ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ್ಮೀಕಾಂತ ಪರ್ಸೇಕರ್ ಗೋವಾ ನೂತನ ಮುಖ್ಯಮಂತ್ರಿ

By Kiran B Hegde
|
Google Oneindia Kannada News

ಗೋವಾ, ನ. 8: ಗೋವಾ ಮುಖ್ಯಮಂತ್ರಿಯಾಗಿ ಲಕ್ಷ್ಮೀಕಾಂತ ಪರ್ಸೇಕರ್ ಶನಿವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ ಪ್ರಮಾಣವಚನ ಬೋಧಿಸಿದರು.

ದೇಶದ ರಕ್ಷಣಾ ಸಚಿವ ಸ್ಥಾನ ವಹಿಸಿಕೊಳ್ಳಲು ಮನೋಹರ ಪರಿಕ್ಕರ್ ಅವರು ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಕ್ಕರ್ ರಾಜಿನಾಮೆ ನೀಡಿದ್ದರು. ಆದ್ದರಿಂದ ಮುಖ್ಯಮಂತ್ರಿ ಗಾದಿಗಾಗಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು.

laxmikanth-parsekar

ಬಗೆಹರಿದ ಬಿಕ್ಕಟ್ಟು: ಸ್ಪೀಕರ್ ಆಗಿರುವ ರಾಜೇಂದ್ರ ಅರಳೇಕರ್ ಹಾಗೂ ಕ್ರಿಶ್ಚಿಯನ್ ಕ್ಯಾಥೋಲಿಕ್ ಸಮುದಾಯಕ್ಕೆ ಸೇರಿರುವ ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದರು. ತಮಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಪಕ್ಷ ಬಿಡುವುದಾಗಿಯೂ ಪ್ರಾನ್ಸಿಸ್ ಡಿಸೋಜಾ ಎಚ್ಚರಿಕೆ ನೀಡಿದ್ದರು. ಹೀಗಾಗಿ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಆದ್ದರಿಂದ ಈ ಕುರಿತು ಚರ್ಚಿಸಲು ಸಭೆ ಸೇರಿದ್ದ ಪಕ್ಷದ ಮುಖಂಡರು ಲಕ್ಷ್ಮೀಕಾಂತ ಪರ್ಸೇಕರ್ ಹೆಸರನ್ನು ಅಂತಿಮಗೊಳಿಸಿದರು. ಇದುವರೆಗೆ ರಾಜ್ಯದ ನಂ. 2 ಸ್ಥಾನದಲ್ಲಿದ್ದ ಫ್ರಾನ್ಸಿಸ್ ಡಿಸೋಜಾ ಮುಂದೇನು ಮಾಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

58 ವರ್ಷ ವಯಸ್ಸಿನ ಲಕ್ಷ್ಮೀಕಾಂತ ಪರ್ಸೇಕರ್ ಗೋವಾ ರಾಜ್ಯದ ಮಾಂಡ್ರೆಮ್ ವಿಧಾನಸಭೆ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.

English summary
Laxmikanth Parsekar got oath as cm of Goa state. Speaker Rajendra Arlekar and Francis d'souza were competiters for cm post. Laxmikanth Parsekar was serving as health minister in Manohar Parikkar lead government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X