• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತಿ ಹೆಚ್ಚು ಚಳಿ ಇರುವ ದೇಶದ 10 ಪ್ರಮುಖ ನಗರಗಳು

|

ನವದೆಹಲಿ, ಜನವರಿ 2: ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗೆ ಶೀತಗಾಳಿ ಬೀಸುತ್ತಿದೆ. ರಾಜ್ಯದಲ್ಲೂ ಚಳಿ ಆರಂಭವಾಗಿದೆ. ಆದರೆ ಕಳೆದ ಎರಡು ದಿನಗಳಿಂದ ಚೆನ್ನೈನಲ್ಲಿ ಮಳೆಯಾಗುತ್ತಿರುವುದರಿಂದ ರಾಜ್ಯದಲ್ಲಿ ಚಳಿ ಕಡಿಮೆಯಾಗಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.

ಚೆನ್ನೈನಲ್ಲಿ ಧಾರಾಕಾರ ಮಳೆ: ಕರ್ನಾಟಕದಲ್ಲೂ ಸಾಧ್ಯತೆ

ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಕೊಂಚ ಹೆಚ್ಚಿದೆ. ಆದರೆ ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವೆಡೆ ಆಗಾಗ ಮಳೆಯಾಗುತ್ತಿರುವ ಕಾರಣ ಅಷ್ಟಾಗಿ ಕೊರೆಯುವ ಚಳಿ ಇದುವರೆಗೂ ಕಾಣಿಸಿಕೊಂಡಿಲ್ಲ. ಲುಧಿಯಾನದಲ್ಲಿ ಅತಿ ಕಡಿಮೆ ಅಂದರೆ 1.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.

ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 13.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

-ಲುಧಿಯಾನ-ಪಂಜಾಬ್- 1.1 ಡಿಗ್ರಿ ಸೆಲ್ಸಿಯಸ್

-ನರ್ನಾಲ್-ಹರ್ಯಾಣ-1.3 ಡಿಗ್ರಿ ಸೆಲ್ಸಿಯಸ್

-ಶ್ರೀ ಗಂಗಾನಗರ-ರಾಜಸ್ಥಾನ-2.2 ಡಿಗ್ರಿ ಸೆಲ್ಸಿಯಸ್

-ಅಮೃತಸರ-ಪಂಜಾಬ್-3.0 ಡಿಗ್ರಿ ಸೆಲ್ಸಿಯಸ್

-ಹಿಸಾರ್-ಹರ್ಯಾಣ-3.0 ಡಿಗ್ರಿ ಸೆಲ್ಸಿಯಸ್

-ಪಟಿಯಾಲಾ-ಪಂಜಾಬ್-3.0 ಡಿಗ್ರಿಸೆಲ್ಸಿಯಸ್

-ಜೈಸಲ್ಮರ್-ರಾಜಸ್ಥಾನ-3.02 ಡಿಗ್ರಿ ಸೆಲ್ಸಿಯಸ್

-ನವದೆಹಲಿ-ನವದೆಹಲಿ-4.0 ಡಿಗ್ರಿ ಸೆಲ್ಸಿಯಸ್

-ಬಿಕಾನೇರ್-ರಾಜಸ್ಥಾನ-4.2 ಡಿಗ್ರಿ ಸೆಲ್ಸಿಯಸ್

-ಚುರು-ರಾಜಸ್ಥಾನ-4.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

English summary
The temperatures have dropped further over most parts of India, right from Indo-Gangetic plains up to the central parts of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X