Get Updates
Get notified of breaking news, exclusive insights, and must-see stories!

ಈಶಾನ್ಯ ರಾಜ್ಯಗಳ ಮೇಲೆ ಲಷ್ಕರ್ ಕಣ್ಣು: ಅಪಾಯಕಾರಿ ಯೋಜನೆ ಬಯಲು

ನವದೆಹಲಿ, ಜುಲೈ 25: ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಕದಡುವ ಅಪಾಯಕಾರಿ ಯೋಜನೆಯೊಂದಕ್ಕೆ ಲಷ್ಕರ್ ಇ ತೊಯ್ಬಾ ಸಿದ್ಧತೆ ನಡೆಸುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ಗುಪ್ತಚರ ದಳ ನೀಡಿದೆ.

ಭಾರತೀಯ ಗುಪ್ತಚರ ಇಲಾಖೆಗೆ ಸಿಕ್ಕ ವಿಡಿಯೋ ಒಂದರಲ್ಲಿ, ಸಿಕ್ಕಿಂ ಮತ್ತು ಡಾರ್ಜಿಲಿಂಗ್ ನಲ್ಲಿ ಶಾಂತಿ ಕದಡುವ ಕೆಲಸವನ್ನು ಲಷ್ಕರ್ ಇ ತೊಯ್ಬಾ ನಾಯಕ ಅಮಿರ್ ಹಜ್ಮಾ ತನ್ನ ಸಹಚರರಿಗೆ ನೀಡಿದ್ದು ದಾಖಲಾಗಿದೆ.

Laskar e Taiba's deadly plan in north east revealed

ಈ ವಿಡಿಯೋವನ್ನು ಜುಲೈ 19 ರಂದು ಲಾಹೋರ್ ನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ದೋಕ್ಲಾಂ ಕುರಿತೂ ಹಜ್ಮಾ ಮಾತನಾಡಿದ್ದಾನೆ. ಅಷ್ಟೇ ಅಲ್ಲ, ತಾವು ಸಿಕ್ಕಿಂ, ಭೂತಾನ್ ಮತ್ತು ದಾರ್ಜಿಲಿಂಗ್ ನಲ್ಲಿ ದಾಳಿ ನಡೆಸುವುದಾಗಿ ಹೇಳಿಕೊಂಡಿದ್ದಾನೆ.

ಬಾಂಗ್ಲಾದೇಶಕ್ಕಾಗಿ ನಾವು ಈಶಾನ್ಯದಲ್ಲಿರುವ ಏಳು ರಾಜ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದೂ ಹೇಳಿದ್ದಾನೆ. 2012, 26/11 ಬಾಂಬೆ ಸ್ಫೋಟದಲ್ಲೂ ಹಜ್ಮಾ ಹೆಸರು ಕೇಳಿಂದಿತ್ತು. ಸದ್ಯಕ್ಕೆ ಲಷ್ಕರ್ ನ ಕಮಾಂಡರ್ ಆಗಿ ಬಡ್ತಿ ಪಡೆದಿರುವ ಹಜ್ಮಾ ಈಶಾನ್ಯ ರಾಜ್ಯಗಳ ಮೇಲೆ ಕಣ್ಣಿಟ್ಟಿರುವುದು ಭಾರತ ಎಚ್ಚರಿಕೆಯಿಂದಿರಬೇಕೆಂಬ ಸೂಚನೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+