ಸ್ ಗೆಲುವು ಸಾಧಿಸಿದ್ದರು.

2019ರ ಅಕ್ಟೋಬರ್ ತಿಂಗಳಲ್ಲಿ ಲೋಕ ಜನಶಕ್ತಿ ಪಕ್ಷದ ಬಿಹಾರ ಘಟಕದ ನೇತೃತ್ವ ನೀಡಲಾಗಿತ್ತು. ಪಶುಪತಿ ಕುಮಾರ್ ಪಾರಸ್ ಅವರಿಂದ ಅಧಿಕಾರ ವಹಿಸಿಕೊಂಡ ಪ್ರಿನ್ಸ್, ನಂತರ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಲ್ಯಾಣ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದರು. ಜೂನ್ 15 ರಂದು ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ಪ್ರಿನ್ಸ್ ಸೇರಿದಂತೆ ಐವರು ರೆಬೆಲ್ ಸಂಸದರನ್ನು ಚಿರಾಗ್ ಪಾಸ್ವಾನ್ ಉಚ್ಚಾಟನೆ ಮಾಡಿದ್ದರು.

English summary
Chirag Paswan's Cousin LJP MP Prince Raj Booked for Rape in Delhi, FIR Mentions Late Union Minister's Son Chirag Paswan name Too
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X