ಏಪ್ರಿಲ್ 1ರಿಂದ ದುಬಾರಿ ಮತ್ತು ಅಗ್ಗವಾಗಲಿರುವ ವಸ್ತುಗಳ ಪಟ್ಟಿ, ವಿವರ ಇಲ್ಲಿದೆ ತಿಳಿಯಿರಿ
ನವದೆಹಲಿ, ಮಾರ್ಚ್, 28: ದೇಶೀಯ ಉದ್ಯಮವನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ಆಮದು ಸುಂಕಗಳನ್ನು ಹೆಚ್ಚಿಸಲು ಯೋಜಿಸುತ್ತಿದ್ದು, ಏಪ್ರಿಲ್ 1ರಿಂದ ಕೆಲವು ವಸ್ತುಗಳ ದರ ದುಬಾರಿಯಾಗಲಿದೆ. ಹಾಗಾದರೆ ಯಾವೆಲ್ಲ ವಸ್ತುಗಳ ಬೆಲೆ ದುಬಾರಿಯಾಗಲಿದೆ ಮತ್ತು ದರ ಕಡಿವೆಯಾಗುವ ವಸ್ತುಗಳ ವಿವರವನ್ನು ಇಲ್ಲಿ ತಿಳಿಯಿರಿ.
ಖಾಸಗಿ ವಿಮಾನಗಳು, ಹೆಲಿಕಾಪ್ಟರ್‌ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್, ಪ್ಲಾಸ್ಟಿಕ್ ವಸ್ತುಗಳು, ಆಭರಣಗಳು, ಹೈ-ಗ್ಲಾಸ್ ಪೇಪರ್ ಮತ್ತು ವಿಟಮಿನ್‌ಗಳ ದರವು ಏರಿಕೆಯಾಗಲಿದ್ದು, ಈ ನಿಯಮ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 1ರಿಂದಲೇ ಜಾರಿ
ಏಪ್ರಿಲ್ 1 ರಿಂದ ಕ್ಯಾಮೆರಾ ಲೆನ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳಂತಹ ವಸ್ತುಗಳು ದರವು ಕಡಿಮೆಯಾಗಲಿದೆ. ಮತ್ತೊಂದೆಡೆ ಎಲೆಕ್ಟ್ರಿಕ್ ಕಿಚನ್ ಚಿಮಣಿಗಳು ಮತ್ತು ಚಿನ್ನ, ಪ್ಲಾಟಿನಂ ವಸ್ತುಗಳ ಬೆಲೆಯಲ್ಲಿ ದರ ಏರಿಕೆಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ರ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಘೋಷಿಸಿದ್ದರು.
ಬಜೆಟ್ ಮಂಡನೆಯಲ್ಲಿ ಬಟ್ಟೆ, ಮಸ್ಸೆಲ್ಸ್, ಕೋಕೋ ಬೀನ್ಸ್ ಮೇಲಿನ ಕಸ್ಟಮ್ಸ್ ತೆರಿಗೆಯನ್ನು ಕಡಿಮೆ ಮಾಡಲು ಕೇಂದ್ರ ನಿರ್ಧಾರ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರವು ಅಸಿಟಿಕ್ ಆಮ್ಲ, ಕತ್ತರಿಸಿ ಪಾಲಿಶ್ ಮಾಡಿದ ವಜ್ರಗಳು, ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳು ಮತ್ತು ಸೆಲ್ ಫೋನ್‌ಗಳಿಗೆ ಕ್ಯಾಮೆರಾ ಲೆನ್ಸ್‌ಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡಿದೆ.
ಹೆಚ್ಚುವರಿಯಾಗಿ ಕೇಂದ್ರವು ಇತ್ತೀಚಿನ ಬಜೆಟ್‌ನಲ್ಲಿ ಹಲವಾರು ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಇದು ಬಜೆಟ್ ಜವಾಬ್ದಾರಿಯ ಬಗ್ಗೆ ತಿಳಿಸುವಾಗ ದೀರ್ಘಕಾಲಿಕ ಬೆಳವಣಿಗೆಯ ಕಾರ್ಯತಂತ್ರವನ್ನು ರೂಪಿಸುವ ಸರ್ಕಾರದ ಉದ್ದೇಶದೊಂದಿಗೆ ಸ್ಥಿರವಾಗಿದೆ.
ಇನ್ನು ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 7.5% ರಿಂದ 15%ಕ್ಕೆ ಏರಿಸಲಾಗಿದೆ ಎಂದು ಎಫ.ಎಂ.ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ದುಬಾರಿಯಾಗಲಿರುವ ವಸ್ತುಗಳು
1. ಮನೆಯಲ್ಲಿನ ಎಲೆಕ್ಟ್ರಾನಿಕ್ ಚಿಮಣಿಗಳು
2. ಆಭರಣ
3. ಆಮದು ಮಾಡಿಕೊಳ್ಳುವ ಸರಕುಗಳು
4. ಸಿಗರೇಟ್
5. ಚಿನ್ನ
6. ಪ್ಲಾಟಿನಂ
7. ಬೆಳ್ಳಿ ಪಾತ್ರೆಗಳು
ಅಗ್ಗವಾಗಲಿರುವ ವಸ್ತುಗಳ ಪಟ್ಟಿ
1. ಆಟಿಕೆಗಳು
2. ಬೈಸಿಕಲ್‌ಗಳು
3. ಟಿ.ವಿ
4. ಮೊಬೈಲ್‌ಗಳು
5. ಎಲೆಕ್ಟ್ರಿಕ್ ವಾಹನಗಳು
6. ಎಲ್ಇಡಿ ಟಿವಿ
8. ಕ್ಯಾಮೆರಾ ಲೆನ್ಸ್‌ಗಳು
ಇತ್ತೀಚೆಗಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಮುಂದಿನ ವರ್ಷದ ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಆಗುತ್ತದೆ. ಆದರೂ, ಅದೇ ವರ್ಷ ಮೇ ತಿಂಗಳಿನಲ್ಲಿ ಚುನಾವಣೆ ಬರುವ ಹಿನ್ನೆಲೆಯಲ್ಲಿ ಇದೀಗ ಮಂಡಿಸಲಾಗಿರುವ ಬಜೆಟ್ ಭಾರಿ ಪ್ರಾಮುಖ್ಯತೆ ಪಡೆದಿದೆ. ಹಾಗಾದರೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿರುವ ಪ್ರಮುಖಾಂಶಗಳನ್ನು ಇಲ್ಲಿ ತಿಳಿಯಿರಿ.
1. ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ
2. ಆದಾಯ ತೆರಿಗೆ ವಿನಾಯಿತಿ ಮಿತಿ 5ರಿಂದ 7 ಲಕ್ಷ ರೂಪಾಯಿಗಳಿಗೆ ಏರಿಕೆ
3. ರಾಗಿ, ಜೋಳ ಸೇರಿದಂತೆ ಸಿರಿ ಧಾನ್ಯಗಳ ಕೃಷಿ ಉತ್ತೇಜನಕ್ಕೆ ಹೊಸ ಯೋಜನೆ
4. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂಪಾಯಿ ಮೀಸಲು
5. ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್ ಯೋಜನೆ
6. ಗೋಬರ್ದನ್ ಯೋಜನೆಯಡಿ ದೇಶಾದ್ಯಂತ 200 ಬಯೋ ಗ್ಯಾಸ್ ಘಟಕಗಳ ನಿರ್ಮಾಣ
7. ಮೊಬೈಲ್ ಫೋನ್ ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದು
8. ಮೊಬೈಲ್ ಫೋನ್‌ಗಳ ದರ ಇಳಿಕೆ
9. ಲೀಥಿಯಂ ಅಯಾನ್ ಬ್ಯಾಟರಿಗಳು ಅಗ್ಗ, ಕಸ್ಟಮ್ ಡ್ಯೂಟಿ ಶೇ. 13ರಷ್ಟು ಇಳಿಕೆ
10. ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆ
11. ಬ್ಲೆಂಡೆಡ್ ಸಿಎನ್‌ಜಿಗೆ ಸುಂಕ ಕಡಿತ
12. ಪ್ಲಾಟಿನಂ, ಬಂಗಾರ, ಬೆಳ್ಳಿ, ವಜ್ರ ದುಬಾರಿ
13. ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ದರ ಇಳಿಕೆ
14. ಸಿಗರೇಟ್ ಮೇಲಿನ ತೆರಿಗೆ ಏರಿಕೆ
15. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ ಮೀಸಲು
16. ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂಪಾಯಿ ಅನುದಾನ ನಿಗದಿ
17. ದೇಶದಲ್ಲಿ 50 ಹೊಸ ಏರ್‌ಪೋರ್ಟ್‌ಗಳ ನಿರ್ಮಾಣ
18. ನಗರೋತ್ಥಾನಕ್ಕಾಗಿ 10 ಸಾವಿರ ಕೋಟಿ ರೂಪಾಯಿ ಮೀಸಲು
19. ದೇಶಾದ್ಯಂತ 157 ನೂತನ ನರ್ಸಿಂಗ್ ಕಾಲೇಜುಗಳ ಸ್ಥಾಪನೆ
20. 2047ರೊಳಗೆ ಮ್ಯಾನ್‌ಹೋಲ್ ಮುಕ್ತ ಚರಂಡಿ ವ್ಯವಸ್ಥೆ
21. ರಾಜ್ಯ ಸರ್ಕಾರಗಳಿಗೆ ನೀಡುವ 50 ವರ್ಷಗಳ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ
22. 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ
23. ಹಳೆಯ ಸರ್ಕಾರಿ ವಾಹನಗಳು ಗುಜರಿ ಪಾಲು, ಹೊಸ ವಾಹನಗಳ ಖರೀದಿಗೆ ಅನುದಾನ
24. ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್ ಸ್ಪರ್ಶ, ಸ್ವದೇಶ ದರ್ಶನ್, ದೇಖೋ ಅಪ್ನಾ ದೇಶ್ ಯೋಜನೆ
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications