ಆರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆ: ಜೊಮೆಟೋ ಎಡವಟ್ಟು
ಹೈದರಾಬಾದ್, ಡಿಸೆಂಬರ್ 5: ಹೈದರಾಬಾದ್‌ನ ವ್ಯಕ್ತಿಯೊಬ್ಬರು ಬಾವರ್ಚಿ ಹೋಟೆಲ್‌ನಿಂದ ಜೊಮಾಟೊ ಮೂಲಕ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಜೊಮಾಟೊ ಪ್ರತಿಕ್ರಿಯೆ ನೀಡಿದೆ.
ತೆಲುಗು ಸ್ಕ್ರೈಬ್ ಟ್ವಿಟ್ಟರ್‌ನಲ್ಲಿ ವೀಡಿಯೊ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಈ ವಿಷಯವು ವೈರಲ್ ಆಗಿದೆ. ಟ್ವಿಟ್‌ನಲ್ಲಿ, "ಲೋನಿ ಬವರ್ಚಿ ಹೋಟೆಲ್ ಹೈದರಾಬಾದ್ ಆರ್‌ಟಿಸಿ ಕ್ರಾಸ್ ರೋಡ್‌ನಲ್ಲಿ ಚಿಕನ್ ಬಿರಿಯಾನಿಯಲ್ಲಿ ಹಲ್ಲಿ ಸೇರಿಸಿ ನೀಡಲಾಗಿದೆ ಎಂದು ಬರೆಯಲಾಗಿದೆ.

ಅಂಬರ್‌ಪೇಟೆಯ ಡಿಡಿ ಕಾಲೋನಿಯ ವಿಶ್ವ ಆದಿತ್ಯ ಆನ್‌ಲೈನ್‌ನಲ್ಲಿ ಜೊಮಾಟೊದಲ್ಲಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದರು. ಜೊಮಾಟೊ ಡೆಲಿವರಿ ಬಾಯ್ ತಂದಿದ್ದ ಚಿಕನ್ ಬಿರಿಯಾನಿಗೆ ಹಲ್ಲಿ ಸಿಕ್ಕಿದೆ ಎಂದು ಆರೋಪಿಸಿದ್ದಕ್ಕೆ ಬವರ್ಚಿ ಆಡಳಿತ ಮಂಡಳಿ ನಿರ್ಲಕ್ಷ್ಯದ ಉತ್ತರ ನೀಡಿದ್ದರು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಈ ಹಿಂದಿನ ನಿರ್ಲಕ್ಷ್ಯಕ್ಕೆ ರೆಸ್ಟೋರೆಂಟ್ ಅನ್ನು ಟೀಕಿಸಿ, ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳದ ಹೋಟೆಲ್‌ನವರ ವಿರುದ್ಧ ನಿರಾಶೆ ವ್ಯಕ್ತಪಡಿಸಿದರು. "ಈಗಾಗಲೇ, ಈ ಹೋಟೆಲ್ ಅನ್ನು ಆಹಾರ ನಿರೀಕ್ಷಕರು ಕೆಲವು ಬಾರಿ ನಿರ್ಬಂಧಿಸಿದ್ದಾರೆ. ಆದರೆ ಅದನ್ನು ಮತ್ತೆ ಏಕೆ ಸೇವೆ ನೀಡಲಾಗುತ್ತಿದೆ? ಇಂತಹ ಪ್ರಮಾದಗಳಿಗೆ ದಂಡದ ಮೊತ್ತವು ಸಾಕಾಗುವುದಿಲ್ಲ. ಗ್ರಾಹಕರ ಪ್ರಾಣದೊಂದಿಗೆ ಆಟವಾಡುವುದು ಸಲ್ಲದು. ಇದು ಮ್ಯಾನೇಜ್‌ಮೆಂಟ್‌ನವರ ಸಂಪೂರ್ಣ ನಿರ್ಲಕ್ಷ್ಯ." ಎಂದು ಆರೋಪಿಸಿದ್ದಾರೆ.
ಮತ್ತೊಬ್ಬರು, ಅನೇಕ ರೆಸ್ಟೋರೆಂಟ್‌ಗಳಲ್ಲಿ ನೈರ್ಮಲ್ಯದ ಕೊರತೆಇದೆ. ನಿಮ್ಮ ಜೀವಗಳನ್ನು ಉಳಿಸಲು ಹೊರಗೆ ತಿನ್ನುವುದನ್ನು ನಿಲ್ಲಿಸಿ. ಈ ರೆಸ್ಟೋರೆಂಟ್‌ಗಳಿಗೆ ಇದು ಕೇವಲ ವ್ಯವಹಾರವಾಗಿದೆ; ಅವರು ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳಿದರು. ಈ ಪೋಸ್ಟ್ ಟ್ವಿಟರ್‌ನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಪೋಸ್ಟ್ ವೈರಲ್ ಆದ ನಂತರ, ಜೊಮಾಟೊ ಕೇರ್ ಹೇಳಿಕೆಯನ್ನು ನೀಡಿದೆ. ತಾವು ಸಮಸ್ಯೆಯನ್ನು ಗುರುತಿಸಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಿದ್ದೇವೆ ಎಂದು ಭರವಸೆ ನೀಡಿದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಸೂಕ್ತ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಜೊಮೊಟೊದಲ್ಲಿ ಈ ಘಟನೆಯು ಹೊಸತಲ್ಲ. ಈ ವರ್ಷದ ಆರಂಭದಲ್ಲಿ ಮುಂಬೈನ ಪಾಪಾ ಪಾಂಚೋ ದಾ ಧಾಬಾ ಕೋಳಿ ಭಕ್ಷ್ಯದಲ್ಲಿ ಇಲಿ ಕಂಡುಬಂದಾಗ ವಿವಾದ ಉಂಟಾಗಿತ್ತು. ಜುಲೈನಲ್ಲಿ ಪಂಜಾಬ್‌ನ ಲುಧಿಯಾನದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು ವಿಶ್ವಕರ್ಮ ಚೌಕ್ ಬಳಿಯ ಲುಧಿಯಾನಾದ ಪರ್ಕಾಶ್ ಧಾಬಾದಲ್ಲಿ ಕುಟುಂಬವೊಂದಕ್ಕೆ ಚಿಕನ್ ಥಾಲಿಯಲ್ಲಿ ಇಲಿ ಪತ್ತೆಯಾಗಿತ್ತು. ಈ ಹಿಂದೆ ಗ್ರಾಹಕರು ತಮ್ಮ ಸಸ್ಯಾಹಾರಿ ಭಕ್ಷ್ಯಗಳಲ್ಲಿ ಮಾಂಸವನ್ನು ಸ್ವೀಕರಿಸುವ ಬಗ್ಗೆ ದೂರು ನೀಡಿದ ಅನೇಕ ನಿದರ್ಶನಗಳಿವೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications