ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ನೋಡಿ, ಅತ್ಯಾಚಾರಿಗಳನ್ನು ಹಿಡಿದುಕೊಡಿ

|
Google Oneindia Kannada News

ಹೈದ್ರಾಬಾದ್, ಫೆ.6 : ಕಾಮುಕರಿಗೆ ಶಿಕ್ಷೆ ನೀಡಲು ಹೊರಟಿರುವ ಸಾಮಾಜಿಕ ಹೋರಾಟಗಾರ್ತಿ ಸುನೀತಾ ಕೃಷ್ಣನ್‌ ಅವರ ಕಾರಿನ ಮೇಲೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿರುವ ಎರಡು ವಿಡಿಯೋಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದುದನ್ನು ಗಮನಿಸಿದ ಸುನೀತಾ ಅದನ್ನು ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ನಾಗರಿಕರ ಸಹಕಾರ ಕೋರಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಈ ಬಗ್ಗೆ ಸಂದರ್ಶನ ನೀಡಿದ ನಂತರ ಆಕೆಯ ಕಾರಿನ ಮೇಲೂ ದಾಳಿಯಾಗಿದೆ.['ರೇಪ್ ಮಾಡುವ ಮುನ್ನ ಈಕೆಯ ವಿಡಿಯೋ ನೋಡಿ']

suneeta

ವಿಡಿಯೋದಲ್ಲಿ ಕಂಡುಬರುವ ಐವರು ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿರುವ ಸುನೀತಾ ಕೃಷ್ಣನ್‌ ಅವರು "ಪ್ರಜ್ವಲಾ' ಎಂಬ ಮಹಿಳಾ ಕಳ್ಳಸಾಗಣೆ ವಿರೋಧಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ನನಗೆ ಸಿಕ್ಕ ವಿಡಿಯೋಗಳು ಎಂಟು ನಿಮಿಷ ಮತ್ತು ನಾಲ್ಕು ನಿಮಿಷಗಳದ್ದಾಗಿದ್ದವು. ಇದು ನಿಜವಾಗಿ ನಡೆದ ಅತ್ಯಾಚಾರ ಎಂಬುದು ಮನದಟ್ಟಾಗಿತ್ತು. ಹಾಗಾಗಿ ಮಹಿಳೆಯ ಮಾನ ಉಳಿಸಲು ಅತ್ಯಾಚಾರಿಗಳ ಚಿತ್ರ ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.[ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]

ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂಬ ಉದ್ದೇಶದಿಂದ #ShameTheRapistCampaign ಆರಂಭಿಸಿದೆ. ನೀವೀಗ ಅತ್ಯಾಚಾರಿಗಳನ್ನು ಗುರುತಿಸಬಹುದು ಮತ್ತು ಅವರನ್ನು ಹಿಡಿದು ಕಾನೂನಿನ ಕೈಗಳಿಗೆ ಒಪ್ಪಿಸುವ ಅಭಿಯಾನಕ್ಕೆ ಕೈಜೋಡಿಸಬಹುದು ಎಂದು ಸುನೀತಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಅತ್ಯಾಚಾರಿಗಳು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಹು ಅಪಾಯಕಾರಿಗಳು. ಇವರನ್ನು ಆದಷ್ಟು ಬೇಗನೆ ಹಿಡಿಯದಿದ್ದರೆ ಇಡಿಯ ಸಮಾಜಕ್ಕೇ ಇವರಿಂದ ಅಪಾಯ ಕಾದಿದೆ. ಆದುದರಿಂದ ಇವರನ್ನು ಆದಷ್ಟು ಬೇಗನೆ ಹಿಡಿಯಲು ಎಲ್ಲರೂ ಸಹಕರಿಸಬೇಕು ಎಂದು ಸುನೀತಾ ಕೋರಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರನ್ನು ಭೇಟಿಯಾಗಿ ಸೂಕ್ತ ನೆರವುಮ ಕೇಳಲಿದ್ದೇನೆ. ಒಟ್ಟಿನಲ್ಲಿ ಸಮಾಜಕ್ಕೆ ಕಂಟಕಪ್ರಾಯರಾಗಿರುವ ಅತ್ಯಾಚಾರಿಗಳನ್ನು ಹಿಡಿದು ಉಗ್ರ ಶಿಕ್ಷೆ ನೀಡಬೇಕಾಗಿದೆ ಎಂದು ಸನೀತಾ ಒತ್ತಾಯಿಸಿದ್ದಾರೆ.

English summary
Search on youtube and you would find these taped crimes there too. However, initially these two separate videos of men gangraping women became viral on popular messaging service WhatsApp. To the horror of the viewers, most of these men were found smiling throughout the heinous crime, posing for the camera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X