• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೀಮನನ್ನು ಬದುಕಿಸಲು ನಿಮ್ಮಿಂದ ಮಾತ್ರ ಸಾಧ್ಯ, ಉದಾರವಾಗಿ ದೇಣಿಗೆ ನೀಡಿ

|

"ಮೊದಮೊದಲು ನಮ್ಮ ಮಗುವಿನ ಸಮಸ್ಯೆಯನ್ನು ಗಮನಿಸಿರಲಿಲ್ಲ. ದಿನ ಕಳೆದಂತೆ ಅವನ ದೇಹದ ಮೇಲೆ ಕೆಂಪು ಬೊಬ್ಬೆಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು. ಆಗ ಅದನ್ನು ನಾವು ಗಂಭೀರವಾಗಿ ಪರಿಗಣಿಸಿದೆವು." -ಹೀಗೆ ತಮ್ಮ ಕಂದನ ಸಮಸ್ಯೆಯನ್ನು ತೆರೆದಿಡುತ್ತಾರೆ ನಿಮ್ಮ ನೆರವಿಗೆ ಎದುರು ನೋಡುತ್ತಿರುವ ಆ ಮಗುವಿನ ಪೋಷಕರು.

ಟಿ.ತಿಪ್ಪಣ್ಣ ಅವರದ್ದು ಪುಟ್ಟ ಸಂಸಾರ. ತೆಲಂಗಾಣದ ಮೆಹಬೂಬ್ ನಗರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಕೃಷಿ ಕೂಲಿ ಕಾರ್ಮಿಕರು. ದಿನದ ಕೂಲಿಯ ಆದಾಯದಲ್ಲಿ ಮೂವರನ್ನು ಒಳಗೊಂಡಿದ್ದ ಸಂಸಾರ ಸಾಗುತ್ತಿತ್ತು. ಎರಡು ವರ್ಷದ ತಮ್ಮ ಮಗನ ಓಡಾಟ, ತುಂಟ ನಗು ಹಾಗೂ ಉತ್ಸಾಹದಿಂದ ಆತ ಕುಣಿಯುತ್ತಿದ್ದದ್ದನ್ನು ನೋಡಿ ದಂಪತಿ ಸಂತೋಷ ಪಡುತ್ತಿದ್ದರು.

Little Bhima Bravely Fights Multiple Organ Failure

ಒಂದು ದಿನ ಇವರ ಮುದ್ದು ಕಂದ ಭೀಮ ಒಮ್ಮೆಲೇ ವಾಂತಿ ಮಾಡಲು ಪ್ರಾರಂಭಿಸಿದ. ಅವನ ಊಟ-ತಿಂಡಿಯಲ್ಲಿ ಏನಾದರೂ ವ್ಯತ್ಯಾಸವಾಯಿತಾ ಎಂದು ಆ ದಿನವಿಡೀ ಪರಿಶೀಲನೆ ನಡೆಸಿದರು. ಆದರೆ ಯಾವುದೇ ತೊಂದರೆ ಕಂಡು ಬರಲಿಲ್ಲ. ವಾಂತಿಯಿಂದ ಪ್ರಾರಂಭವಾದ ಭೀಮನ ಆರೋಗ್ಯ ಸಮಸ್ಯೆಯು ಜ್ವರದ ಮೂಲಕ ಹಾಸಿಗೆ ಹಿಡಿಯುವಂತೆ ಮಾಡಿತು.

ಮುಖ ಹಾಗೂ ಮೈಮೇಲೆ ಕೆಂಪು ಬೊಬ್ಬೆಗಳು ಕಾಣಿಸಿಕೊಂಡವು. ಅವನ ಆರೋಗ್ಯದ ಸ್ಥಿತಿಯು ಒಂದು ದೊಡ್ಡ ಸಮಸ್ಯೆಯಾಯಿತು. ಅಲ್ಲದೆ ಭೀಮನು ಆಹಾರ ಸೇವಿಸುವುದನ್ನು ನಿಲ್ಲಿಸಿದ. ಅವನಿಗೆ ತುಂಬ ಇಷ್ಟವಾದ ಲಡ್ಡುಗಳು ಸಹ ಬೇಡವಾಯಿತು.

Little Bhima Bravely Fights Multiple Organ Failure

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಭೀಮನನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದೊಯ್ದರು. ಆದರೆ ಕೆಲವು ವೈದ್ಯರು ತಜ್ಞರನ್ನು ಭೇಟಿಯಾಗಲು ಸಲಹೆ ನೀಡುತ್ತಿದ್ದರು. ಅಂತಿಮವಾಗಿ ಪಾಲಕರು ಮಗನನ್ನು ಲಿಟ್ಲ್ ಸ್ಟಾರ್ಸ್ ಚಿಲ್ಡ್ರನ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವರು ಡೆಂಗ್ಯೂ ಹೆಮೊರೊಜಿಕ್ ಸಿಂಡ್ರೋಮ್ ಎಂದು ಗುರುತಿಸಿದರು.

ಅವನ ದೇಹದಲ್ಲಿ ನಿಧಾನವಾಗಿ ಒಂದೊಂದೇ ಅಂಗ ವೈಫಲ್ಯವಾಗುತ್ತಾ ಬರುತ್ತಿದೆ ಎಂದು ಹೇಳಿದರು. ಅವನ ಯಕೃತ್ ಈಗಾಗಲೇ ವಿಫಲಗೊಂಡಿದೆ. ಹೃದಯವು ಸೂಕ್ತ ರೀತಿಯ ಕಾರ್ಯ ನಿರ್ವಹಣೆಗೆ ಕಷ್ಟಪಡುತ್ತಿದೆ ಎಂದರು.

Little Bhima Bravely Fights Multiple Organ Failure

ಮಗನ ಆರೋಗ್ಯ ಚೇತರಿಕೆಗಾಗಿ ಈಗಾಗಲೇ ಸಂಬಂಧಿಕರಿಂದ ಪಡೆದ ಹಾಗೂ ತಮ್ಮ ಉಳಿತಾಯದ ಹಣವಾದ 3 ಲಕ್ಷ ರುಪಾಯಿಯನ್ನು ವ್ಯಯಿಸಿದ್ದಾರೆ. ಭೀಮನ ಉಸಿರಾಟಕ್ಕೆ ಅನುಕೂಲವಾಗಲು ಪಿಐಸಿಯು ಅಲ್ಲಿ ಇರಿಸಲಾಗಿದೆ. ಇವನ ಹೆಚ್ಚುವರಿ ಚಿಕಿತ್ಸೆಗಾಗಿ 10 ಲಕ್ಷ ರುಪಾಯಿ ಬೇಕಾಗಿದೆ.

ಇಲ್ಲಿ ಕ್ಲಿಕ್ ಮಾಡಿ ಹಾಗೂ ಭೀಮ ಶಂಕರ್‌ಗೆ ಸಹಾಯ ಮಾಡಲು ಇಚ್ಛಿಸುವಿರಾದರೆ ಇಲ್ಲಿದೆ ನೋಡಿ ಬ್ಯಾಂಕ್ ಡಿಟೇಲ್ಸ್

ಆರ್ಥಿಕವಾಗಿ ದುರ್ಬಲವಾದ ತಿಪ್ಪಣ್ಣನ ಸಂಸಾರ ಮಗನ ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸಲು ಕಷ್ಟಪಡುತ್ತಿದೆ. ಜೊತೆಗೆ ತಮ್ಮ ಮಗನನ್ನು ಉಳಿಸಿಕೊಳ್ಳಲು ಸಹಾಯ ಮಾಡುವಂತೆ ಜನರಲ್ಲಿ ಸಹಾಯ ಹಸ್ತ ಯಾಚಿಸಿದೆ.

Little Bhima Bravely Fights Multiple Organ Failure

ಭೀಮ ತನ್ನ ಶಕ್ತಿಯನ್ನು ಪುನಃ ಪಡೆದುಕೊಳ್ಳಬೇಕು ಎಂದಾದರೆ ಎಲ್ಲಾ ಬಗೆಯ ಚಿಕಿತ್ಸೆಯ ಅಗತ್ಯವಿದೆ. ಅವನ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲು ನಿಮ್ಮ ಸಣ್ಣ ಸಹಾಯದ ಅಗತ್ಯವಿದೆ. ನೀವು ಮಾಡುವ ಸಣ್ಣ ಸಹಾಯದಿಂದ ಒಂದು ಪುಟ್ಟ ಜೀವವು ಉಳಿದುಕೊಳ್ಳುತ್ತದೆ. ಆಸಕ್ತ ದಾನಿಗಳು ಸಹಾಯ ನಿಧಿಗೆ ಹಣವನ್ನು ನೀಡಬಹುದು. ಇದರಿಂದ ಒಂದು ಮುಗ್ಧ ಜೀವ ಉಳಿಸಿದ ಪುಣ್ಯ ನಿಮ್ಮದಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Little Bhima's body is slowly giving up as his organs are shutting down one by one. The family has already borrowed Rs. 3 Lakhs from their relatives and their savings have depleted months ago. Bhima is currently in the PICU. The family needs Rs. 10 Lakh to continue this treatment which is the only thing keeping him alive right now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more