ದೆಹಲಿಯಿಂದ ಕಾಶ್ಮೀರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್: ಮೋದಿ ನವರಾತ್ರಿ ಗಿಫ್ಟ್‌

ನವದೆಹಲಿ, ಅಕ್ಟೋಬರ್ 3: ಕಾಶ್ಮೀರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನವರಾತ್ರಿ ಉಡುಗೊರೆ ನೀಡಿದ್ದಾರೆ.

ದೆಹಲಿ ಮತ್ತು ಕಾಶ್ಮೀರದ ಕತ್ರಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಗುರುವಾರ ಹಸಿರು ನಿಶಾನೆ ತೋರಿದರು.

370ನೇ ವಿಧಿ ರದ್ದು ಬಳಿಕ ಪೂರ್ವದಲ್ಲಿ ಕಾಶ್ಮೀರ ಪ್ರಾಂತ್ಯದಲ್ಲಿ ಅಭಿವೃದ್ಧಿಗೆ ಅಡ್ಡಿ-ಆತಂಕಗಳಿದ್ದವು ಈಗ ಅವು ಅದ್ಯಾವುದೂ ಇಲ್ಲದೆ ಜಮ್ಮು-ಕಾಶ್ಮೀರ ಪ್ರಗತಿಗೆ ಉತ್ತಮ ಮಾರ್ಗವಾಗಿದೆ. ಇನ್ನು ಹತ್ತು ವರ್ಷಗಳಲ್ಲಿ ಕಣಿವೆ ಪ್ರಾಂತ್ಯ ಭಾರತ ಅತ್ಯಂತ ಅಭಿವೃದ್ಧಿಯ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಗೃಹಸಚಿವರು ಹೇಳಿದರು.

ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆಯನ್ನು ಸಮರ್ಪಿಸಿದ ನಂತರ ಮಾತನಾಡಿದ ಅಮಿತ್ ಶಾ ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದರು.

ವಂದೇ ಭಾರತ್ ಎಕ್ಸ್‍ಪ್ರೆಕ್ಸ್ ರಾಜಧಾನಿ ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 2ಗಂಟೆಗೆ ಕತ್ರಾವನ್ನು ತಲುಪಲಿದೆ. ಈ ಮಹ್ವತದ ರೈಲು ಮಾರ್ಗವು ಧಾರ್ಮಿಕ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.

ಈ ರೈಲಿಗೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್, ಸಾರ್ವಜನಿಕ ಕುಂದು ಕೊರತೆ ಖಾತೆ ಸಚಿವ ಜೀತೇಂದ್ರಸಿಂಗ್ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ ಮತ್ತು ರೈಲ್ವೆ ಇಲಾಖೆ ಉನ್ನತಾಧಿಕಾರಿಗಳು ಹಾಜರಿದ್ದರು.

ವಂದೇ ಭಾರತ್ ರೈಲಿನ ವಿಶೇಷತೆಯೇನು?

ವಂದೇ ಭಾರತ್ ರೈಲಿನ ವಿಶೇಷತೆಯೇನು?

ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್​ ಚಾರ್ಜಿಂಗ್ ಆಯ್ಕೆಗಳು ಇದರಲ್ಲಿದೆ.

ಸಾಮಾನ್ಯ ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ವಂದೇ ಭಾರತ್ ಎಕ್ಸ್​ಪ್ರೆಸ್​ನಲ್ಲಿ 52 ಸುಖಾಸನ ಸೀಟುಗಳನ್ನು ನೀಡಲಾಗಿದೆ. ಅದೇ ರೀತಿ ಟ್ರೈನ್​ನ ನಡುವೆ ಎರಡು ಎಕ್ಸಿಕ್ಯೂಟಿವ್​ ಕಂಪಾರ್ಟ್‌ಮೆಂಟ್​ ಇರಲಿದೆ.

ವಿದೇಶಗಳಿಂದ ಬೇಡಿಕೆ

ವಿದೇಶಗಳಿಂದ ಬೇಡಿಕೆ

ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಟ್ರೈನ್​ ಅನ್ನು ಖರೀದಿಸಲು ಪೆರು, ಇಂಡೋನೇಷ್ಯಾ, ಸಿಂಗಾಪುರ್, ಮಲೇಷ್ಯಾ ಮತ್ತು ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಆಸಕ್ತಿವಹಿಸಿದೆ ಎಂದು ರೈಲ್ವೇ ಮಂಡಳಿ ಹೇಳಿದೆ. 97 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಅಗ್ಗದ ರೈಲು ಎಂದು ಟ್ರೈನ್ 18 ವಿಶ್ವದ ಗಮನ ಸೆಳೆದಿತ್ತು.

ದೆಹಲಿ-ಕತ್ರಾ ರೈಲಿನಲ್ಲಿ ಏನೇನು ಸೌಲಭ್ಯಗಳಿವೆ

ದೆಹಲಿ-ಕತ್ರಾ ರೈಲಿನಲ್ಲಿ ಏನೇನು ಸೌಲಭ್ಯಗಳಿವೆ

ದೆಹಲಿ-ಕತ್ರಾ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ವೈ-ಫೈ, ಬಯೋ ವ್ಯಾಕ್ಯೂಮ್ ಟಾಯ್ಲೆಟ್‌ಗಳು, ಸಿಸಿಟಿವಿ, ದೆಹಲಿ ವಾರಣಾಸಿ ನಡುವೆ ಫೆಬ್ರವರಿಯಲ್ಲಿ ರೈಲು ಸಂಚಾರ ಮೊದಲ ಬಾರಿಗೆ ಆರಂಭವಾಗಿತ್ತು. ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಜಮ್ಮು ಕಾಶ್ಮೀರದ ಜನತೆಗೆ ಮೋದಿ ನವರಾತ್ರಿ ಉಡುಗೊರೆ

ಜಮ್ಮು ಕಾಶ್ಮೀರದ ಜನತೆಗೆ ಮೋದಿ ನವರಾತ್ರಿ ಉಡುಗೊರೆ

ವಂದೇ ಭಾರತ್ ಎಕ್ಸ್‌ಪ್ರೆಸ್ ಜಮ್ಮು ಕಾಶ್ಮೀರದ ಜನತೆಗೆ ನೀಡುತ್ತಿರುವ ನವರಾತ್ರಿ ಉಡುಗೊರೆ, ಮಾ ವೈಷ್ಣೋದೇವಿ ಭಕ್ತರಿಗೆ ನೀಡಿರುವ ಕ=ಉಡುಗೊರೆ ಇದಾಗಿದೆ. ದೆಹಲಿಯಿಂದ ಕತ್ರಾದವರೆಗೆ ಇದು ಚಲಿಸಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+