• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

ಕಾಶ್ಮೀರಿಗರಿಗೆ ಭರವಸೆ ನೀಡಿ ಅಭಿವೃದ್ಧಿಯ ಕನಸು ಬಿತ್ತಿದ ಮೋದಿ

|

ನವದೆಹಲಿ, ಆಗಸ್ಟ್ 08: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಭಾಷಣ ಮಾಡಲಿದ್ದಾರೆ.

ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ ಎನ್ನಲಾಗಿತ್ತು, ನಂತರ ಸಮಯವನ್ನು ಮುಂದೂಡಿದ ಪರಿಣಾಮ ಎಂಟು ಗಂಟೆಗೆ ಮೋದಿ ಅವರು ಭಾಷಣ ಮಾಡಲಿದ್ದಾರೆ. ಇಂದು ರಾತ್ರಿ ದೂರದರ್ಶನ ಹಾಗೂ ರೇಡಿಯೋದಲ್ಲಿ ಭಾಷಣವು ನೇರ ಪ್ರಸಾರ ಆಗಲಿದೆ.

ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ

ಭಾರತ-ಪಾಕಿಸ್ತಾನದ ನಡುವೆ ಹೆಚ್ಚಾಗುತ್ತಿರುವ ಜಂಜಾಟ, ಕುಸಿಯುತ್ತಿರುವ ಆರ್ಥಿಕತೆ, ಜಮ್ಮು ಕಾಶ್ಮೀರ ಪರಿಸ್ಥಿತಿ ಇನ್ನೂ ಹಲವು ಸಮಸ್ಯೆಗಳು ಪ್ರಸ್ತುತ ದೇಶದಲ್ಲಿದ್ದು, ಮೋದಿ ಅವರು ಇಂದು ರಾತ್ರಿ ಮಾಡಲಿರುವ ಭಾಷಣ ಇವುಗಳಿಗೇ ಸಂಬಂಧಿಸಿದ್ದಾಗಿರುತ್ತದೆ ಎಂಬ ಊಹೆ ಇದೆ.

Live Updates On Pm Narendra Modi Speech Today

ಇತ್ತೀಚೆಗಷ್ಟೆ ಸಂಸತ್‌ನ ಎರಡೂ ಮನೆಯಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದು ಮಾಡುವ ವಿಧೇಯಕ ಅಂಗೀಕಾರಗೊಂಡು. ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ಕೇಂದ್ರಾಡಳಿತ ಪ್ರದೇಶ ಮಾಡಲಾಗಿದೆ. ಹಾಗಾಗಿ ಈ ವಿಷಯದ ಬಗ್ಗೆಯೇ ಮೋದಿ ಅವರ ಇಂದಿನ ಭಾಷಣ ಇರಲಿದೆ ಎಂಬ ನಿರೀಕ್ಷೆಯೂ ಇದೆ.

Newest First Oldest First
8:40 PM, 8 Aug
ಜಮ್ಮು ಕಾಶ್ಮೀರ, ಲಡಾಕ್‌ ಜನರು ನಿಮ್ಮ ಸಾಮರ್ಥ್ಯ ಎಷ್ಟಿದೆಯೆಂದು ಇಡೀಯ ಜಗತ್ತಿಗೆ ತೋರಿಸಿ, ನಾವೆಲ್ಲರೂ ಒಟ್ಟಿಗೆ ಸೇರಿ ಹೊಸ ಭಾರತದ ಜೊತೆ, ಹೊಸ ಜಮ್ಮು ಕಾಶ್ಮೀರ, ಹೊಸ ಲಡಾಕ್‌ ನಿರ್ಮಾಣ ಮಾಡುವ ಪಣ ತೊಡೋಣ ಎಂದು ಹೇಳಿದ ಮೋದಿ ಧನ್ಯವಾದಗಳೊಂದಿಗೆ ಮಾತು ಮುಗಿಸಿದ್ದಾರೆ.
8:38 PM, 8 Aug
ಭಯೋತ್ಪಾದರಿಂದಾಗಿ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಪೊಲೀಸರು, ಸೈನಿಕರು, ಸಾರ್ವಜನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇವರೆಲ್ಲ ಕನಸನ್ನು ನಾವು ಒಟ್ಟಾಗಿ ನಿಜ ಮಾಡಬೇಕಿದೆ, ಜಮ್ಮು ಕಾಶ್ಮೀರವು ಭಾರತದ ಇತರ ರಾಜ್ಯಗಳಂತೆ ದೇಶದ ಅಭಿವೃದ್ಧಿಯಲ್ಲಿ ಭಾಗಿದಾರಿಯಾಗುತ್ತದೆ- ಮೋದಿ
8:37 PM, 8 Aug
ಜಮ್ಮು ಕಾಶ್ಮೀರ ದೇಶದ ಮುಕುಟ, ಇದರ ರಕ್ಷಣೆಗೆ ಹಲವು ವೀರರು ಪ್ರಾಣ ತ್ಯಾಗ ಮಾಡಿದ್ದಾರೆ. ಮೌಲ್ವಿ ಗುಲಾಂ ಬೀನ್ ಅವರು 1947 ರಲ್ಲಿ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಸೇನೆಗೆ ಮಾಹಿತಿ ನೀಡಿದ್ದರು. ಅವರಿಗೆ ಅಶೋಕ ಚಕ್ರ ನೀಡಲಾಗಿತ್ತು ಎಂದ ಮೋದಿ ಜಮ್ಮು ಕಾಶ್ಮೀರದ ಹಲವು ವೀರರ ಪ್ರಶಂಸೆ ಮಾಡಿದರು.
8:35 PM, 8 Aug
ಕಣಿವೆ ರಾಜ್ಯದಲ್ಲಿ ಪರಿಸ್ಥಿತಿಗಳು ದಿನೇ-ದಿನೇ ಸರಿ ಹೋಗುತ್ತಿವೆ. ಈದ್ ಹಬ್ಬ ಹತ್ತಿರವಿದೆ. ಈದ್ ಆಚರಿಸಲು ಅವರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಹೊರಗಿರುವ ಕಾಶ್ಮೀರದ ಜನರು ಹಬ್ಬಕ್ಕೆ ಮನೆಗೆ ತೆರಳಲು ಸರ್ಕಾರ ಸಹಾಯ ಮಾಡುತ್ತಿದೆ- ಮೋದಿ
8:34 PM, 8 Aug
ಆತಂಕವಾದಕ್ಕೆ ಬೆಂಬಲ ನೀಡುವ ಪಾಕಿಸ್ತಾನದ ಕುತಂತ್ರಕ್ಕೆ ಕಣಿವೆ ರಾಜ್ಯದ ಜನರು ದಿಟ್ಟ ಉತ್ತರ ನೀಡುತ್ತಿದ್ದಾರೆ. ದೇಶದ ಉಳಿದ ರಾಜ್ಯಗಳಂತೆ ಅವರಿಗೆ ಸ್ವತಂತ್ರ್ಯವಾಗಿ ಅಭಿವೃದ್ಧಿ ಪೂರ್ವಕವಾಗಿ ಬದುಕುವ ಹಕ್ಕು ಅವರಿಗೆ ಇದೆ - ಮೋದಿ
8:32 PM, 8 Aug
ಸಂಸತ್ತಿನಲ್ಲಿ ಆರ್ಟಿಕಲ್ 370 ಕುರಿತು ಯಾರು ಹೇಗೆ ಮತ ಹಾಕಿದರು, ಯಾರು ಹಾಕಲಿಲ್ಲ, ಇದನ್ನೆಲ್ಲಾ ಬಿಟ್ಟು ಮುಂದೆ ಹೋಗಬೇಕಿದೆ. ಜಮ್ಮು ಕಾಶ್ಮೀರದ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ- ಮೋದಿ
8:30 PM, 8 Aug
ಲಡಾಕ್‌ ಅತ್ಯುತ್ತಮ ಪ್ರವಾಸಿ ಕೇಂದ್ರವಾಗುತ್ತದೆ. ಲಡಾಖ್‌ ಆಧ್ಯಾತ್ಮಿಕ ಪ್ರವಾಸಿಕೇಂದ್ರ, ಸೋಲಾರ್ ಪ್ರವಾಸಿ ಕೇಂದ್ರ, ಸಾಹಸಿ ಪ್ರವಾಸಕ್ಕೆ ಅತ್ಯುತ್ತಮ ಕೇಂದ್ರವಾಗಿದೆ- ಮೋದಿ
8:29 PM, 8 Aug
ಜಮ್ಮು ಕಾಶ್ಮೀರದಲ್ಲಿ ಸೋಲೊ ಎಂಬ ಗಿಡ ಇದೆ. ಅದು ಕಡಿಮೆ ಆಮ್ಲಜನಕದಲ್ಲಿ ಬದುಕುತ್ತದೆ. ಇದು ಸೇನೆಯಲ್ಲಿರುವವರಿಗೆ, ಕಣಿವೆ ಪ್ರದೇಶದಲ್ಲಿ ವಾಸಿಸುವವರಿಗೆ ಇದು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಇಂತಹಾ ಎಷ್ಟೋ ಅಮೂಲ್ಯಸಸ್ಯಗಳು ಕಣಿವೆಯಲ್ಲಿವೆ ಇವು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗಬೇಕಿದೆ- ಮೋದಿ
8:27 PM, 8 Aug
ಜಮ್ಮು ಕಾಶ್ಮೀರದ ಯುವಕರಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಸರ್ಕಾರ ಬದ್ಧವಾಗಿದ್ದು, ಅಲ್ಲಿ ಹೆಚ್ಚಿನ ಕ್ರೀಡಾ ತರಬೇತಿ ಕೇಂದ್ರಗಳು ಸ್ಥಾಪನೆ ಆಗಲಿದೆ- ಮೋದಿ
8:25 PM, 8 Aug
ಒಂದೊಮ್ಮೆ ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಕಾಶ್ಮೀರ ಮೆಚ್ಚಿನ ಸ್ಥಳವಾಗಿತ್ತು ಆದರೆ ನಂತರ ಪರಿಸ್ಥಿತಿ ಬದಲಾಗಿತ್ತು. ಇನ್ನು ಮುಂದೆ ವಿಶ್ವದ ಸಿನಿಮಾ ತಂತ್ರಜ್ಞರು ಜಮ್ಮು ಕಾಶ್ಮೀರಕ್ಕೆ ಬರುತ್ತಾರೆ. ಅದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ. ಬಾಲಿವುಡ್, ತೆಲುಗು, ತಮಿಳು ಸಿನಿಮಾ ಉದ್ಯಮದವರು ಕಾಶ್ಮೀರಕ್ಕೆ ಬರಲೆಂದು ನಾನು ಮನವಿ ಮಾಡುತ್ತೇನೆ- ಮೋದಿ
8:23 PM, 8 Aug
ದಶಕಗಳ ಪರಿವಾರ ರಾಜಕಾರಣ ಜಮ್ಮು ಕಾಶ್ಮೀರದ ಯುವಕರಿಗೆ ನಾಯಕತ್ವದ ಅವಕಾಶವನ್ನೇ ಕೊಟ್ಟಿಲ್ಲ, ಆದರೆ ಈಗ ಅಲ್ಲಿನ ಯುವಕರು ನೇತೃತ್ವವನ್ನು ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಣಿವೆ ರಾಜ್ಯದ ಮುಂದಾಳತ್ವವನ್ನು ಅವರೇ ವಹಿಸಿಕೊಳ್ಳುತ್ತಾರೆ- ಮೋದಿ
8:22 PM, 8 Aug
ಆರ್ಟಿಕಲ್ 370 ರದ್ದಾದ ಬಳಿಕ ಪಂಚಾಯತಿ ಜನಪ್ರತಿನಿಧಿಗಳು ಇನ್ನೂ ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಹೊಸ ವಿಶ್ವಾಸದೊಂದಿಗೆ, ಉತ್ಸಾಹದೊಂದಿಗೆ ಕಣಿವೆ ರಾಜ್ಯದ ಜನ ಮುಂದುವರೆಯುತ್ತಾರೆ ಎಂಬ ವಿಶ್ವಾಸ ನನಗೆ ಇದೆ- ಮೋದಿ
8:21 PM, 8 Aug
ಜಮ್ಮು ಕಾಶ್ಮೀರ, ಲಡಾಕ್ ಪಂಚಾಯಿತಿ ಚುನಾವಣೆಗಳಲ್ಲಿ ಆಯ್ಕೆ ಆಗಿ ಬಂದಿರುವ ಜನಪ್ರತಿನಿಧಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಅವರೊಂದಿಗೆ ಕೆಲ ತಿಂಗಳ ಮುಂಚೆಯಷ್ಟೆ ನಾನು ಮಾತುಕತೆ ಮಾಡಿದ್ದೇನೆ - ಮೋದಿ
8:20 PM, 8 Aug
ಪೂರ್ಣ ಪಾರದರ್ಶಕ ವ್ಯವಸ್ಥೆಯಲ್ಲಿ ಕೆಲವೇ ದಿನಗಳಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಜಮ್ಮು ಕಾಶ್ಮೀರದ ಜನರಿಗೆ ಮೋದಿ ಭರವಸೆ.
8:19 PM, 8 Aug
ಜಮ್ಮು ಕಾಶ್ಮೀರವು ಪೂರ್ತಿ ವಿಶ್ವವನ್ನು ಆಕರ್ಷಿತಗೊಳಿಸುವಂತೆ ಆಗುತ್ತದೆ. ಜನರ ಜೀವನ ಸುಲಭವಾಗುತ್ತದೆ. ಲಡಾಕ್‌ ಅನ್ನು ಕೇಂದ್ರಾಡಳಿತ ಪ್ರದೇಶ ಹಾಗೆಯೇ ಇರುತ್ತದೆ. ಆದರೆ ಜಮ್ಮು ಕಾಶ್ಮೀರ ಮತ್ತೆ ರಾಜ್ಯವಾಗುತ್ತದೆ - ಮೋದಿ
8:18 PM, 8 Aug
ಜಮ್ಮು ಕಾಶ್ಮೀರದ ಜನಪ್ರತಿನಿಧಿಯನ್ನು ಅಲ್ಲಿನ ಜನರೇ ಚುನಾಯಿಸುತ್ತಾರೆ. ಹೇಗೆ ಮುಂಚೆ ವಿಧಾನಮಂಡಲ ಇತ್ತೋ ಹಾಗೆಯೇ ಮುಂದೆಯೂ ಇರುತ್ತದೆ, ಆದರೆ ಕೆಟ್ಟ ಆಡಳಿತದಿಂದ ಜಮ್ಮು ಕಾಶ್ಮೀರದ ಜನರನ್ನು ಮುಕ್ತಗೊಳಿಸುತ್ತೇವೆ- ಮೋದಿ
8:17 PM, 8 Aug
ಪಂಚಾಯಿತಿ, ನಗರ ಸಭೆ, ಪುರಸಭೆ ಇನ್ನಾವುದೇ ಚುನಾವಣೆಯಲ್ಲಿ ಜಮ್ಮು ಕಾಶ್ಮೀರದ ಮತ ಹಾಕುವಂತಿರಲಿಲ್ಲ, ಈ ಅನ್ಯಾಯವನ್ನು ನಾವು ಕೊನೆಗಾಣಿಸಿದ್ದೇವೆ - ಮೋದಿ
8:16 PM, 8 Aug
ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಪ್ರಾರಂಭವಾದಾಗಿನಿಂದಲೂ ಅಲ್ಲಿ ಒಳ್ಳೆಯ ಆಡಳಿತ ಕಂಡುಬಂದಿದೆ. ಯಾವ ಕಾರ್ಯಕ್ರಮ ಕೇವಲ ಕಾಗದದಲ್ಲಿತ್ತೊ ಅದು ಕಾರ್ಯಗತವಾಗಿತ್ತು- ಮೋದಿ
8:16 PM, 8 Aug
ರಾಜಸ್ವದ ಕೊರತೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿದೆ, ಆದರೆ ಕೇಂದ್ರವು ಅದನ್ನು ನಿವಾರಿಸುತ್ತದೆ. ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿ ಪ್ರದೇಶವನ್ನಾಗಿ ಮಾಡುವ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳಲಾಗಿದೆ- ಮೋದಿ
8:15 PM, 8 Aug
ಜಮ್ಮು ಕಾಶ್ಮೀರದ ಯುವಕರಿಗೆ ಉದ್ಯೋಗ ಕೊಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸ್ಕಾಲರ್‌ಶಿಪ್ ಯೋಜನೆ ನೀಡಲಾಗುತ್ತದೆ- ಮೋದಿ
8:12 PM, 8 Aug
ಬೇರೆ ಕೇಂದ್ರಾಡಳಿತದಲ್ಲಿ ಪೊಲೀಸರಿಗೆ ಅವರ ಕುಟುಂಬಕ್ಕೆ ಏನು ಸೌಲಭ್ಯಗಳು ದೊರೆಯುತ್ತವೆಯೋ ಅವನ್ನು ಜಮ್ಮು ಕಾಶ್ಮೀರದ ಪೊಲೀಸರಿಗೆ ಅವರ ಕುಟುಂಬಗಳಿಗೆ ನೀಡಲಾಗುತ್ತದೆ- ಮೋದಿ
8:11 PM, 8 Aug
ಬದಲಾದ ಸನ್ನಿವೇಶದಲ್ಲಿ, ಬೇರೆ ಕೇಂದ್ರಾಡಳಿತ ಪ್ರದೇಶದಲ್ಲಿ ಏನೇನು ಸವಲತ್ತುಗಳು ಇವೆಯೋ ಅವೆಲ್ಲವೂ ಜಮ್ಮು ಕಾಶ್ಮೀರಕ್ಕೆ ನೀಡಲಾಗುತ್ತದೆ - ಮೋದಿ
8:10 PM, 8 Aug
ಎಲ್ಲರಿಗೂ ಶಿಕ್ಷಣದ ಹಕ್ಕು ಇದೆ, ಆದರೆ ಜಮ್ಮು ಕಾಶ್ಮೀರದಲ್ಲಿ ಇಲ್ಲ, ಕಾಶ್ಮೀರದ ಹೆಣ್ಣುಮಕ್ಕಳಿಗೆ ಹಕ್ಕು ಇರಲಿಲ್ಲ, ದೇಶದ ಬೇರೆ ರಾಜ್ಯಗಳಲ್ಲಿ ದಲಿತರ ರಕ್ಷಣೆಗೆ ಕಾನೂನು ಇದೆ, ಆದರೆ ಜಮ್ಮು ಕಾಶ್ಮೀರದಲ್ಲಿ ಇರಲಿಲ್ಲ, ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಇತ್ತು ಆದರೆ ಕಾಶ್ಮೀರದಲ್ಲಿ ಇರಲಿಲ್ಲ, ಬೇರೆ ರಾಜ್ಯಗಳಲ್ಲಿ ಕಾರ್ಮಿಕರ ರಕ್ಷಣೆಗೆ ಕಾನೂನು ಇತ್ತು ಆದರೆ ಜಮ್ಮು ಕಾಶ್ಮೀರದಲ್ಲಿ ಅದಿರಲಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲು ದಲಿತರಿಗೆ ಮೀಸಲಾತಿ ಇತ್ತು, ಆದರೆ ಜಮ್ಮು ಕಾಶ್ಮೀರದಲ್ಲಿ ಅದಿರಲಿಲ್ಲ- ಮೋದಿ
8:05 PM, 8 Aug
ಆರ್ಟಿಕಲ್ 370 ಕಣಿವೆ ರಾಜ್ಯದ ಜನರಿಗೆ ಭ್ರಷ್ಟಾಚಾರ ಬಿಟ್ಟರೆ ಇನ್ನೇನೂ ಕೊಡಲಿಲ್ಲ. ಈ ಕಾಯ್ದೆಯನ್ನು ಪಾಕಿಸ್ತಾನವು ತನ್ನ ಪರವಾಗಿ ಬಳಸಿಕೊಂಡಿತು. 40,000 ಜನರು ಕೆಲವೇ ವರ್ಷಗಳಲ್ಲಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು- ಮೋದಿ
8:03 PM, 8 Aug
ಕೆಲವು ಬದಲಾವಣೆ ಆಗುವುದಿಲ್ಲೇ ಎಂಬ ಭಾವ ಕೆಲವೊಮ್ಮೆ ಬಂದುಬಿಟ್ಟಿರುತ್ತದೆ, ಆರ್ಟಿಕಲ್ 370 ಬಗ್ಗೆ ಅದೇ ಧೊರಣೆ ಇತ್ತು. ಕಣಿವೆ ರಾಜ್ಯದ ಜನರ ಹಕ್ಕು, ಸ್ವಾತಂತ್ರ್ಯದ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ- ಮೋದಿ
8:02 PM, 8 Aug
ಜಮ್ಮು ಕಾಶ್ಮೀರ, ಲಡಾಕ್, ಎಲ್ಲ ದೇಶದ ಜನರಿಗೆ ಹೃದಯ ಪೂರ್ವಕ ಅಭಿನಂದನೆ ಹೇಳುತ್ತೇನೆ- ಮೋದಿ
8:02 PM, 8 Aug
ವಲ್ಲಭಾಯಿ ಪಟೇಲ್, ಅಂಬೇಡ್ಕರ್, ಶ್ಯಾಂ ಪ್ರಸಾದ್ ಮುಖರ್ಜಿ, ವಾಜಪೇಯಿ ಅವರ ಕನಸು ನನಸಾಗಿದೆ-ಮೋದಿ
7:58 PM, 8 Aug
ಕೆಲಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
6:05 PM, 8 Aug
ಜಮ್ಮು ಕಾಶ್ಮೀರ, ಲಡಾಕ್‌ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರಿ ಅನುದಾನ ಅಥವಾ ಯೋಜನೆಗಳನ್ನು ಇಂದು ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಘೊಷಿಸಲಿದ್ದಾರೆ ಎಂಬ ಅಂದಾಜು ಇದೆ. ರಾತ್ರಿ ಎಂಟು ಗಂಟೆಗೆ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

English summary
PM Narendra Modi to address nation at 8 pm today. Check out the latest updates on Modi speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X