Samosa: ಮಗು ಕೈಯಲ್ಲಿದ್ದ ಸಮೋಸಾದಲ್ಲಿ ಹಲ್ಲಿ ಪತ್ತೆ: ಬಾಲ ನೋಡಿ ಬೆಚ್ಚಿಬಿದ್ದ ಪೋಷಕರು..!
ರೇವಾ ನವೆಂಬರ್ 8: ಹಲ್ಲಿ ಇರುವ ಸಮೋಸಾ ತಿಂದು ಐದು ವರ್ಷದ ಮಗು ಆಸ್ಪತ್ರೆಗೆ ದಾಖಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಂಗಡಿಯಲ್ಲಿ ಖರೀದಿಸಿ ತಂದ ಸಮೋಸದಲ್ಲಿ ಹಲ್ಲಿ ಪತ್ತೆಯಾಗಿದ್ದು ಪೋಷಕರು ಬೆಚ್ಚಿಬಿದ್ದಿದ್ದಾರೆ. ಸಮೋಸಾ ತಿಂದ ತಕ್ಷಣ ಮಗು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿಪಾನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಗುವಿನ ಪೋಷಕರು ಸಮೋಸವನ್ನು ತಿನ್ನಲು ನೀಡಿದ್ದಾರೆ. ಆದರೆ ಮಗು ಸಮೋಸ ವಿಭಿನ್ನ ರುಚಿ ಇರುವುದರಿಂದ ತಿನ್ನುವುದನ್ನು ಬಿಟ್ಟಿದೆ. ಆದರೆ ಮಗು ತಿಂದ ಸಮೋಸದಲ್ಲಿ ಹಲ್ಲಿಯ ಬಹುತೇಕ ಭಾಗ ಇದ್ದು ಕೇವಲ ಬಾಲ ಮಾತ್ರ ಉಳಿದಿರುವುದು ಕಂಡು ಬಂದಿದೆ. ಇದರಿಂದ ಹೆದರಿದ ಪೋಷಕರು ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಾರ್ಗ ಮಧ್ಯದಲ್ಲಿ ಮಗುವನ ಆರೋಗ್ಯ ಹದಗೆಟ್ಟಿದೆ. ಬಳಿಕ ಕುಟುಂಬಸ್ಥರು ಮಗುವನ್ನು ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಸದ್ಯ ಚಿಕಿತ್ಸೆ ನಡೆಯುತ್ತಿದೆ. ಮಗು ಅಪಾಯದಿಂದ ಪಾರಾಗಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಘಟನೆ ನಡೆದಿದ್ದು ಹೇಗೆ?
ಮಗುವಿನ ತಂದೆ ಪಂಕಜ್ ಶರ್ಮಾ ತನ್ನ ಪತ್ನಿಗೆ ಚಿಕಿತ್ಸೆ ಕೊಡಿಸಿ ತನ್ನ ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದರು. ದಾರಿಯಲ್ಲಿ ಪಂಕಜ್ ಶರ್ಮಾ ತನ್ನ ಸ್ನೇಹಿತನಿಗೆ ಹತ್ತಿರದ ಅಂಗಡಿಯಲ್ಲಿ ಸಮೋಸ ಮತ್ತು ಜಿಲೇಬಿಯನ್ನು ಖರೀದಿಸಲು ಹೇಳಿದರು. ಪಂಕಜ್ ಶರ್ಮಾ ಸಲಹೆಯಂತೆ ಸ್ನೇಹಿತ ಸಮೋಸ ಮತ್ತು ಜಿಲೇಬಿಯನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.
ಸಮೋಸಾದಲ್ಲಿ ಹಲ್ಲಿ ಬಾಲ ಪತ್ತೆ
ಮನೆಗೆ ಬಂದ ಬಳಿಕ ಮಗು ಆಹಾರ ಕೇಳಿದೆ. ಆಗ ಮಗುವಿಗೆ ಸಮೋಸವನ್ನು ನೀಡಲಾಗಿದೆ. ಮಗು ಅರ್ಧ ಸಮೋಸ ತಿಂದ ತಕ್ಷಣ ಏನೋ ವಿಚಿತ್ರ ಅನ್ನಿಸಿ ಉಳಿದ ಸಮೋಸವನ್ನು ಕೆಳಗೆ ಹಾಕಿದೆ. ತಕ್ಷಣ ಮಗುವಿನ ಆರೋಗ್ಯ ಹದಗೆಟ್ಟಿದೆ. ತಂದೆಗೆ ಅನುಮಾನ ಬಂದು ಉಳಿದ ಸಮೋಸ ಕೈಗೆತ್ತಿಕೊಂಡಾಗ ಬೆಚ್ಚಿಬಿದ್ದಿದ್ದಾರೆ. ಹಲ್ಲಿಯ ಬಾಲ ಸಮೋಸಾದಲ್ಲಿರುವುದು ಕಂಡಿದೆ.
ಸಾಮಾನ್ಯವಾಗಿ ಸಮೋಸದಲ್ಲಿ ಇರುವ ಮಸಾಲೆ ಹೊರಗಡೆ ಕಾಣಿಸುವುದಿಲ್ಲ. ಅದನ್ನು ತಿನ್ನುವಾಗ ಜಾಗರೂಕರಾಗಿ ಸೇವಿಸಬೇಕು. ಆದರೆ ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಪಂಕಜ್ ಶರ್ಮಾ ಮಗುವಿಗೆ ಸಮೋಸವನ್ನು ನೀಡಿದ್ದಾರೆ. ಅದನ್ನು ತಿಂದ ಮಗು ಅರ್ಧಕ್ಕೆ ಸಮೋಸವನ್ನು ತಿನ್ನುವುದನ್ನು ಬಿಟ್ಟಿದೆ. ಈ ವೇಳೆ ಮಗುವಿನ ತಂದೆ ಸಮೋಶವನ್ನು ಗಮಸಿದಾಗ ವಿಷಯ ಗೊತ್ತಾಗಿದೆ.
ಕುಟುಂಬ ಸದಸ್ಯರಿಂದ ದೂರು
ಪಂಕಜ್ ಶರ್ಮಾ ಸ್ನೇಹಿತ ಧೇಖಾ ಪ್ರದೇಶದಲ್ಲಿರುವ ಸುರೇಶ್ ಹೋಟೆಲ್ ಎಂಬ ಅಂಗಡಿಯಿಂದ ಸಮೋಸಾ ಮತ್ತು ಜಿಲೇಬಿಯನ್ನು ಖರೀದಿಸಿದ್ದರು. ಇದೀಗ ಅಂಗಡಿಯವನ ವಿರುದ್ಧ ಪೊಲೀಸ್ ಹಾಗೂ ಆಹಾರ ಇಲಾಖೆಗೆ ದೂರು ನೀಡಲು ಸಿದ್ಧತೆ ನಡೆಸಿದೆ. ಅಲ್ಲದೆ ಅಂಗಡಿಯಲ್ಲಿ ತಯಾರಾಗುವ ಆಹಾರದ ಶುದ್ಧತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.












Click it and Unblock the Notifications