ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಲೋಕ ಸೇವಾ ಪರೀಕ್ಷೆ ಬರೆಯಲಿದ್ದಾರೆ ಮಂಗಳಮುಖಿಯರು

By Sachhidananda Acharya
|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 25: ಕೇರಳ ಲೋಕ ಸೇವಾ ಆಯೋಗದ ಪರೀಕ್ಷೆ ಬರೆಯಲು ತೃತೀಯ ಲಿಂಗಿಗಳಿಗೆ ಅವಕಾಶ ನೀಡುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಮಹಿಳಾ ವರ್ಗದಲ್ಲಿ ಪರೀಕ್ಷೆ ಬರೆಯಲು ಮಂಗಳಮುಖಿಯರಿಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಈ ಹಿಂದೆ ಲೋಕ ಸೇವಾ ಆಯೋಗ (ಪಿಎಸ್ ಸಿ) ಪರೀಕ್ಷೆಯ ಅರ್ಜಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಕಾಲಂನಡಿ ಅವಕಾಶ ನೀಡಲಾಗುವುದು ಎಂದು ವರದಿಯಾಗಿತ್ತು. ಮತ್ತು ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರಕಾರದ ನಿರ್ಧಾರವನ್ನುಆಯೋಗ ಎದುರು ನೋಡುತ್ತಿತ್ತು.

Let transgender write PSC exams under female category, said Kerala HC

ಇದೀಗ ಹೈಕೋರ್ಟ್ ಮಹಿಳಾ ವಿಭಾಗದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ.

2014ರಲ್ಲಿ ಸುಪ್ರಿಂ ಕೋರ್ಟ್ ಮೀಸಲಾತಿಯನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಂಗಳಮುಖಿಯರಿಗೆ ವಿಸ್ತರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಅದಾದ ಬಳಿಕ 2015ರಲ್ಲಿ ಕೇರಳಲ್ಲಿ ತೃತೀಯ ಲಿಂಗಿಗಳಿಗೆ ಪುರುಷ ಮತ್ತು ಮಹಿಳೆಯರ ಜತೆ ಮೂರನೇ ಲಿಂಗವಾಗಿ ಅಧಿಕೃತ ಮಾನ್ಯತೆ ನೀಡಲಾಗಿತ್ತು.

ಇದಲ್ಲದೆ ಮಂಗಳಮುಖಿಯರಿಗಾಗಿ ಕ್ರೀಡಾಕೂಟ, ಫ್ಯಾಷನ್ ಷೋಗಳನ್ನೂ ಹಮ್ಮಿಕೊಂಡು ಕೇರಳ ದೇಶದ ಉಳಿದೆಲ್ಲಾ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿತ್ತು. ಇದೀಗ ಆಡಳಿತ ಸೇವೆಗೆ ತೃತೀಯ ಲಿಂಗಿಗಳು ಕಾಲಿಡಲು ಅವಕಾಶ ನೀಡಿದ್ದು ಉಳಿದ ರಾಜ್ಯಗಳಿಗೆ ಮಾದರಿಯಾಗಿದೆ.

English summary
Kerala High Court on Wednesday issued a directive to let transgender write 'Kerala Public Service Commission (KPSC)' examinations considering them under female category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X