• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಡೀಲ್ - ರಾಹುಲ್ ಹೇಳಿದ 10 ಸುಳ್ಳುಗಳು : ತಿರುಗಿಬಿದ್ದ ಬಿಜೆಪಿ

|

ನವದೆಹಲಿ, ಫೆಬ್ರವರಿ 9 : ಸಮಾನಾಂತರ ಮಾತುಕತೆ ನಡೆಸುವ ಮೂಲಕ ನರೇಂದ್ರ ಮೋದಿಯವರು ರಫೇಲ್ ಡೀಲ್ ನಲ್ಲಿ ನೇರವಾಗಿ ಭಾಗಿಯಾಗಿದ್ದಾರೆ, 'ಚೌಕಿದಾರ್ ಚೋರ್ ಹೈ' ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಭಾರತೀಯ ಜನತಾ ಪಕ್ಷ '10 ಸುಳ್ಳು'ಗಳ ಪಟ್ಟಿ ಮಾಡಿದೆ.

ರಫೇಲ್ ಡೀಲ್ ಕುರಿತಂತೆ ರಾಹುಲ್ ಗಾಂಧಿ ಅವರು ಒಂದರ ಹಿಂದೊಂದರಂತೆ ಸುಳ್ಳು ಹೇಳುತ್ತ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿರುವ ಬಿಜೆಪಿ, ಟ್ವಿಟ್ಟರ್ ನಲ್ಲಿ ಒಂದರ ಹಿಂದೊಂದರಂತೆ 10 ಟ್ವೀಟ್ ಮಾಡಿದೆ. ಆದರೆ, ಈ ಸುಳ್ಳುಗಳ ಜಾಡು ಹಿಡಿಯುವುದು ಕಷ್ಟಕರ ಎಂದೂ ಬಿಜೆಪಿ ಹೇಳಿದೆ. ಲೋಕಸಭೆ ಚುನಾವಣೆಯ ಹತ್ತಿರ ಬರುತ್ತಿದ್ದಂತೆ ದಾಳಿ ಪ್ರತಿದಾಳಿಗಳು ಕೂಡ ತಾರಕಕ್ಕೇರುತ್ತಿವೆ.

ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಮತ್ತು ಬಿಜೆಪಿಯ ಮೇಲೆ ಆರೋಪ ಹೊರಿಸುತ್ತಲೇ ಇರುವ ರಾಹುಲ್ ಗಾಂಧಿ, ರಫೇಲ್ ಮಾತುಕತೆ ನಡೆಯುವಾಗ ಪ್ರಧಾನಿ ಕಚೇರಿ ಸಮಾನಾಂತರ ಮಾತುಕತೆ ನಡೆಸುತ್ತ, ಖರೀದಿ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿತ್ತು ಎಂದು ಮಾಧ್ಯಮವೊಂದರಲ್ಲಿ ವರದಿಯಾಗುತ್ತಿದ್ದಂತೆ ನರೇಂದ್ರ ಮೋದಿ ವಿರುದ್ಧ ಶುಕ್ರವಾರ ಮತ್ತೆ ವಾಗ್ದಾಳಿ ಮಾಡಿದ್ದರು.

ರಫೇಲ್ ಡೀಲ್ : ವಿರೋಧಿಗಳಿಗೆ ತಿರುಗುಬಾಣವಾದ ಸ್ಪಷ್ಟೀಕರಣ

ಆದರೆ, ಡೆಪ್ಯೂಟಿ ಸೆಕ್ರೆಟರಿ ಬರೆದ ಪತ್ರದ ಒಕ್ಕಣೆಗೂ, ಖರೀದಿ ಮೌಲ್ಯಕ್ಕೂ ಸಂಬಂಧವಿಲ್ಲ, ಆ ಒಕ್ಕಣೆ ಬರೆದವರಿಗೂ, ಖರೀದಿ ಮಾತುಕತೆ ಮಾಡುತ್ತಿದ್ದ ತಂಡಕ್ಕೂ ಸಂಬಂಧವಿಲ್ಲ ಎಂದು ವಾಯು ಸೇನೆಯ ಚೀಫ್ ಅಡ್ಮಿರಲ್ ಸ್ಪಷ್ಟೀಕರಣ ನೀಡುತ್ತಿದ್ದಂತೆ, ಬಿರುಗಾಳಿ ಕಾಂಗ್ರೆಸ್ಸಿನ ಮೇಲೆ ಬೀಸತೊಡಗಿತು. ಇದೀಗ ಬಿಜೆಪಿ ಮತ್ತೆ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದು, ರಾಹುಲ್ ಗಾಂಧಿ ಅವರು ಹೇಳಿದ್ದಾರೆಂದು 10 ಸುಳ್ಳುಗಳ ಪಟ್ಟಿ ಮಾಡಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 1

ಸುಳ್ಳು ನಂ. 1 : ಭಾರತದಿಂದ ರಫೇಲ್ ಡೀಲ್ ಕುದುರಿಸಲು ಡಸ್ಸಾಲ್ಟ್ ಕಂಪನಿ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಫ್ಸೆಟ್ ಪಾರ್ಟನರ್ ಅನ್ನಾಗಿ ಮಾಡಿಕೊಂಡಿತ್ತು ಎಂದು ಫ್ರೆಂಚ್ ಮಾಧ್ಯಮದಲ್ಲಿ ಬಂದ ವರದಿಯನ್ನು ರಾಹುಲ್ ಗಾಂಧಿ ತಿರುಚಿ ಹೇಳಿದ್ದರು.

ಸತ್ಯ ಸಂಗತಿ : ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಡಸಾಲ್ಟ್ ಕಂಪನಿಯ ಸಿಇಓ ಇಬ್ಬರೂ ಹೇಳಿರುವುದೇನೆಂದರೆ, ಆಫ್ಸೆಟ್ ಪಾರ್ಟನರ್ ಅನ್ನು ಆಯ್ಕೆ ಮಾಡುವಲ್ಲಿ ಭಾರತ ಸರಕಾರದ ಯಾವುದೇ ಕೈವಾಡ ಇರುವುದಿಲ್ಲ.

ರಫೇಲ್ ಹಸ್ತಕ್ಷೇಪ : ವರದಿ ಪ್ರಕಟಿಸಿದ ಪತ್ರಿಕೆಗೆ ನಿರ್ಮಲಾ ಸವಾಲು

ರಾಹುಲ್ ಹೇಳಿದ ಸುಳ್ಳು ನಂಬರ್ 2

ಸುಳ್ಳು ನಂ. 2 : ರಫೇಲ್ ಡೀಲ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸರ್ವೋಚ್ಚ ನ್ಯಾಯಾಲಯವೇ ಕಂಡುಕೊಂಡಿದೆ ಎಂದು ಸುಳ್ಳು ಭಾವನೆ ಬರುವಂತೆ ರಾಹುಲ್ ಪ್ರಯತ್ನಿಸಿದರು. ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆಯಲ್ಲಿದ್ದರೂ ಥರ್ಡ್ ಗ್ರೇಡ್ ಅಪಪ್ರಚಾರದಲ್ಲಿ ತೊಡಗಿದರು.

ಸತ್ಯ ಸಂಗತಿ : ಕಾಂಗ್ರೆಸ್ ಬೆಂಬಲಿಗರು ಹೂಡಿದ್ದ ಅರ್ಜಿಯನ್ನು ವಜಾ ಮಾಡಿದ ಸರ್ವೋಚ್ಚ ನ್ಯಾಯಾಲಯ, ಸರಕಾರ ಯಾವುದೇ ತಪ್ಪು ಎಸಗಿಲ್ಲ ಎಂದು ತೀರ್ಪು ನೀಡಿತು.

ಮೋದಿಜಿಗೆ ಸ್ಕಿಜೊಫ್ರೇನಿಯಾ ಇದೆಯೇ? ರಾಹುಲ್ ಗಾಂಧಿ ವ್ಯಂಗ್ಯದ ಪ್ರಶ್ನೆ

ರಾಹುಲ್ ಹೇಳಿದ ಸುಳ್ಳು ನಂಬರ್ 3

ಸುಳ್ಳು ನಂ. 3 : ರಫೇಲ್ ಡೀಲ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರನ್ನು ನರೇಂದ್ರ ಮೋದಿ ಸರಕಾರ ಶಿಕ್ಷಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಸತ್ಯ ಸಂಗತಿ : ಯಾವುದೇ ಶಿಕ್ಷೆ ನೀಡಿಲ್ಲ ಎಂದು ಆ ಹಿರಿಯ ಅಧಿಕಾರಿಯೇ ಮಾಧ್ಯಮದೊಂದಿಗೆ ಮಾತನಾಡಿ, ಸ್ಪಷ್ಟನೆ ನೀಡಿದ ರಾಹುಲ್ ಗಾಂಧಿ ಅವರ ಸುಳ್ಳನ್ನು ಬಯಲು ಮಾಡಿದರು.

ರಫೇಲ್ : ಸಮಾನಾಂತರ ಮಾತುಕತೆ ಬಗ್ಗೆ ರಕ್ಷಣಾ ಮಂತ್ರಾಲಯ ಆಕ್ಷೇಪ

ರಾಹುಲ್ ಹೇಳಿದ ಸುಳ್ಳು ನಂಬರ್ 4

ಸುಳ್ಳು ನಂ. 4 : ಫ್ರಾನ್ಸ್ ನ ಮಾಡಿ ರಾಷ್ಟ್ರಾಧ್ಯಕ್ಷರಾದ ಹೊಲ್ಲಾಂಡೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಹೇಳಿದ್ದರು ಮತ್ತು ರಿಲಯನ್ಸ್ ಕಂಪನಿಯನ್ನು ಆಫ್ಸೆಟ್ ಪಾರ್ಟನರ್ ಆಗಿ ಮಾಡಿಕೊಳ್ಳಬೇಕೆಂದು ಭಾರತ ಸರಕಾರ ಕೇಳಿಕೊಂಡಿತ್ತು.

ಸತ್ಯ ಸಂಗತಿ : ಆ ಎಲ್ಲ ಆರೋಪಗಳನ್ನು ಹೊಲ್ಲಾಂಡೆ ಅವರು ನಿರಾಕರಿಸಿದ್ದರು. ಫ್ರಾನ್ಸ್ ಸರಕಾರ ಕೂಡ ಈ ನಿಟ್ಟಿನಲ್ಲಿ ಸ್ಪಷ್ಟೀಕರಣ ನೀಡಿತ್ತು. ಹೊಲ್ಲಾಂಡೆ ಕೂಡ ನನಗಿದರ ಅರಿವಿಲ್ಲ, ಡಸ್ಸಾಲ್ಟ್ ಕಂಪನಿ ಮಾತ್ರ ಕಾಮೆಂಟ್ ಮಾಡಲು ಸಾಧ್ಯ ಎಂದು ಹೇಳಿದ್ದರು.

ರಾಹುಲ್ ಹೇಳಿದ ಸುಳ್ಳು ನಂಬರ್ 5

ಸುಳ್ಳು ನಂ. 5 : ಸಂಸತ್ತಿನಲ್ಲಿ ಕೂಡ ರಾಹುಲ್ ಗಾಂಧಿ ಸುಳ್ಳು ಹೇಳಿದ್ದರು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರು, ಖರೀದಿಯ ಮೌಲ್ಯ ಬಹಿರಂಗ ಪಡಿಸಬಾರದು ಎಂದು ಯಾವುದೇ ನಿಯಮ ಇಲ್ಲ ಎಂದು ನನಗೆ ಸ್ವತಃ ತಿಳಿಸಿದ್ದಾರೆ ಎಂದು ಸಂಸತ್ತಿನಲ್ಲಿ ರಾಹುಲ್ ಹೇಳಿದ್ದರು.

ಸತ್ಯ ಸಂಗತಿ : ರಾಹುಲ್ ಹೇಳಿದ ಸಂಗತಿಯನ್ನು ಅಲ್ಲಗಳೆದ ಫ್ರಾನ್ಸ್ ಸರಕಾರ ಅಧಿಕೃತ ಹೇಳಿಕೆ ನೀಡಿತ್ತು ಮತ್ತು ವರ್ಗೀಕೃತ ಮಾಹಿತಿಯನ್ನು ಹಂಚಿಕೊಳ್ಳಲು ಎರಡರ ನಡುವಿನ ಒಪ್ಪಂದ ನಿಷೇಧಿಸಿದೆ ಎಂದು ಸ್ಪಷ್ಟೀಕರಿಸಿತ್ತು.

ರಾಹುಲ್ ಹೇಳಿದ ಸುಳ್ಳು ನಂಬರ್ 6

ಸುಳ್ಳು ನಂ. 6 : ಯುಪಿಎ ಸರಕಾರ ರಫೇಲ್ ಡೀಲ್ ಕುದುರಿಸಿದಾಗ ನಿಗದಿಪಡಿಸಿದ್ದ ಯುದ್ಧ ವಿಮಾನದ ಮೌಲ್ಯವನ್ನು ಬೇರೆಬೇರೆ ಸ್ಥಳಗಳಲ್ಲಿ ಬೇರೆಬೇರೆ ರೀತಿ ಹೇಳಿದ್ದರು.

ಸಂಸತ್ತಿನಲ್ಲಿ 520 ಕೋಟಿ ರು.

ಕರ್ನಾಟಕದಲ್ಲಿ 526 ಕೋಟಿ ರು.

ರಾಜಸ್ಥಾನದಲ್ಲಿ 540 ಕೋಟಿ ರು.

ದೆಹಲಿಯಲ್ಲಿ 700 ಕೋಟಿ ರು.

ವಿಶ್ಲೇಷಣೆ : ಸುಳ್ಳು ಹೇಳಿದ್ದಕ್ಕೆ ರಾಹುಲ್ ಗಾಂಧಿಗೆ ನೊಬೆಲ್ ಪ್ರಶಸ್ತಿ ನೀಡಬೇಕು.

ರಾಹುಲ್ ಹೇಳಿದ ಸುಳ್ಳು ನಂಬರ್ 7

ಸುಳ್ಳು ನಂ. 7 : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ರಫೇಲ್ ಯುದ್ಧ ವಿಮಾನ ಖರೀದಿಗೆ ಇದ್ದ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗಿತ್ತು ಎಂದು ರಾಹುಲ್ ಗಾಂಧಿ ಸುಳ್ಳು ಹೇಳಿದ್ದರು.

ಸತ್ಯ ಸಂಗತಿ : ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ : ಖರೀದಿ ಪ್ರಕ್ರಿಯೆಯನ್ನು ಸಂಶಯಿಸುವಂಥ ಯಾವುದೇ ಘಟನೆ ನಡೆದಿಲ್ಲದಿರುವ ಬಗ್ಗೆ ನಮಗೆ ಸಮಾಧಾನವಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 8

ಸುಳ್ಳು ನಂ. 8 : ಯುಪಿಎ ಸರಕಾರ ಇದ್ದಾಗ ರಫೇಲ್ ಯುದ್ಧ ವಿಮಾನವೊಂದಕ್ಕೆ 526/520/540 ಕೋಟಿ ರುಪಾಯಿ (ಒಂದೊಂದು ಸ್ಥಳದಲ್ಲಿ ಒಂದೊಂದು ಬೆಲೆ) ನಿಗದಿಪಡಿಸಲಾಗಿತ್ತು. ಆದರೆ, ಎನ್‌ಡಿಎ ಸರಕಾರ ಜೆಟ್ ವಿಮಾನವೊಂದಕ್ಕೆ 1,600 ರು. ನಿಗದಿಪಡಿಸಿತ್ತು.

ವಿಶ್ಲೇಷಣೆ : ಸುಳ್ಳುಗಾರ ಸೇಬು ಮತ್ತು ಕಿತ್ತಳೆಯನ್ನು ತುಲನೆ ಮಾಡುತ್ತಿದ್ದಾನೆ. ಎನ್‌ಡಿಎ ನಿಗದಿಪಡಿಸಿದ ಬೆಲೆ ಸಂಪೂರ್ಣ ಸಿದ್ಧವಾಗಿರುವ ಯುದ್ಧ ವಿಮಾನದ ಪ್ಯಾಕೇಜ್ (ಶಸ್ತ್ರಾಸ್ತ್ರ, ಬಿಡಿಭಾಗ, ಇನ್‌ಫ್ರಾಸ್ಟ್ರಕ್ಚರ್, ಲಾಜಿಸ್ಟಿಕಲ್ ಸಪೋರ್ಟ್ ಇತ್ಯಾದಿ), ರಫೇಲ್ ಯುದ್ಧ ವಿಮಾನ ಸೇರಿದಂತೆ. ಎನ್‌ಡಿಎ ನಿಗದಿಪಡಿಸಿದ ಬೆಲೆ ಯುಪಿಎ ನಿಗದಿಪಡಿಸಿದ್ದಕ್ಕಿಂತ ಶೇ.9ರಷ್ಟು ಕಡಿಮೆಯಿದೆ. ಇಂಥ ವಾದವನ್ನು ಶಾಲೆ ಬಾಲಕ ಕೂಡ ಮಾಡಲ್ಲ. ಆದರೆ, ರಾಹುಲ್ ಅಂದ್ರೆ ರಾಹುಲ್!

ರಾಹುಲ್ ಹೇಳಿದ ಸುಳ್ಳು ನಂಬರ್ 9

ಸುಳ್ಳು ನಂ. 9 : 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ನಿರ್ಧಾರವನ್ನು ರಾಜಕೀಯ ಲಾಭಗಳಿಗಾಗಿ ಮಾಡಲಾಯಿತು. ಇದರಿಂದ ವಾಯು ಸೇನೆಗೆ ಭಾರೀ ಹಾನಿಯುಂಟಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಸತ್ಯ ಸಂಗತಿ : ಯಾವುದೇ ಪರಿಸ್ಥಿತಿಯಲ್ಲಿಯೂ ಭಾರತದ ರಕ್ಷಣಾ ಸಿದ್ಧತೆಯನ್ನು ಗಮನದಲ್ಲಿರಿಸಿಕೊಂಡು ಭಾರತ ಸರಕಾರದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದರಿಂದ ಭಾರತೀಯ ವಾಯು ಸೇನೆ ಸಂತುಷ್ಟಗೊಂಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಹುಲ್ ಹೇಳಿದ ಸುಳ್ಳು ನಂಬರ್ 10

ಸುಳ್ಳು ನಂ. 10 : ನಿನ್ನೆ (ಫೆಬ್ರವರಿ 8ರಂದು) ರಾಹುಲ್ ಗಾಂಧಿಯವರು ದಿ ಹಿಂದೂ ಎಂಬ ಮತ್ತೊಬ್ಬ ಸುಳ್ಳುಗಾರನನ್ನು ಕಂಡುಕೊಂಡಿದ್ದಾರೆ. ಬೇಕಾದ ಹಾಗೆ ಕ್ರಾಪ್ (ತುಂಡು) ಮಾಡಿದ ದಾಖಲೆಯನ್ನು ಹಿಡಿದುಕೊಂಡು ಮತ್ತೆ ಸುಳ್ಳು ಹೇಳಲು ರಾಹುಲ್ ಗಾಂಧಿ ಯತ್ನಿಸಿದ್ದಾರೆ.

ಸತ್ಯ ಸಂಗತಿ : ಕಾಂಗ್ರೆಸ್ಸಿಗರು ಫೋಟೋಶಾಪರ್ಸ್ ಎಂದು ಎಲ್ಲರಿಗೂ ತಿಳಿದಿತ್ತು. ಆದರೆ, ಸತ್ಯವೇ ಜಯಗಳಿಸುತ್ತದೆ ಎಂಬ ಪಾಠವನ್ನು ಅವರು ಕಲಿತಿದ್ದಾರೆ. ರಾಹುಲ್ ಅವರು ವಾಯುಸೇನೆಯನ್ನೂ ಅವಮಾನಿಸಿದ್ದಾರೆ. ಇದಕ್ಕಾಗಿ ಅವರು ವಾಯುಸೇನೆಯ ಕ್ಷಮೆ ಕೋರಬೇಕು. ಆದರೆ, ಅವರ ಬಗ್ಗೆ ನಮಗೆ ಅನುಕಂಪವಿದೆ. ನೈತಿಕತೆ ಇರುವ ಮನುಷ್ಯ ಇಷ್ಟು ಸುಳ್ಳು ಹೇಳಲು ಹೇಗೆ ಸಾಧ್ಯ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP has lashout out at Rahul Gandhi making the list of 10 lies he has lied on Rafale deal. It has posted series of tweets rebutting all the allegations made by Rahul Gandhi point by point.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more